ಬೆಂಗಳೂರು : ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ಮಕರ ರಾಶಿಯಲ್ಲಿರುವ ಸೂರ್ಯ ಈ ತಿಂಗಳಲ್ಲಿ ಕುಂಭ ರಾಶಿಗೆ ಕಾಲಿಡುತ್ತಿದ್ದಾನೆ. ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ಶುಕ್ರ ಮತ್ತು ಸೂರ್ಯನ ಸಂಯೋಗವಾಗಲಿದೆ. ಏಕೆಂದರೆ ಶುಕ್ರನು ಕುಂಭ ರಾಶಿಯಲ್ಲಿಯೂ ಇರುತ್ತಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸಂಪತ್ತು ಮತ್ತು ಐಷಾರಾಮಿ ಪ್ರತೀಕವಾಗಿರುವ ಶುಕ್ರ ಮತ್ತು ಯಶಸ್ಸಿನ ಗ್ರಹವಾದ ಸೂರ್ಯನ ಸಂಯೋಜನೆಯು ಕೆಲವು ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಯವರ ಜೀವನ ಸುಖ ಸಂತೋಷದಿಂದ ತುಂಬಿಕೊಳ್ಳುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ದೊಡ್ಡ ಮಟ್ಟದ ಪ್ರಗತಿಯನ್ನು ಪಡೆಯುವ ಅವಕಾಶಗಳು ಎದುರಾಗಲಿವೆ. ಹಾಗಿದ್ದರೆ ಸೂರ್ಯ-ಶುಕ್ರ ಸಂಯೋಜನೆಯು ಯಾವ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ ನೋಡೋಣ.
ಮೇಷ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರು ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆರ್ಥಿಕವಾಗಿ, ಈ ಸಮಯವು ಉತ್ತಮವಾಗಿರಲಿದೆ. ಅಗತ್ಯವಿದ್ದಾಗ ಯಾವ ಮೂಲದಿಂದಾದರೂ ಹಣ ಬಂದು ಕೈ ಸೇರುತ್ತದೆ. ಕೆಲಸಕ್ಕೆ ಹೊಸ ಅವಕಾಶಗಳು ಸಿಗಲಿವೆ.
ವೃಷಭ ರಾಶಿ : ವೃಷಭ ರಾಶಿಯವರಿಗೆ ಸೂರ್ಯ ಮತ್ತು ಶುಕ್ರರ ಸಂಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಹೊಸ ಉದ್ಯೋಗದ ಆಫರ್ ಪಡೆಯಬಹುದು. ಇಲ್ಲಿಯವರೆಗೆ ನಿರೀಕ್ಷೆಯಲ್ಲಿದ್ದ ದೊಡ್ಡ ಪೋಸ್ಟ್ ತಾನಾಗಿಯೇ ಒಲಿದು ಬರಲಿದೆ. ಆದಾಯ ಹೆಚ್ಚಲಿದೆ. ಗೌರವ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ.
ಮಿಥುನ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮಿಥುನ ರಾಶಿಯವರಿಗೆ ಸಂಪತ್ತನ್ನು ತಂದು ಕೊಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಬೆನ್ನಿಗೆ ನಿಲ್ಲುತ್ತದೆ. ಇಲ್ಲಿಯವರೆಗೆ ಪೂರ್ಣವಾಗದೆ ನಿಂತಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಬೆಳೆಸಬೇಕಾಗಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)