Trending News: ಪ್ರೇಮದ ಹೆಸರಲ್ಲಿ ಗುಟ್ಟಾಗಿ ಭೇಟಿ ಮಾಡುವುದು, ಬಳಿಕ ವಿಚಾರ ಮನೆಯವರಿಗೆ ತಿಳಿದು ಅವರಿಬ್ಬರಿಗೆ ಮದುವೆ ಮಾಡಿಸುವುದು, ಅಥವಾ ಮನೆಯಲ್ಲಿ ಒಪ್ಪಿಗೆ ಇಲ್ಲ ಎಂದು ಪ್ರೀತಿಸಿದವರ ಜೊತೆ ಓಡಿ ಹೋಗುವುದು ಇಂತಹ ಅನೇಕ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಆದರೆ ಇಲ್ಲೊಂದು ಪ್ರಕರಣ ಮಾತ್ರ ಕೊಂಚ ವಿಭಿನ್ನವಾಗಿದ್ದು, ಏನಾಗಿದೆ ಎಂಬುದನ್ನು ನೋಡಿಕೊಂಡು ಬರೋಣ.
ಇದನ್ನೂ ಓದಿ: 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ 16 ವಯಸ್ಸಿನ ಬಾಲಕ
ಇತ್ತೀಚಿಗೆ ಭಾಗಲ್ಪುರದ ಹುಡುಗನೊಬ್ಬ ತನ್ನ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಂದು ಓಡಿಹೋಗಿದ್ದ. ಇದಕ್ಕೆ ಕಾರಣ ಅವರಿಬ್ಬರನ್ನೂ ಮನೆಯಲ್ಲಿ ಮಾತನಾಡಲು ಬಿಡುತ್ತಿರಲಿಲ್ಲವಂತೆ. ಹೀಗಾಗಿ ಪ್ರೇಯಸಿ ಜೊತೆ 450 ಕಿಲೋ ಮೀಟರ್ ಬೈಕ್ ಓಡಿಸಿ ಬಳಿಕ ಮನೆಗೆ ಬಂದಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಮತ್ತೊಂದೆಡೆ ಪರೀಕ್ಷಾ ಕೇಂದ್ರದಿಂದ ತಲೆಮರೆಸಿಕೊಂಡು ಪ್ರೇಯಸಿಯನ್ನು ಭೇಟಿ ಮಾಡಲು ಬಂದಿದ್ದ ಮುನ್ನಾ ಭಾಯ್ ಎಂಬಾತನನ್ನು ಹಿಡಿದು ಆ ಹುಡುಗಿ ಜೊತೆ ಮದುವೆ ಮಾಡಿಸಿದ್ದರು. ಆದರೆ ಈ ಬಾರಿ ಪ್ರೇಮದ ಕಥೆ ಕೊಂಚ ಉಲ್ಟಾ ಆಗಿದೆ. ಹುಡುಗ-ಹುಡುಗಿ ಪ್ರೀತಿಯ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ಹುಡುಗ ಹುಡುಗಿಯ ಜೊತೆ ಶಾರೀರಿಕ ಸಂಬಂಧ ಬೆಳೆಸಿ ನಂತರ ಮದುವೆಯಾಗಲು ನಿರಾಕರಿಸಿದ್ದ.
ದೈಹಿಕ ಸಂಬಂಧ ಬೆಳೆಸಿದ ಬಳಿಕ ಗೆಳತಿಯನ್ನು ಮದುವೆಯಾಗಲು ನಿರಾಕರಿಸಿದ ಈ ಪ್ರಕರಣ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಈ ಇಡೀ ವಿಷಯದಲ್ಲಿ ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಇವರಿಬ್ಬರಿಗೆ ಮದುವೆ ಮಾಡಬೇಕಾಯಿತು. ಕಥೆಯು ಸ್ವಲ್ಪ ಸಿನಿಮಾ ಶೈಲಿಯಲ್ಲಿದೆ.
ವೈಶಾಲಿ ಜಿಲ್ಲೆಯ ಈ ಜೋಡಿ ಬೇರೆ ಬೇರೆ ಜಾತಿಯವರು. ಇಬ್ಬರೂ ಅಂತಿಮವಾಗಿ ಪೊಲೀಸರು ಮತ್ತು ಮಾನವ ಹಕ್ಕುಗಳ ಸಂಘಟನೆಯ ಸಮ್ಮುಖದಲ್ಲಿ ಪರಸ್ಪರ ಕೈ ಹಿಡಿದಿದ್ದಾರೆ. ಇದೀಗ ಏಳು ಜನ್ಮಗಳ ಕಾಲ ಒಟ್ಟಿಗೆ ಜೀವಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಇವೆಲ್ಲದಕ್ಕೂ ಮುನ್ನ ಘಟನೆಯೊಂದು ನಡೆದಿದ್ದು, ಅದು ಮಾತ್ರ ಸಿನಿಮಾ ಸ್ಟೈಲ್ನಲ್ಲದೆ.
ವೈಶಾಲಿ ಜಿಲ್ಲೆಯ ದೇಶ್ರಿ ನಿವಾಸಿ ನೀತು ಮತ್ತು ಬಿದುಪುರದ ಧರಂಪುರ ನಿವಾಸಿ ಕೌಶಲ್ ಇಬ್ಬರೂ ಬೇರೆ ಬೇರೆ ಜಾತಿಯವರಾದರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಶುರುವಾದ ಇಬ್ಬರ ಪ್ರೇಮಕಥೆ ಬಿರುಸಿನಿಂದ ಮುಂದುವರಿಯುತ್ತಿತ್ತು. ಈ ನಡುವೆ ಬಾಲಕಿ ಗರ್ಭಿಣಿಯಾದಳು. ಆದರೆ ಆ ಬಳಿಕ ಕೌಶಲ್ ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಇಬ್ಬರೂ ಅಷ್ಟು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಆದರೆ ಹುಡುಗ ಇದನ್ನೂ ಮರೆತಿದ್ದ, ಆ ನಂತರ ಹುಡುಗಿಯ ಮೇಲೆ ಒತ್ತಡ ಹೇರಲು ಶುರು ಮಾಡಿದ. ನಂತರ ಹುಡುಗಿಗೆ ಗರ್ಭಪಾತವೂ ಆಯಿತು., ಆದರೆ ಹುಡುಗ ಇನ್ನೂ ಮದುವೆಗೆ ಒಪ್ಪಲಿಲ್ಲ.
ಇದನ್ನೂ ಓದಿ: ನಡ್ಡಾ ಮಗನ ರಿಸೆಪ್ಸನ್ ನಿಮಿತ್ತ ಬಿಜೆಪಿ ನಾಯಕರು ದೆಹಲಿಗೆ ಪ್ರಯಾಣ
ಇಷ್ಟೆಲ್ಲಾ ನಡೆದ ಬಳಿಕ ಕೋಪಗೊಂಡ ಹುಡುಗಿ ನೇರವಾಗಿ ಹುಡುಗನ ಮನೆಗೆ ತೆರಳಿದ್ದಾಳೆ. ತನಗಾದ ಅನ್ಯಾಯದ ಬಗ್ಗೆ ಹೇಳಿದಾಗ ಹುಡುಗನ ಕುಟುಂಬಸ್ಥರು ಅವಳನ್ನು ಥಳಿಸಿ ಓಡಿಸಿದ್ದಾರೆ. ನಂತರ ಬಾಲಕಿ ಪಾಟ್ನಾದ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಹಿಳಾ ಕಲ್ಯಾಣ ಸಂಸ್ಥೆಗೆ ಬಂದು ಅವರ ಸಹಾಯವನ್ನು ಕೋರಿದ್ದಾಳೆ. ಸಂಸ್ಥೆಯಿಂದ ಹೆಣ್ಣು ಮಕ್ಕಳಿಗಾಗಿ ಉಪಕ್ರಮವನ್ನು ಪ್ರಾರಂಭಿಸಿ, ನಂತರ ಪೊಲೀಸರ ಸಹಾಯದಿಂದ ಹುಡುಗ ಮತ್ತು ಹುಡುಗಿಯ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲಾಯಿತು. ಸಂಘಟನೆಯ ಜನರು ಹುಡುಗನಿಗೆ ಸಲಹೆ ನೀಡಿದರು. ನಂತರ ಎರಡೂ ಕಡೆಯವರು ಮದುವೆಯಾಗಲು ಒಪ್ಪಿಕೊಂಡರು. ಬಳಿಕ ಇಬ್ಬರಿಗೂ ಪೊಲೀಸ್ ಠಾಣೆ ಆವರಣದಲ್ಲಿಯೇ ಮದುವೆ ಮಾಡಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ