ಪರ್ತ್ ಟೆಸ್ಟ್: ವಿರಾಟ್ ಕೊಹ್ಲಿ 25 ನೇ ಶತಕ, ನೂತನ ದಾಖಲೆ

ಭಾನುವಾರದಂದು ಪರ್ತ್ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕ ಬಾರಿಸಿದರು.ಇದು ಅವರ 25 ನೇ ಟೆಸ್ಟ್ ಶತಕವಾಗಿದೆ.  ವಿಶೇಷವೆಂದರೆ ಆಸಿಸ್ ನಲ್ಲಿ 6ನೇ ಟೆಸ್ಟ್ ಶತಕವಾಗಿದೆ.

Last Updated : Dec 16, 2018, 11:35 AM IST
ಪರ್ತ್ ಟೆಸ್ಟ್: ವಿರಾಟ್ ಕೊಹ್ಲಿ 25 ನೇ ಶತಕ, ನೂತನ ದಾಖಲೆ  title=

ನವದೆಹಲಿ: ಭಾನುವಾರದಂದು ಪರ್ತ್ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕ ಬಾರಿಸಿದರು.ಇದು ಅವರ 25 ನೇ ಟೆಸ್ಟ್ ಶತಕವಾಗಿದೆ.  ವಿಶೇಷವೆಂದರೆ ಆಸಿಸ್ ನಲ್ಲಿ 6ನೇ ಟೆಸ್ಟ್ ಶತಕವಾಗಿದೆ.

ಇದು ಒಟ್ಟಾರೆಯಾಗಿ ಇದು ಅವರ  63ನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿನ ಶತಕವಾಗಿದೆ.ವಿಶೇಷವೆಂದರೆ ಅಡಿಲೇಡ್ ಟೆಸ್ಟ್ ನಲ್ಲಿ ಅವರು ಆಸ್ಟ್ರೇಲಿಯಾದಲ್ಲಿ  ವೇಗವಾಗಿ 1000 ಟೆಸ್ಟ್ ರನ್ ಗಳಿಸಿದ ಆಟಗಾರ ಎಂದು ಅವರು ಖ್ಯಾತಿ ಗಳಿಸಿದ್ದರು. ಆ ಮೂಲಕ ಕೊಹ್ಲಿ ಸಚಿನ್ ತೆಂಡುಲ್ಕರ್ (1809), ವಿವಿಎಸ್ ಲಕ್ಷ್ಮಣ್ (1236) ಮತ್ತು ರಾಹುಲ್ ದ್ರಾವಿಡ್ (1143) ಸಾಲಿಗೆ ಸೇರಿದ್ದರು.

ಅಲ್ಲದೆ ಇದೆ ವೇಳೆ ಭಾರತ ಮತ್ತು ವಿದೇಶದಲ್ಲಿ 2000 ಸಾವಿರ ರನ್ ಗಳಿಸಿದ ಮೊದಲ ಭಾರತದ ಕ್ಯಾಪ್ಟನ್ ಎನ್ನುವ ಶ್ರೆಯವನ್ನು ತಮ್ಮದಾಗಿಸಿಕೊಂಡರು.ಸದ್ಯ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ಎರಡರಲ್ಲಿಯೂ ಕೂಡ ವಿಶ್ವದ ಅಗ್ರ ಶ್ರೇಯಾಂಕಿತ ಬ್ಯಾಟ್ಸ್ಮನ್ ಆಗಿದ್ದಾರೆ, ಕ್ಯಾಲೆಂಡರ್ ವರ್ಷದಲ್ಲಿ ಎರಡೂ ಮಾದರಿಯ ಆಟದಲ್ಲಿ1,000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

 

 

 

Trending News