Hair Care Tips: ಪ್ರಸ್ತುತ ಬದಲಾದ ಜೀವನಶೈಲಿಯಿಂದಾಗಿ ಬಹುತೇಕ ಜನರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳಪೆ ಜೀವನಶೈಲಿ, ಪೋಷಣೆಯ ಕೊರತೆಯೇ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ, ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಮತ್ತು ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಈ ಸಮಸ್ಯೆಗೆ ನೈಸರ್ಗಿಕವಾಗಿ ಸುಲಭ ಪರಿಹಾರವನ್ನು ಪಡೆಯಬಹುದು.
ಕೂದಲು ಉದುರುವಿಕೆಯನ್ನು ತಪ್ಪಿಸಲು ಈ ಟಿಪ್ಸ್ ಅನುಸರಿಸಿ:
ಹೆಚ್ಚು ನೀರು ಕುಡಿಯಿರಿ:
ನೀರಿನ ಕೊರತೆ, ನಿರ್ಜಲೀಕರಣದಿಂದಲೂ ಕೂಡ ಕೂದಲು ಉದುರಬಹುದು. ಇದನ್ನು ತಪ್ಪಿಸಲು ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ನೆನಪಿಡಿ.
ಆಹಾರ ಕ್ರಮ:
ಕೂದಲು ಉದುರುವಿಕೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಪೋಷಕಾಂಶಗಳ ಕೊರತೆ. ಇದನ್ನು ತಪ್ಪಿಸಲು ಕಬ್ಬಿಣ, ವಿಟಮಿನ್ ಎ, ವಿಟಮಿನ್ ಇ, ಆ್ಯಂಟಿ ಆಕ್ಸಿಡೆಂಟ್, ಪ್ರೊಟೀನ್ ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರಗಳನ್ನು ಸೇವಿಸುವುದು ಅವಶ್ಯಕ. ಕೂದಲ ಆರೈಕೆಯಲ್ಲಿ ಕ್ಯಾರೆಟ್, ಕರಿಬೇವು, ನೆಲ್ಲಿಕಾಯಿ, ಡ್ರೈಫ್ರೂಟ್ಸ್, ಮೊಸರು, ಮೀನು ಪ್ರಮುಖ ಪಾತ್ರವಹಿಸುತ್ತವೆ.
ಇದನ್ನೂ ಓದಿ- ಹೆಚ್ಚಾಗಿ ಮೀನು ತಿನ್ನುವವರೇ ಎಚ್ಚರ! ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ!
ಎಣ್ಣೆಯಿಂದ ಮಸಾಜ್ ಮಾಡಿ:
ಕೂದಲಿಗೆ ಎಣ್ಣೆಯಿಂದ ಪೋಷಣೆ ದೊರೆಯುತ್ತದೆ. ಹಾಗಾಗಿ, ಕೂದಲ ಆರೈಕೆಗಾಗಿ, ಕೂದಲು ಉದುರುವಿಕೆಯನ್ನು ತಪ್ಪಿಸುವ ದೃಷ್ಟಿಯಿಂದ ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿ ಆಗಿದೆ. ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಬುಡದಿಂದ ಬಲಗೊಳ್ಳುತ್ತದೆ.
ತಲೆಗೆ ಸ್ನಾನ ಮಾಡುವಾಗ ಹೆಚ್ಚು ಬಿಸಿ ನೀರನ್ನು ಬಳಸಬೇಡಿ:
ನಮ್ಮಲ್ಲಿ ಕೆಲವರು ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಿನ ಮಂದಿಗೆ ಈ ಅಭ್ಯಾಸ ಇರುತ್ತದೆ. ಆದರೆ, ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ, ಕೂದಲು ಉದುರುವಿಕೆಯನ್ನು ತಪ್ಪಿಸಲು ತಲೆಗೆ ಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸದೇ ಇರುವುದು ಉತ್ತಮ.
ಇದನ್ನೂ ಓದಿ- ದೇಹದ ಈ ಭಾಗಕ್ಕೆ ಆಲಿವ್ ಎಣ್ಣೆ ಹಚ್ಚಿ, ಹಲವು ಆರೋಗ್ಯಕರ ಲಾಭ ನಿಮ್ಮದಾಗಿಸಿಕೊಳ್ಳಿ
ಹೇರ್ ಮಾಸ್ಕ್:
ಚಳಿಗಾಲದಲ್ಲಿ ನೆತ್ತಿ ಒಣಗುತ್ತದೆ. ಇದರಿಂದಾಗಿ, ಡ್ಯಾಂಡ್ರಫ್, ಹೇರ್ ಫಾಲ್ ಸಮಸ್ಯೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಹೇರ್ ಮಾಸ್ಕ್ ಗಳನ್ನು ಬಳಸುವುದು ಕೂದಲನ್ನು ಹೈಡ್ರೇಟ್ ಮಾಡಲು ಸಹಕಾರಿ ಆಗುತ್ತದೆ. ಇದರಿಂದ ಕೂದಲು ಉದುರುವಿಕೆಯೂ ಕಡಿಮೆ ಆಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.