ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ

ಪಂಚರಾಜ್ಯ ಚುನಾವಣೆಗಳ ಫಲಿತಾಂಶವನ್ನು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

Last Updated : Dec 11, 2018, 07:54 AM IST

Trending Photos

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ  title=

ನವದೆಹಲಿ: ಬಹಳ ಕಾತುರದಿಂದ ಕಾಯುತ್ತಿರುವ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ ಇಂದು ಹೊರಬೀಳಲಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದ್ದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ. ಕೆಲವು ಎಕ್ಸಿಟ್ ಪೋಲ್ ಸಮೀಕ್ಷೆಗಳು ನೆಕ್ ಟು ನೆಕ್ ಫಲಿತಾಂಶವನ್ನು ಸೂಚಿಸಿವೆ. ಆದರೆ ಕೆಲವು ಸಮೀಕ್ಷೆಗಳು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ್​ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇರಲಿದೆ ಎಂದು ತಿಳಿಸಿದೆ. ಫಲಿತಾಂಶಗಳು eciresults.nic.in ನಲ್ಲಿ ಘೋಷಿಸಲ್ಪಡುತ್ತವೆ.

ಪಂಚರಾಜ್ಯ ಚುನಾವಣೆಗಳ ಫಲಿತಾಂಶವನ್ನು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ಜನತೆ ನೀಡುವ ಆದೇಶ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸ್ಪಷ್ಟ ಸಂದೇಶವನ್ನು ಕಳುಹಿಸಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಐದು ರಾಜ್ಯಗಳ 1.74 ಲಕ್ಷ ಇವಿಎಂಗಳಲ್ಲಿ ಅಡಗಿರುವ 8,500 ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಚುನಾವಣಾ ಫಲಿತಾಂಶ ಫಲಿತಾಂಶದ ಚಿತ್ರಣ ಹೊರಬಿಳಲಿದೆ. 

ಇತ್ತಿಚೆಗಷ್ಟೇ ನಡೆದ ಐದು ರಾಜ್ಯಗಳಲ್ಲಿ ಮತದಾನ ಕೇಂದ್ರಗಳಲ್ಲಿ ಒಟ್ಟು 1,74,724 ಇವಿಎಂಗಳನ್ನು ಬಳಸಲಾಗಿದೆ. ಐದು ರಾಜ್ಯಗಳ ಒಟ್ಟು 678 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಮತ ಪೆಟ್ಟಿಗೆಗಳನ್ನೂ  670 ಕ್ಕೂ ಅಧಿಕ ಸ್ಟ್ರಾಂಗ್ ರೂಂ ಗಳಲ್ಲಿ ಇದನ್ನು ಸಂಗ್ರಹಿಸಿಡಲಾಗಿದೆ. ಇಂದು ನಡೆಯುವ ಮತಎಣಿಕೆಗಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪಂಚರಾಜ್ಯ ಭವಿಷ್ಯ:
ತೆಲಂಗಾಣ: ತೆಲಂಗಾಣ ವಿಧಾನಸಭೆ ಚುನಾವಣೆಯ ಮತಎಣಿಕೆ ಇಂದು ನಡೆಯಲಿದ್ದು, 1,821 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ  ಡಿಸೆಂಬರ್ 7 ರಂದು ಮತದಾನ ನಡೆಯಿತು.

73.20% ಮತದಾನ ನಡೆದಿದ್ದು, ಹಲವು ಎಕ್ಸಿಟ್ ಪೋಲ್ ಸಮೀಕ್ಷೆಗಳು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ತಿಳಿಸಿವೆ.

ಮಧ್ಯಪ್ರದೇಶ: ಆರೋಪ-ಪ್ರತ್ಯಾರೋಪಗಳ ಬಳಿಕ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮಂಗಳವಾರ ಹೊರಬರಲಿದೆ. 230 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದೇ ಅಥವಾ ಕಾಂಗ್ರೆಸ್ ಈ ಬಾರಿ ಅಧಿಕಾರ ವಹಿಸಿಕೊಳ್ಳುವುದೇ ಎಂದು ನಿರ್ಧಾರವಾಗಲಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ: 2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಈ ಚುನಾವಣೆಗೆ ರಾಜಸ್ಥಾನ ಪ್ರಮುಖ ಸಾಕ್ಷಿಯಾಗಲಿದೆ ಎಂದು ರಾಜಕೀಯ ನಾಯಕರು ಬಣ್ಣಿಸಿದ್ದಾರೆ. ಡಿಸೆಂಬರ್ 7 ರಂದು ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ.

ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಕಾಂಗ್ರೆಸ್ ನಲ್ಲಿ ಉತ್ಸಾಹ ಮನೆಮಾಡಿದೆ. ಬಿಜೆಪಿ ಸಮೀಕ್ಷೆಯನ್ನು ಸಂಪೂರ್ಣ ತಿರಸ್ಕರಿಸಿದ್ದು, ಸಿಎಂ ವಸುಂಧರಾ ರಾಜೆ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಎಕ್ಸಿಟ್ ಪೋಲ್ ಸಮೀಕ್ಷೆ ಹಲವು ಬಾರಿ ತಪ್ಪಾಗಿರುವುದನ್ನು ಸಾಬೀತು ಪಡಿಸಿದೆ ಎಂದು ಪಕ್ಷ ತಿಳಿಸಿದೆ. ಈ ಎಲ್ಲದಕ್ಕೂ ಇಂದು ತೆರೆ ಬೀಳಲಿದ್ದು ಜನತಾ ಜನಾರ್ಧನನ ತೀರ್ಮಾನ ಏನು ಎಂಬುದರ ಸ್ಪಷ್ಟ ಚಿತ್ರಣ ಮಧ್ಯಾಹ್ನದ ಹೊತ್ತಿಗೆ ಹೊರಬೀಳಲಿದೆ. 

ಛತ್ತೀಸ್​ಗಢ್: ಛತ್ತೀಸ್​ಗಢದಲ್ಲಿ ಮತದಾನ  ನವೆಂಬರ್ 12 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ನಡೆಸಲಾಗಿದ್ದು, ಇಂದು ಮತಎಣಿಕೆ ನಡೆಯಲಿದೆ. 90 ವಿಧಾನಸಭಾ ಕ್ಷೇತ್ರಗಳುಳ್ಳ  ಛತ್ತೀಸ್​ಗಢ ವಿಧಾನಸಭೆಯ ಅಧಿಕಾರಾವಧಿ ಜನವರಿ 5, 2019 ರಂದು ಮುಕ್ತಾಯಗೊಳ್ಳಲಿದೆ.

ಕನಿಷ್ಟ 12 ವಿಧಾನಸಭೆ ಕ್ಷೇತ್ರಗಳು ನಕ್ಸಲ್ ಪೀಡಿತ ಪ್ರದೇಶವಾಗಿದ್ದು ರಾಜ್ಯದಲ್ಲಿ ಮತಎಣಿಕೆಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಇಲೆಕ್ಟ್ರಾನಿಕ್ ಮತದಾನ ಯಂತ್ರಗಳಿಗೆ (ಇವಿಎಂ) ಸಂಬಂಧಿಸಿರುವ ಆರೋಪಗಳಿವೆ.

ಮಿಜೋರಾಂ: ತುರ್ತು-ರಾಜಕೀಯ ರಾಜಕೀಯ ಯುದ್ಧಗಳನ್ನು ನೋಡಿದ ರಾಜ್ಯದಲ್ಲಿ, ಕಾಂಗ್ರೆಸ್ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ನಡುವೆ ಅಧಿಕಾರಕ್ಕಾಗಿ ದೀರ್ಘಕಾಲ ಹೋರಾಟ ನಡೆದಿದೆ. ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯನ್ನು ಹೊಂದಿದೆ. ಆದರೆ 2008 ಮತ್ತು 2013 ರ ಚುನಾವಣೆಯಲ್ಲಿ ಎಂಎನ್ಎಫ್ ತನ್ನ ನಷ್ಟಕ್ಕೆ ಪ್ರತೀಕಾರ ತೋರುವ ಆಶಯ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಲಾಲ್ ಥನ್ವಾಲಾ ಮತ್ತೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸ  ಹೊಂದಿದ್ದಾರೆ. ತಮ್ಮ ಕೊನೆಯ ಎರಡು ಅವಧಿಗಳಲ್ಲಿ ಮಾಡಿದ ಕೆಲಸಕ್ಕಾಗಿ ಮಿಜೋರಾಂ ಜನರು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಫಲ ನೀಡುತ್ತಾರೆ ಎಂದು ಹೇಳಿದ್ದಾರೆ.

Trending News