Chanakya Niti: ವಿವಾಹಕ್ಕೂ ಮುನ್ನ ಭಾವಿ ಬಾಳ ಸಂಗಾತಿಯನ್ನು ಐದು ಅಂಶಗಳ ಮೂಲಕ ಪರೀಕ್ಷಿಸಲು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಇದರಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ವರಯೇತ್ ಕುಲಜಾಂ ವಿರೂಪಾಮಪಿ ಕನ್ಯಕಾಂ. ರೂಪಶಿಲಾಮ್ ನ ನೀಚಸ್ಯ ವಿವಾಹಃ ಸದ್ದಷೋ ಕುಲೇ, ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಬಾಳಸಂಗಾತಿಯನ್ನು ಧರ್ಮ, ಧೈರ್ಯ, ಸಂಸ್ಕಾರ, ಸಂತೋಷ ಹಾಗೂ ಮಧುರ ವಾಣಿಯ ಆಧಾರದ ಮೇಲೆ ಪರೀಕ್ಷಿಸಲು ಸಲಹೆ ನೀಡಿದ್ದಾರೆ.
ಧರ್ಮ - ಮದುವೆಗೆ ಮೊದಲು, ನಿಮ್ಮ ಸಂಗಾತಿಯು ಧರ್ಮದ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ, ಏಕೆಂದರೆ ಧಾರ್ಮಿಕ ವ್ಯಕ್ತಿಯು ತನ್ನ ಘನತೆಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಕುಟುಂಬಕ್ಕೆ ಸಮರ್ಪಿತನಾಗಿರುತ್ತಾನೆ.
ಸಂಯಮ - ಸಂಯಮ ಮತ್ತು ತಾಳ್ಮೆಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿಯು ಕುಟುಂಬವನ್ನು ಪ್ರತಿ ಕಷ್ಟಕರ ಪರಿಸ್ಥಿತಿಯಿಂದ ರಕ್ಷಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ. ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಅವರು ಭದ್ರತೆಯ ಗುರಾಣಿಯಾಗುತ್ತಾರೆ. ಮದುವೆಗೆ ಮೊದಲು, ಸಂಗಾತಿಯಲ್ಲಿ ತಾಳ್ಮೆಯ ಅರ್ಥವನ್ನು ಖಂಡಿತವಾಗಿ ಪರೀಕ್ಷಿಸಿ.
ಕೋಪ - ಮದುವೆಗೆ ಮೊದಲು ಸಂಗಾತಿಯ ಕೋಪವನ್ನು ಪರೀಕ್ಷಿಸಬೇಕು. ಕೋಪವು ಸಂಬಂಧಗಳಲ್ಲಿ ಬಿರುಕು ತರುತ್ತದೆ. ಕೋಪಗೊಂಡ ವ್ಯಕ್ತಿಯು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾನೆ. ಕೋಪಗೊಂಡ ವ್ಯಕ್ತಿಯು ಜೀವನ ಸಂಗಾತಿಯನ್ನು ಮಾತು ಮಾತಿಗೂ ತಿವಿಯುತ್ತಾನೆ. ಅವನು ಸರಿಯಾಗಿದ್ದರೂ ಸಹ. ಇದು ಆತನ ಸಂಗಾತಿಗೆ ಮರೆಯಲಾರದ ಗಾಯವನ್ನು ಉಂಟುಮಾಡಬಹುದು.
ಮಧುರವಾದ ಮಾತು - ಮಾತು ವ್ಯಕ್ತಿಯ ಸಂಬಂಧವನ್ನು ಕೆಡಿಸುವ ಜೊತೆಗೆ ಅದನ್ನು ಹಾಳು ಮಾಡುತ್ತದೆ. ಪತಿ-ಪತ್ನಿಯರ ಮಧುರ ಮಾತುಗಳಿಂದ ವೈವಾಹಿಕ ಜೀವನ ಸುಖಮಯವಾಗುತ್ತದೆ. ಬಾಳಸಂಗಾತಿಯ ಕಹಿ ಮಾತುಗಳು ದಾಂಪತ್ಯ ಜೀವನದಲ್ಲಿ ಅಂತರವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ-ಸಂಗಾತಿ ಜೋತೆಗಿನ ನಿಮ್ಮ ಸಂಬಂಧ ಸುಮಧುರಗೊಳಿಸಬೇಕೆ? ಇಲ್ಲಿವೆ ಟಿಪ್ಸ್
ಸುಸಂಸ್ಕೃತ - ಬಾಳಸಂಗಾತಿಯನ್ನು ಆಯ್ಕೆಮಾಡುವಾಗ, ಬಾಹ್ಯ ಸೌಂದರ್ಯದ ಬದಲಿಗೆ ಅವನ/ಅವಳ ಗುಣಗಳನ್ನು ಪರಿಗಣಿಸಿ, ಏಕೆಂದರೆ ಸಂಸ್ಕಾರವಂತ ವ್ಯಕ್ತಿ ಮಾತ್ರ ವಿವಾಹದ ನಂತರ ಯಾವಾಗಲೂ ಪತಿ ಅಥವಾ ಪತ್ನಿಯೊಂದಿಗೆ ಭುಜಕ್ಕೆ ಭುಜ ತಾಕಿಸಿ ನಿಲ್ಲುತ್ತಾರೆ. ಸುಸಂಸ್ಕೃತರಾಗಿರುವುದು ಹಲವು ತಲೆಮಾರುಗಳಿಗೆ ಮೋಕ್ಷವನ್ನು ತರುತ್ತದೆ.
ಇದನ್ನೂ ಓದಿ-ಹೆಚ್ಚಿನ ಸಂಖ್ಯೆಯ ವಿವಾಹಿತ ಭಾರತೀಯರು ಡೇಟಿಂಗ್ ನಡೆಸುತ್ತಿದ್ದಾರಂತೆ! ದತ್ತಾಂಶ ಬಿಡುಗಡೆ ಮಾಡಿದ ಆಪ್
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.