Kiccha sudeep on KCC : ಕನ್ನಡ ಚಲಚನಚಿತ್ರ ಕಪ್ (KCC) ಕ್ರಿಕೆಟ್ ಟೂರ್ನ್ಮೆಂಟ್ ಶುರುವಾಗಲಿದೆ. ಇಷ್ಟು ದಿನ ಪರದೆ ಮೇಲೆ ಮ್ಯಾಜಿಕ್ ಮಾಡುತ್ತಿದ್ದ ಸಿನಿ ತಾರೆಯರು ಇದೀಗ ಬ್ಯಾಟ್ ಹಿಡಿದು ಗ್ರೌಂಡ್ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಇನ್ನು ಕೆಸಿಸಿ ಕುರಿತು ಕಿಚ್ಚ ಸುದೀಪ್ ಮಾಹಿತಿ ನೀಡಿದ್ದು, ಈ ಭಾರಿಯ ಟೂರ್ನ್ಮೆಂಟ್ನಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ ಅಂತ ಹೇಳಿದ್ರು.
ಈಗಾಗಲೇ ಕೆಸಿಸಿ ಎರಡೂ ಸೀಸನ್ ಯಶಸ್ವಿಯಾಗಿದದು, ಈಗ ಮೂರನೇ ಸೀಸನ್ಗೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲೇ ವಿಘ್ನ ಎನ್ನುವಂತೆ ಸಿನಿರಂಗದ ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಇವುಗಳಿಗೆಲ್ಲ ಕಿಚ್ಚ ಉತ್ತರಿಸಿದ್ದಾರೆ. ಚಿನ್ನ ಸ್ವಾಮಿ ಕ್ರಿಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುದೀಪ್, ಕೆಸಿಸಿ 3ನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ, ಯಾರ್ಯಾರು ಭಾಗವಹಿಸಿಬಹುದು, ಯಾವಾಗ ಮ್ಯಾಚ್ ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: Nora fatehi : ʼನೋರಾ ದಿನಕ್ಕೆ ಹತ್ತು ಬಾರಿ ಮಾಡುತ್ತಿದ್ದಳು..ʼ ಎಂದ ಸುಕೇಶ್..!
ಕೆಸಿಸಿ ಟೂರ್ನಮೆಂಟ್ ಕುರಿತು ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಉತ್ತರ ನೀಡಿದ್ದಾರೆ. ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಟೂರ್ನಿಯಲ್ಲಿ ಆಡೋಕೆ ಇಷ್ಟ ಇಲ್ಲದವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಅಲ್ಲದೆ ಆಟದ ಬಗ್ಗೆ ಮಾಹಿತಿ ನೀಡುತ್ತಾ.. ಕಳೆದ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯಮಟ್ಟದ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ನಮ್ಮ ಸಿನಿಮಾ ರಂಗದವರು ಸೇರಿದಂತೆ ಬೇರೆ ಚಿತ್ರರಂಗದವರೂ ಇದರಲ್ಲಿ ಭಾಗಿಯಾಗಬಹುದು. ರಾಜಕೀಯ ಮತ್ತು ಮಾಧ್ಯಮದವರು ಕೂಡ ಕೆಸಿಸಿಯಲ್ಲಿ ಆಡಬಹುದು ಎಂದು ಸುದೀಪ್ ತಿಳಿಸಿದರು. ಹಾಗು ತಂಡಗಳ ರಚನೆಯ ನಂತರ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಅವರವರ ತಂಡದ ಕ್ಯಾಪ್ಟನ್ನನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಕೆಸಿಸಿ ಮ್ಯಾಚ್ ಟಿವಿಯಲ್ಲಿ ನೇರ ಪ್ರಸಾರವಾಗುತ್ತದೆ. ಎರಡು ದಿನ ಮ್ಯಾಚ್ ಇರುತ್ತದೆ. ಫೆಬ್ರವರಿ 11 ಹಾಗೂ 12ರಂದು ಮೈಸೂರಿನಲ್ಲಿ ಮ್ಯಾಚ್ಗಳು ನಡೆಯಲಿವೆ ಎಂದು ಸುದೀಪ್ ಮಾಹಿತಿ ನೀಡಿದರು. ಸಾಕಷ್ಟು ಮನರಂಜನೆ ಕಾರ್ಯಕ್ರಮಗಳ ಮೂಲಕ ʼಕೆಸಿಸಿ 3ನೇ ಸೀಸನ್ ಗೆ ಅದ್ದೂರಿ ಚಾಲನೆ ನೀಡಲು ಸುದೀಪ್ ನಿರ್ಧರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.