Electricity Bill Reduce Tips: ಇನ್ನೇನು ಚಳಿಗಾಲ ಮುಗಿಯುತ್ತಾ ಬಂದಿದೆ. ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಆರಂಭವಾಗಲಿದೆ. ಈ ಋತುವಿನಲ್ಲಿ ಫ್ಯಾನ್, ಎಸಿ, ಕೂಲರ್ಗಳ ಬಳಕೆ ಹೆಚ್ಚು. ಇದಲ್ಲದೆ, ಈ ಬೇಸಿಗೆ ಕಾಲದಲ್ಲಿ ಪವರ್ ಕಟ್ ಒಂದು ಸಾಮಾನ್ಯ ಸಮಸ್ಯೆ ಆಗಿದ್ದು ಇಂತಹ ಸಂದರ್ಭದಲ್ಲಿ ಅನುಕೂಲವಾಗಲೆಂದು ಇನ್ವರ್ಟರ್ಗಳು ಮತ್ತು ಜನರೇಟರ್ಗಳನ್ನು ಖರೀದಿಸಲಾಗುತ್ತದೆ. ಆದರೆ, ಜನರೇಟರ್ಗಳು ಹೆಚ್ಚು ತೈಲವನ್ನು ಬಳಸಿದರೆ, ಇನ್ವರ್ಟರ್ಗಳಲ್ಲಿ ಚಾರ್ಜಿಂಗ್ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಒಟ್ಟಾರೆಯಾಗಿ ಬೇಸಿಗೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಾದ್ದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿಯೇ ಬರುತ್ತದೆ. ಇದು ನಿಮ್ಮ ತಿಂಗಳ ಬಜೆಟ್ ಅನ್ನು ಹಾಳುಮಾಡುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಒಂದೇ ಒಂದು ಸರಳ ಸಾಧನ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು.
ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ಪವರ್ ಸ್ಟೇಷನ್ಗಳು ಲಭ್ಯವಿದೆ. ಇವುಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಾತ್ರವಲ್ಲ, ಇವುಗಳನ್ನು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದು. ಅವುಗಳಲ್ಲಿ ಎಂಜಾಯ್ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಕೂಡ ಒಂದ. ಈ ಸಾಧನದ ಬಳಕೆಯಿಂದ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ನೀವು ಅರ್ಧದಷ್ಟು ಕಡಿಮೆ ಮಾಡಬಹುದು.
ಇದನ್ನೂ ಓದಿ- Instagram ಮೂಲಕ ಪ್ರತಿ ತಿಂಗಳು ಗಳಿಸಬಹುದು 30 ಸಾವಿರ ರೂಪಾಯಿ.!
ಎಂಜಾಯ್ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ವೈಶಿಷ್ಟ್ಯ:
ಎಂಜಾಯ್ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಅನೇಕ ಪೋರ್ಟಬಲ್ ವಿದ್ಯುತ್ ಮೂಲಗಳನ್ನು ಹೊಂದಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ನಿಮ್ಮ ಮನೆಗೆ ವಿಶ್ವಾಸಾರ್ಹ ಶಕ್ತಿಯ ಮೂಲ ಮಾತ್ರವಲಾಲ್, ನೀವು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಪ್ರಯಾಣಿಸುತ್ತಿರಲಿ ಅಗತ್ಯವಿರುವೆಡೆ ವಿದ್ಯುತ್ ಒದಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
* ಎಂಜಾಯ್ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಹೆಚ್ಚಿನ ಸಾಮರ್ಥ್ಯದೊಂದಿಗೆ 1,008 Wh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
* ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಈ ಪವರ್ ಸ್ಟೇಷನ್ ದಿನವಿಡೀ ವಿದ್ಯುತ್ ಒದಗಿಸುತ್ತದೆ.
* ಈ ಪವರ್ ಸ್ಟೇಷನ್ ಬಳಸಿ ಎಸಿ, ಟಿವಿ, ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಡ್ರೋನ್ ಮತ್ತು ಪ್ರೊಜೆಕ್ಟರ್ನಂತಹ ವಸ್ತುಗಳು ಕಾರ್ಯನಿರ್ವಹಿಸಬಹುದು.
* ವಿನ್ಯಾಸದಲ್ಲಿ ಚಿಕ್ಕದಾಗಿರುವುದರಿಂದ ಇದನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಬಹುದು.
* ನೀವು ಮನೆಯಲ್ಲಿಯೇ ಪವರ್ ಸ್ಟೇಷನ್ ಅನ್ನು ಚಾರ್ಜ್ ಮಾಡುವುದು ಅನಿವಾರ್ಯವಲ್ಲ.
* ಈ ಪವರ್ ಸ್ಟೇಷನ್ ಅನ್ನು ನೀವು ಹೊರಾಂಗಣದಲ್ಲಿಯೂ ಚಾರ್ಜ್ ಮಾಡಬಹುದು.
ಇದನ್ನೂ ಓದಿ- ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಐಫೋನ್ 14ರ ಮೇಲೆ ಬಂಪರ್ ಡಿಸ್ಕೌಂಟ್
ಇದರ ಇತರ ವೈಶಿಷ್ಟ್ಯಗಳು:
>> ಎಂಜಾಯ್ಕೂಲ್ 1,200 W 11-in-1 ಪವರ್ ಸ್ಟೇಷನ್ ಎರಡು 1,200 W AC ಔಟ್ಲೆಟ್ಗಳು, 120 W 12 V ಕಾರ್ ಚಾರ್ಜರ್, 65 W USB-C, 18 W USB-A ಮತ್ತು ಎರಡು 5 V USB-A ಪೋರ್ಟ್ಗಳನ್ನು ಒಳಗೊಂಡಿದೆ.
>> ಇದರ ತೂಕ ಕೂಡ ಕೇವಲ 11 ಕೆ.ಜಿ.
>> ಈ ಪವರ್ ಸ್ಟೇಷನ್ ಎಲ್ಇಡಿ ಬೆಳಕನ್ನು ಪಡೆಯುತ್ತದೆ ಮತ್ತು ಬ್ಯಾಟರಿ ಕಡಿಮೆಯಾದಾಗ SOS ಸಂಕೇತವನ್ನು ತೋರಿಸುತ್ತದೆ.
>> ಈ ಸಾಧನದಲ್ಲಿ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯುಲಭ್ಯವಿದೆ. ಇದು ಅಧಿಕ ಚಾರ್ಜ್, ಅಧಿಕ ತಾಪಮಾನ ಮತ್ತು ಅತಿಯಾದ ವೋಲ್ಟೇಜ್ನಂತಹ ವಿಷಯಗಳ ವಿರುದ್ಧ ರಕ್ಷಿಸುತ್ತದೆ.
ಎಂಜಾಯ್ಕೂಲ್ 1,200 W 11-in-1 ಪವರ್ ಸ್ಟೇಷನ್ ಬೆಲೆ ಮತ್ತು ಲಭ್ಯತೆ:
ಸದ್ಯ ಯುಎಸ್ನಲ್ಲಿ ಬಿಡುಗಡೆ ಆಗಿರುವ ಎಂಜಾಯ್ಕೂಲ್ 1,200 W 11-in-1 ಪವರ್ ಸ್ಟೇಷನ್ ಬೆಳೆ $690 (56,120). ಈ ವರ್ಷದ ಮಾರ್ಚ್ನಲ್ಲಿ ಇದರ ಮೊದಲ ಮಾರಾಟ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ನಂತರದ ದಿನಗಳಲ್ಲಿ ಇದನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.