Shubman Gill: ಕೀವೀಸ್ ವಿರುದ್ಧ ಶುಭ್ಮನ್ ಶುಭಾರಂಭ: ‘ಗಿಲ್’ ಶತಕದ ಅಬ್ಬರಕ್ಕೆ ಸುಸ್ತಾದ ನ್ಯೂಜಿಲೆಂಡ್

Shubman Gill: 23 ವರ್ಷ ವಯಸ್ಸಿನ ಶುಭ್ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ ರೋಹಿತ್ 34 ರನ್‌ಗಳಿಗೆ ಔಟಾದರು. ಗಿಲ್ ನಂತರ ವಿರಾಟ್ ಕೊಹ್ಲಿ ಜೊತೆ ಸೇರಿ ಅಬ್ಬರದ ಜೊತೆಯಾಟವಾಡಿದರು.

Written by - Bhavishya Shetty | Last Updated : Jan 18, 2023, 04:53 PM IST
    • ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ
    • ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಸರಣಿಯ ಮೊದಲ ಪಂದ್ಯ
    • ಮೂರನೇ ಶತಕವನ್ನು ಸಿಡಿಸುವ ಮೂಲಕ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ
Shubman Gill: ಕೀವೀಸ್ ವಿರುದ್ಧ ಶುಭ್ಮನ್ ಶುಭಾರಂಭ: ‘ಗಿಲ್’ ಶತಕದ ಅಬ್ಬರಕ್ಕೆ ಸುಸ್ತಾದ ನ್ಯೂಜಿಲೆಂಡ್ title=
Shubman Gill

Shubman Gill: ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಶುಭ್ಮನ್ ಗಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ಶತಕವನ್ನು ಸಿಡಿಸುವ ಮೂಲಕ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.

ಇದು ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಅವರ ಸತತ ಎರಡನೇ ಶತಕವಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 116 ರನ್ ಗಳಿಸಿದ್ದರು.

ಇದನ್ನೂ ಓದಿ: ಹೂಡಿಕೆದಾರರಿಗೆ ಬಿಗ್ ನ್ಯೂಸ್ : ನಿಮ್ಮ ಹಣ ಕೇವಲ 11 ದಿನಗಳಲ್ಲಿ ಡಬಲ್, 110% ಕ್ಕಿಂತ ಹೆಚ್ಚು ಆದಾಯ

23 ವರ್ಷ ವಯಸ್ಸಿನ ಶುಭ್ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ ರೋಹಿತ್ 34 ರನ್‌ಗಳಿಗೆ ಔಟಾದರು. ಗಿಲ್ ನಂತರ ವಿರಾಟ್ ಕೊಹ್ಲಿ ಜೊತೆ ಸೇರಿ ಅಬ್ಬರದ ಜೊತೆಯಾಟವಾಡಿದರು.

ಇಂದು ಶುಭ್ಮನ್ ಗಿಲ್ 87 ಎಸೆತಗಳಲ್ಲಿ 100 ರನ್ ಬಾರಿಸಿದ್ದು, 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ವೇಗವಾಗಿ 1000 ODI ರನ್‌ ಗಳಿಸಿದ ಟಾಪ್ 3 ಆಟಗಾರರು:

18 ಇನ್ನಿಂಗ್ಸ್ ಮೂಲಕ ಪಾಕಿಸ್ತಾನದ ಫಖರ್ ಜಮಾನ್

19 ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾದ ಶುಭಮನ್ ಗಿಲ್

19 ಇನ್ನಿಂಗ್ಸ್ ಮೂಲಕ ಪಾಕಿಸ್ತಾನದ ಇಮಾಮ್ ಉಲ್ ಹಕ್

ಶುಭಮನ್ ಗಿಲ್ ತಮ್ಮ 19ನೇ ಏಕದಿನ ಇನ್ನಿಂಗ್ಸ್‌ನಲ್ಲಿ 1000 ರನ್‌ಗಳ ಗಡಿ ದಾಟಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 18 ODIಗಳ 18 ಇನ್ನಿಂಗ್ಸ್‌ಗಳಲ್ಲಿ ಒಟ್ಟು 894 ರನ್ ಗಳಿಸಿದ್ದರು. ಹೈದರಾಬಾದ್‌ನಲ್ಲಿ ಗಿಲ್ ಸದ್ಯ ವೈಯಕ್ತಿಕ ಸ್ಕೋರ್ 160 ದಾಟಿದ್ದು, ಭಾರತಕ್ಕಾಗಿ ಈ ಸ್ವರೂಪದಲ್ಲಿ 1000 ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವೆಲ್ಲದರ ಜತೆಗೆ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್‌ ಅವರನ್ನು ಹಿಂದಕ್ಕಿದ್ದಾರೆ. ಸಚಿನ್ 34 ಏಕದಿನ ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು.

ಇದನ್ನೂ ಓದಿ: ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಮತದಾನ ದಿನಾಂಕ ಪ್ರಕಟ 

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾರತದ ಪರ ಏಕದಿನದಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ್ದರು. ಇಬ್ಬರೂ ಒಂದೇ 24 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಅವರಿಗಿಂತ 5 ಇನ್ನಿಂಗ್ಸ್ ಕಡಿಮೆ ಇರುವಾಗಲೇ ಈ ದಾಖಲೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ, ಈ ವಿಶ್ವ ದಾಖಲೆಯು ಪಾಕಿಸ್ತಾನದ ಫಖರ್ ಜಮಾನ್ ಹೆಸರಿನಲ್ಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News