ಅಡಿಲೇಡ್: ಇಲ್ಲಿನ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಕಂಡಿದೆ.
ಆಸಿಸ್ ನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ಬೇಗನೆ ವಿಕೆಟ್ ಕಳೆದುಕೊಂಡಿತು.ಆದರೆ ಇದರ ಮಧ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಚೇತೆಶ್ವರ್ ಪೂಜಾರ್ ಶತಕಗಳಿಸುವ ಮೂಲಕ ಇನ್ನು ಕ್ರಿಸ್ ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕಗಳಿಸಿದ್ದ ಮುರಳಿ ವಿಜಯ್ ಕೇವಲ11 ರನ್ ಗೆ ಔಟಾದರು.ಇದರ ಜೊತೆಗೆ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಮೊತ್ತವನ್ನು ಗಳಿಸುವಲ್ಲಿ ವಿಫಲವಾದರು.
A beauty from Lyon JUST takes the edge! #CloseMatters#AUSvIND | @GilletteAU pic.twitter.com/gWsubzfxlg
— cricket.com.au (@cricketcomau) December 6, 2018
It's been a brilliant knock from Cheteshwar Pujara in the Adelaide heat with wickets falling around him.#AUSvIND | @toyota_aus pic.twitter.com/py8KvHB86q
— cricket.com.au (@cricketcomau) December 6, 2018
ಆಸಿಸ್ ವಿರುದ್ದ ಶತಕ ಗಳಿಸುತ್ತಾರೆ ಎಂದು ನಂಬಿಕೆ ಇಟ್ಟಿದ್ದ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಸದ್ಯ ಈಗ ಬಂದಿರುವ ವರದಿ ಪ್ರಕಾರ ಎಂಟು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.ಕ್ರೀಸ್ ನಲ್ಲಿ ಚೇತೆಶ್ವರ್ ಪೂಜಾರ್ (117) ಮಹಮ್ಮದ್ ಶಮಿ 6 ರನ್ ಗಳಿಸಿ ಆಡುತ್ತಿದ್ದಾರೆ.