ಭುವನೇಶ್ವರ: ಎಫ್ಐಎಚ್ ಹಾಕಿ ಪುರುಷರ ವಿಶ್ವಕಪ್ನಲ್ಲಿ ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ಪೂಲ್ ಡಿ ಪಂದ್ಯವು ಎರಡೂ ತಂಡಗಳು ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದರಿಂದ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ : ಸ್ಟಾರ್ ಸುವರ್ಣದಲ್ಲಿ "ಕಾಂತಾರ".. ಮರಳಿನಲ್ಲಿ ಮೂಡಿತು ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ...!
ಇಂಗ್ಲೆಂಡ್ ಗೋಲ್ಕೀಪರ್ ಆಲಿವರ್ ಪೇನ್ ಅವರ ಅತ್ಯುತ್ತಮ ಸೇವ್ಗಳಿಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ ಭಾರತದ ಹಾರ್ದಿಕ್ ಸಿಂಗ್ ಕೂಡ ಅಷ್ಟೇ ಪ್ರಭಾವಿ ಎನಿಸಿಕೊಂಡರು. ಮೊದಲ ಕ್ವಾರ್ಟರ್ನಲ್ಲಿ, ಇಂಗ್ಲೆಂಡ್ಗೆ ಹೆಚ್ಚಿನ ಅವಕಾಶಗಳು ಸಿಗುವುದರೊಂದಿಗೆ ಯಾವುದೇ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ, ಆದರೆ ಎರಡನೇ ಕ್ವಾರ್ಟರ್ನಲ್ಲಿ, ಭಾರತವು ಉತ್ತಮ ಪ್ರದರ್ಶನ ನೀಡಿದರೂ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿತು.
#TeamIndia #England Match Draw 🏑🇮🇳#HockeyWorldCup #HockeyComesHome #HockeyIndia #INDvsENG #India #Hockey #HockeyTwitter pic.twitter.com/DslBgblq6x
— Nishant Dravid (@nishantdravid73) January 15, 2023
ಇದನ್ನೂ ಓದಿ : Balakrishna : ʼದೇವ ಬ್ರಾಹ್ಮಣʼರ ಕ್ಷಮೆ ಕೇಳಿದ ತೆಲುಗು ನಟ ಬಾಲಕೃಷ್ಣ..!
ಮೂರನೇ ಕ್ವಾರ್ಟರ್ನಲ್ಲಿ ಭಾರತವು ದಾಳಿಯಲ್ಲಿ ಮತ್ತಷ್ಟು ಉತ್ತಮವಾಗಿತ್ತಾದರೂ ಕೂಡ ಗೋಲ್ ಗಳಿಸುವಲ್ಲಿ ವಿಫಲವಾಯಿತು. ಅಂತಿಮ ಕ್ವಾರ್ಟರ್ನಲ್ಲಿ ಇಂಗ್ಲೆಂಡ್ ಗೋಲಿಗಾಗಿ ತೀವ್ರ ಪ್ರಯತ್ನಪಟ್ಟರೂ ಕೂಡ ಅಂತಿಮ ಸ್ಕೋರ್ 0-0 ರಲ್ಲಿಯೇ ಉಳಿಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.