ನವದೆಹಲಿ: ಉದ್ಯಮಿ ನೀರವ್ ಮೋದಿ ಭಾರತದಿಂದ ತಪ್ಪಿಸಿಕೊಂಡು ಹೋಗುವ ವಿಚಾರ ಐಟಿ ಇಲಾಖೆ ಮೂಲಕ ತಿಳಿದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "23 ಸಾವಿರ ಕೋಟಿ ಹಗರಣದಲ್ಲಿ ಭಾಗಿಯಾಗಿರುವ ನೀರವ್ ಮೋದಿ ಅವರು ದೇಶವನ್ನು ತೊರೆಯುತ್ತಿರುವ ಸಂಗತಿ ಎಂಟು ತಿಂಗಳು ಮೊದಲೇ ಐಟಿ ಇಲಾಖೆಯಿಂದ ತಿಳಿದಿತ್ತು ಎಂದು ಅವರು ಆರೋಪ ಮಾಡಿದ್ದಾರೆ.
Inactions of Top echelons of Modi Govt – PM Modi & FM Jaitley are out in open!
Despite being well aware about ‘dirty dealings’, of Nirav Modi & Mehul Choksi in ‘₹26,306 Cr PNB Bank Loot Scam’ for more than 8 months, Modi Govt provided fugitives a ‘free pass to ‘flee India’! pic.twitter.com/UChVnIRUgh
— Randeep Singh Surjewala (@rssurjewala) December 3, 2018
ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು " ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಅವರ 26,306 ಕೋಟಿ ಪಿಎನ್ಬಿ ಬ್ಯಾಂಕ್ ಹಗರಣದ ವಿಚಾರವಾಗಿ 8 ತಿಂಗಳಿಗೂ ಮೊದಲೇ ಅವರು ತಿಳಿದಿದ್ದರೂ ಸಹಿತ ಮೋದಿ ಸರ್ಕಾರ ಅವರಿಗೆ ಭಾರತದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿತ್ತು" ಎಂದು ಅವರು ಟ್ವೀಟ್ ಮಾಡಿದ್ದಾರೆ.