Huge Discount On iPhone 12 Mini: ತಮ್ಮ ಬಳಿಯೂ ಕೂಡ ಪ್ರಿಮಿಯಂ ಸ್ಮಾರ್ಟ್ ಫೋನ್ ಇರಬೇಕು ಎಂಬ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಪ್ರೀಮಿಯಂ ಮೊಬೈಲ್ ಫೋನ್ ಗಳಿಗಾಗಿ ಮಾರುಕಟ್ಟೆಯಲ್ಲಿ ಒಂದು ವಿಭಿನ್ನ ಬೇಡಿಕೆ ಕಂಡುಬರುತ್ತದೆ. ನಿಮ್ಮ ಬಳಿಯೂ ಒಂದು ವೇಳೆ ಇಂತಹ ಸ್ಮಾರ್ಟ್ ಫೋನ್ ಇದ್ದರೆ, ಮತ್ತು ನೀವು ಅದನ್ನು ನಿಮ್ಮ ಜೇಬಿನಿಂದ ಹೊರತೆಗೆದ ತಕ್ಷಣ, ಎದುರಿಗಿರುವ ವ್ಯಕ್ತಿ ನಿಮ್ಮನ್ನು ವಿಭಿನ್ನವಾಗಿ ನೋಡುತ್ತಾನೆ. ಏತನ್ಮಧ್ಯೆ, ನೀವು ಹೊಸ ವರ್ಷದಲ್ಲಿ ಪ್ರೀಮಿಯಂ ಮೊಬೈಲ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನವು ಕೇವಲ ನಿಮಗಾಗಿ. ವಾಸ್ತವದಲ್ಲಿ, ನೀವು ಪ್ರೀಮಿಯಂ ಮೊಬೈಲ್ ಫೋನ್ ಕಂಪನಿ Apple ನ iPhone 12 Mini ಅನ್ನು ಕೇವಲ 15,999 ರೂಗಳಿಗೆ ಖರೀದಿಸಬಹುದು. ಹೌದು, ನೀವು Android ಸ್ಮಾರ್ಟ್ಫೋನ್ ದರದಲ್ಲಿ iPhone 12 Mini ಅನ್ನು ಖರೀದಿಸಬಹುದು.
ಮಾರುಕಟ್ಟೆಯಲ್ಲಿ iPhone 12 Mini ಬೆಲೆ ರೂ 59,900 ಆಗಿದೆ, ಆದರೆ ಶೇ.34 ರಷ್ಟು ರಿಯಾಯಿತಿಯ ನಂತರ, ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಇದನ್ನು ರೂ 38,999ಕ್ಕೆ ಮಾರಾಟಕ್ಕಾಗಿ ಪಟ್ಟಿ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್ಫೋನ್ನಲ್ಲಿ ಇತರ ಕೊಡುಗೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ನೀವು ಇದನ್ನು 15,999 ರೂ.ಗೆ ಖರೀದಿಸಬಹುದು.
ಇದು ವಿಶೇಷ ಕೊಡುಗೆಯಾಗಿದೆ
ಬ್ಯಾಂಕ್ ಆಫ್ ಬರೋಡಾ ಅಥವಾ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ಗಳೊಂದಿಗೆ ಫ್ಲಿಪ್ಕಾರ್ಟ್ ನಲ್ಲಿ ಹಣ ಪಾವತಿಸುವ ಮೂಲಕ 64 ಜಿಬಿ ಸಂಗ್ರಹಣಾ ಸಾಮರ್ಥ್ಯದ ಐಫೋನ್ 12 ಮಿನಿ ಮೂಲ ರೂಪಾಂತರವನ್ನು ನೀವು ಖರೀದಿಸಿದರೆ, ನೀವು ಎಂಆರ್ಪಿಯಲ್ಲಿ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ, ಈ ಸ್ಮಾರ್ಟ್ಫೋನ್ನಲ್ಲಿ 23,000 ರೂಪಾಯಿಗಳ ಎಕ್ಸ್ಚೇಂಜ್ ಡಿಸ್ಕೌಂಟ್ ಅನ್ನು ಸಹ ನೀಡಲಾಗುತ್ತಿದೆ. ನೀವು ಎಲ್ಲಾ ಕೊಡುಗೆಗಳ ಪ್ರಯೋಜನವನ್ನು ಪಡೆದರೆ, ನೀವು ಕೇವಲ 15,999 ರೂಗಳಲ್ಲಿ iPhone 12 Mini ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ-
iPhone 12 Mini ನ ವಿಶೇಷತೆಗಳು
iPhone 12 Mini ನಲ್ಲಿ ಗ್ರಾಹಕರು 5.4-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಪಡೆಯುತ್ತಾರೆ. 12 ಮೆಗಾಪಿಕ್ಸೆಲ್ಗಳು ಮತ್ತು 12 ಮೆಗಾಪಿಕ್ಸೆಲ್ಗಳ ಡ್ಯುಯಲ್ ಕ್ಯಾಮೆರಾ ಸೆಟಪ್ ಮೊಬೈಲ್ ಫೋನ್ನ ಹಿಂಭಾಗದಲ್ಲಿದೆ . ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಮೊಬೈಲ್ ಫೋನ್ A14 ಬಯೋನಿಕ್ ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ-
ಈ ಸ್ಮಾರ್ಟ್ಫೋನ್ಗಳ ಮೇಲೂ ಕೂಡ ಭರ್ಜರಿ ಆಫರ್ಗಳಿವೆ
iPhone 12 Mini ಹೊರತುಪಡಿಸಿ, ನೀವು Redmi Note 11 SE, Motorola G62, Poco C31 ಮುಂತಾದ ಸ್ಮಾರ್ಟ್ಫೋನ್ಗಳನ್ನು ಸಹ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಇದಲ್ಲದೇ, ನೀವು ಇ-ಕಾಮರ್ಸ್ ವೆಬ್ಸೈಟ್ನಿಂದ Oppo F17 Pro, Moto G51 ಇತ್ಯಾದಿ ಸ್ಮಾರ್ಟ್ಫೋನ್ಗಳನ್ನು ಕಡಿಮೆ ಬೆಲೆಯಲ್ಲಿ ರಿಯಾಯಿತಿಯಡಿಯಲ್ಲಿ ಖರೀದಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.