/kannada/photo-gallery/biggboss-11-first-elimination-yamuna-srinidhi-husband-and-children-249346 ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌  ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ 249346

Vaikuntha Ekadashi 2023:ಜನವರಿಯ ಈ ದಿನ 'ಮಹಾ ಉಪವಾಸ', ಮೂರು ಅದ್ಭುತ ಶುಭ ಯೋಗಗಳಿಂದ ದ್ವಿಗುಣ ಫಲಿತಾಂಶ

Vaikuntha Ekadashi 2023: ಪುಷ್ಯ ಮಾಸದ ಶುಕ್ಲ ಪಕ್ಷದ ಈ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀವಿಷ್ಣುವನ್ನು ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಕೈಗೊಳ್ಳಲಾಗುತ್ತದೆ. 

Written by - Nitin Tabib | Last Updated : Dec 28, 2022, 08:27 PM IST
  • ಈ ದಿನ, ಬೆಳಗ್ಗೆ ಬೇಗನೆ ಎದ್ದು ಉಪವಾಸದ ಸಂಕಲ್ಪ ಮಾಡಿ ಮತ್ತು
  • ದೈನಂದಿನ ಆಚರಣೆಗಳು ಮತ್ತು ಸ್ನಾನ ಇತ್ಯಾದಿಗಳ ನಂತರ ಪೂಜೆ ಮಾಡಿ.
  • ಈ ವ್ರತದಲ್ಲಿ ವಿಷ್ಣುವಿನ ಜೊತೆಗೆ ಬಾಲ ಗೋಪಾಲನನ್ನೂ ಪೂಜಿಸಬೇಕು
Vaikuntha Ekadashi 2023:ಜನವರಿಯ ಈ ದಿನ 'ಮಹಾ ಉಪವಾಸ', ಮೂರು ಅದ್ಭುತ ಶುಭ ಯೋಗಗಳಿಂದ ದ್ವಿಗುಣ ಫಲಿತಾಂಶ title=
Vaikuntha Ekadasi 2023

Vaikuntha Ekadashi 2023: ಹಿಂದೂ ಧರ್ಮದಲ್ಲಿ ಉಪವಾಸಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇತರ ಉಪವಾಸಗಳಿಗೆ ಹೋಲಿಸಿದರೆ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಒಂದು ತಿಂಗಳಲ್ಲಿ ಎರಡು ಏಕಾದಶಿಗಳು ಬರುತ್ತವೆ. 2023 ರ ಹೊಸ ವರ್ಷದಲ್ಲಿ ವೈಕುಂಠ ಏಕಾದಶಿಯನ್ನು ಜನವರಿ 2 ರಂದು ಆಚರಿಸಲಾಗುತ್ತಿದೆ. ಪುಷ್ಯ ಮಾಸದ ಶುಕ್ಲ ಪಕ್ಷದ ಈ ಏಕಾದಶಿಯನ್ನು ಪೌಷ್ಯ ಪುತ್ರಾದ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ಶ್ರೀ ವಿಷ್ಣುವನ್ನು ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಈ ವ್ರತವನ್ನು ಆಚರಿಸುವವರಿಗೆ ಯೋಗ್ಯ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಲ್ಲದ ದಂಪತಿಗಳು ಈ ಉಪವಾಸವನ್ನು ಕೈಗೊಳ್ಳುತ್ತಾರೆ.

ಈ ಏಕಾದಶಿಯಂದು ಅಂದರೆ ಜನವರಿ 2 ರಂದು 3 ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಆದ್ದರಿಂದಲೇ ಅದರ ಪ್ರಾಮುಖ್ಯತೆ ಹೆಚ್ಚಾಗಿದೆ. ಉಪವಾಸ, ಮಂಗಳಕರ ಯೋಗ ಮತ್ತು ಪೂಜೆಯ ವಿಧಿ ವಿಧಾನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, 

ಶುಭ ಮುಹೂರ್ತ ಯಾವುದು? 
ಪಂಚಾಂಗದ ಪ್ರಕಾರ, ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯು ಜನವರಿ 1 ರಂದು ರಾತ್ರಿ 7.11 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 2 ರಂದು ರಾತ್ರಿ 8.23 ​​ರವರೆಗೆ ಮುಂದುವರಿಯುತ್ತದೆ. ಆದರೆ, ಏಕಾದಶಿ ಸೂರ್ಯೋದಯವು ಜನವರಿ 2 ರಂದು ಇರಲಿದೆ, ಆದ್ದರಿಂದ ಈ ಉಪವಾಸವನ್ನು ಜನವರಿ 2 ರಂದು ಕೈಗೊಳ್ಳಲಾಗುವುದು. ಈ ದಿನಾಂಕದಂದು ಸ್ಥಿರ, ಚರಗಳಲ್ಲದೆ ಸದ್ಯ ಎಂಬ ಎಂಬ ಒಟ್ಟು ಮೂರು ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಮೂರು ಯೋಗಗಳು ನಿರ್ಮಾಣಗೊಂಡ ಸಂದರ್ಭದಲ್ಲಿ ಪೂಜೆ ಸಲ್ಲಿಸುವುದುರಿಂದ ದುಪ್ಪಟ್ಟು ಫಲಪ್ರಾಪ್ತಿಯಾಗುತ್ತದೆ.

ಈ ಉಪವಾಸದ ಮಹತ್ವವೇನು?
ವೈಕುಂಠ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ಉಪವಾಸದ ಬಗ್ಗೆ ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದಾನೆ. ಇದರಿಂದ ಸುಸಂತಾನ ಪ್ರಾಪ್ತಿಯಾಗುವುದರ ಜೊತೆಗೆ  ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂಆಗುತ್ತವೆ. ನಿಮ್ಮ ಮಗುವಿನ ಆರೋಗ್ಯ ಚೆನ್ನಾಗಿಲ್ಲದಿದ್ದರೂ, ನೀವು ಈ ಉಪವಾಸವನ್ನು ಆಚರಿಸಬೇಕು. ಈ ಉಪವಾಸದ ಮಹತ್ವವನ್ನು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಪೂಜೆಗೆ ವಿಧಿ-ವಿಧಾನ ಇಲ್ಲಿದೆ
>> ಈ ದಿನ, ಬೆಳಗ್ಗೆ ಬೇಗನೆ ಎದ್ದು ಉಪವಾಸದ ಸಂಕಲ್ಪ ಮಾಡಿ ಮತ್ತು ದೈನಂದಿನ ಆಚರಣೆಗಳು ಮತ್ತು ಸ್ನಾನ ಇತ್ಯಾದಿಗಳ ನಂತರ ಪೂಜೆ ಮಾಡಿ. ಈ ವ್ರತದಲ್ಲಿ ವಿಷ್ಣುವಿನ ಜೊತೆಗೆ ಬಾಲ ಗೋಪಾಲನನ್ನೂ ಪೂಜಿಸಬೇಕು.

>> ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಸ್ವಚ್ಛವಾದ ಸ್ಥಳದಲ್ಲಿ ಶ್ರೀ ವಿಷ್ಣುವಿನ ಭಾವಚಿತ್ರ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸಿ. ಅವನ ಬಳಿ ಬಾಲ ಗೋಪಾಲನ ಚಿತ್ರವನ್ನು ಇರಿಸಿ. ನಂತರ ಚಿತ್ರಗಳು ಅಥವಾ ವಿಗ್ರಹಗಳಿಗೆ ಹಸುವಿನ ಹಾಲಿನಿಂದ ಅಭಿಷೇಕ ನೆರವೇರಿಸಿ.

>> ಇದಾದ ಬಳಿಕ ಅವರಿಗೆ ಹೂಮಾಲೆಯನ್ನು ಅರ್ಪಿಸಿ, ಕುಂಕುಮ ತಿಲಕವನ್ನು ಹಚ್ಚಿ. ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ ನಂತರ ಅಬಿರ್, ಗುಲಾಲ್, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿ.

>> ಕಾಲೋಚಿತ ಹಣ್ಣುಗಳೊಂದಿಗೆ ನೈವೇದ್ಯವನ್ನು ದೇವರಿಗೆ ಅರ್ಪಿಸಿ ಮತ್ತು ಅದರಲ್ಲಿ ತುಳಸಿ ಎಲೆಗಳನ್ನು ಇರಿಸಿ. ದೇವರಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ.

ಇದನ್ನೂ ಓದಿ-Vastu Tips 2023: ಹೊಸವರ್ಷದಂದು ಮನೆಯ ಮುಖ್ಯದ್ವಾರದ ಬಳಿ ಇರಲಿ ಈ 6 ಸಂಗತಿಗಳು

>> ಶ್ರೀವಿಷ್ಣುವಿನ ಆರತಿಯ ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಿ. ಈ ವ್ರತವನ್ನು ಆಚರಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.

ಇದನ್ನೂ ಓದಿ-Chanakya Niti: ಹುಂಜದ ಈ 4 ಅಭ್ಯಾಸಗಳಲ್ಲಡಗಿದೆ ಯಶಸ್ಸಿನ ಗುಟ್ಟು, ಅನುಸರಿಸುವವರಿಗೆ ಯಶಸ್ಸು ಗ್ಯಾರಂಟಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.