2023ರಲ್ಲಿ ರೂಪುಗೊಳ್ಳುವ ಗಜ ಲಕ್ಷ್ಮೀ ಯೋಗದಿಂದ ಲಕ್ಷಾಧೀಶರಾಗುತ್ತಾರೆ ಈ ಮೂರು ರಾಶಿಯವರು .!

ಗುರುವಿನ ಶುಭ ಪರಿಣಾಮಗಳಿಂದ ವ್ಯಕ್ತಿಯು ಜೀವನದಲ್ಲಿ ಸಂತೋಷ,  ಸಮೃದ್ಧಿಯನ್ನು ಪಡೆಯುತ್ತಾನೆ. ಗುರುವಿನ ಈ ರಾಶಿ ಪರಿವರ್ತನೆಯಿಂದ ಮೂರು  ರಾಶಿಯವರು ಭಾರೀ ಪ್ರಯೋಜನವನ್ನು ಪಡೆಯಲಿದ್ದಾರೆ. 

Written by - Ranjitha R K | Last Updated : Dec 28, 2022, 02:26 PM IST
  • ಮೇಷ ರಾಶಿ ಪ್ರವೇಶಿಸಲಿರುವ ದೇವಗುರು
  • ರೂಪುಗೊಳ್ಳುತ್ತಿದೆ ಗಜಲಕ್ಷ್ಮಿ ಯೋಗವು
  • ಮೂರು ರಾಶಿಯವರು ಭಾರೀ ಪ್ರಯೋಜನ ಪಡೆಯಲಿದ್ದಾರೆ
2023ರಲ್ಲಿ ರೂಪುಗೊಳ್ಳುವ ಗಜ ಲಕ್ಷ್ಮೀ ಯೋಗದಿಂದ ಲಕ್ಷಾಧೀಶರಾಗುತ್ತಾರೆ ಈ ಮೂರು ರಾಶಿಯವರು .!   title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, 2023ರಲ್ಲಿ ದೇವಗುರು ತನ್ನ ಸ್ಥಾನವನ್ನು ಬದಲಾಯಿಸಿ, ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಗುರುವಿನ ಈ  ರಾಶಿ ಪರಿವರ್ತನೆಯಿಂದ ಗಜಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಗುರುವಿನ ಶುಭ ಪರಿಣಾಮಗಳಿಂದ ವ್ಯಕ್ತಿಯು ಜೀವನದಲ್ಲಿ ಸಂತೋಷ,  ಸಮೃದ್ಧಿಯನ್ನು ಪಡೆಯುತ್ತಾನೆ. ಗುರುವಿನ ಈ ರಾಶಿ ಪರಿವರ್ತನೆಯಿಂದ ಮೂರು  ರಾಶಿಯವರು ಭಾರೀ ಪ್ರಯೋಜನವನ್ನು ಪಡೆಯಲಿದ್ದಾರೆ. 

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಈ ರಾಶಿಯವರಿಗೆ ಪ್ರಯೋಜನಕಾರಿ ಪರಿಣಮಿಸಲಿದೆ.  ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಹೊಸ ಎತ್ತರಕ್ಕೆ ಏರುತ್ತಾರೆ. ಈ ಅವಧಿಯಲ್ಲಿ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ.  ಆರ್ಥಿಕ ಲಾಭ ಹೆಚ್ಚಾಗಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ಇದನ್ನೂ ಓದಿ : Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ

ಧನು ರಾಶಿ : ಗುರುವಿನ ಸಂಚಾರವು ಧನು ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ. ವ್ಯಾಪಾರದಲ್ಲಿ ಅಪಾರ ಪ್ರಮಾಣದ ಲಾಭವಾಗಲಿದೆ. ಪ್ರೇಮ ವ್ಯವಹಾರಗಳು ಸುಮಧುರವಾಗಿರಲಿದೆ. ಈ ಅವಧಿಯಲ್ಲಿ ಹಠಾತ್ ಧನ ಲಾಭವಾಗುವುದು. ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಹೊಸ ಕೆಲಸವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. 

ಮಿಥುನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರು ಗುರುವಿನ ಸಂಚಾರದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಯಾವುದೇ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ.  ಹಳೆಯ ಹೂಡಿಕೆಯು ಈ ಅವಧಿಯಲ್ಲಿ ಉತ್ತಮ ಲಾಭವನ್ನು ನೀಡಬಹುದು. ಉದ್ಯೋಗಿಗಳ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ.

ಇದನ್ನೂ ಓದಿ : New Year 2023: ಅತ್ಯಂತ ಶುಭಯೋಗದಲ್ಲಿ ಹೊಸ ವರ್ಷದ ಆರಂಭ, ನೌಕರಿ-ವ್ಯಾಪಾರದಲ್ಲಿ ಯಶಸ್ಸಿಗಾಗಿ ಈ ಉಪಾಯ ಮಾಡಿ

 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News