Man Climbed Electricity Pole: ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಏನೆಲ್ಲಾ ಮಾಡುವುದನ್ನು ನೀವು ನೋಡಿರಬಹುದು. ಹುಡುಗಿಯನ್ನು ಇಂಪ್ರೆಸ್ ಮಾಡಲು ಕೆಲವರು ತಮ್ಮ ಹುಡುಗಿಯನ್ನು ಸುತ್ತಾಡಲು ಕರೆದುಕೊಂಡು ಹೋದರೆ, ಕೆಲವರು ತಮ್ಮ ಪ್ರಿಯತಮೆಗೆ ಇಷ್ಟವಾದ ವಸ್ತುಗಳನ್ನು ಖರೀದಿಸುತ್ತಾರೆ. ಹಲವು ಬಾರಿ ಜನ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇದರ ಒಂದು ಜ್ವಲಂತ ಉದಾಹರಣೆ ಇತ್ತೀಚೆಗಷ್ಟೇ ಮುನ್ನೆಲೆಗೆ ಬಂದಿದೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಅಪಾಯಕಾರಿ ವಿದ್ಯುತ್ ಕಂಬವನ್ನೇರಿದ್ದಾನೆ. ಇದಾದ ಬಳಿಕ ನಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಪ್ರಸ್ತುತ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರೊಬ್ಬರು ಇದನ್ನು ತಮ್ಮ Instagram ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ವಿದ್ಯುತ್ ಕಂಬದ ಮೇಲೆ ನಿಂತುಕೊಂಡಿದ್ದಾನೆ, ಎರಡೂ ಕಡೆಯಿಂದ ಅಪಾಯಕಾರಿ ತಂತಿಗಳು ಹೋಗಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಷ್ಟರಲ್ಲಿ ಆತನ ಕೈಯಲ್ಲಿ ಮೊಬೈಲ್ ಕಾಣಿಸುತ್ತಿದ್ದು, ಆ ಫೋನ್ ಅನ್ನು ಆತ ತನ್ನ ಮುಖದ ಮುಂದೆ ಹಿಡಿದುಕೊಂಡಿದ್ದಾನೆ. ಆತ ಕರೆ ಅಥವಾ ವೀಡಿಯೊ ಕರೆ ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ-Video: ಹೈದ್ರಾಬಾದ್ ನಲ್ಲಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿದ ರಸ್ತೆ, ವಿಡಿಯೋ ನೋಡಿ
ಇದಾದ ಬಳಿಕ ಇದ್ದಕ್ಕಿದ್ದಂತೆ ಪೂಜಾ ಐ ಲವ್ ಯೂ, ಪೂಜಾ ಐ ಲವ್ ಯೂ ಎಂದು ಜೋರಾಗಿ ಕಿರುಚಲು ಪ್ರಾರಂಭಿಸುತ್ತಾನೆ. ಈ ವೀಡಿಯೊ ಬಹಳ ಕಡಿಮೆ ಅವಧಿಯದ್ದಾಗಿದ್ದರೂ, ಮಾಧ್ಯಮ ವರದಿಗಳ ಪ್ರಕಾರ, ಈ ವ್ಯಕ್ತಿ ತನ್ನ ಗೆಳತಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾನೆ ಮತ್ತು ತನ್ನ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ ಎಂಬುದು ಮಾತ್ರ ನಿಜ. ವಿಡಿಯೋ ಪೋಸ್ಟ್ ಆಗುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಮಿಂಚಿನಂತೆ ವೈರಲ್ ಆಗಿದೆ.
ಇದನ್ನೂ ಓದಿ-Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ
ಈ ವೀಡಿಯೊ ಯಾವಾಗ ಚಿತ್ರಿಸಲಾಗಿದೆ ಮತ್ತು ಎಲ್ಲಿಂದ ಎಂಬುದು ದೃಢೀಕರಿಸಲಾಗಿಲ್ಲವಾದರೂ, ಜನರು ಖಂಡಿತವಾಗಿಯೂ ವಿಡಿಯೋ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ ಭಾಯಿ ...ಈತ ಶೋಲೆಯ ಧರ್ಮೇಂದ್ರನನ್ನೇ ಹಿಂದಿಕ್ಕಿದ್ದಾನೆ, ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನೀರಿನ ಟ್ಯಾಂಕ್ ಮೇಲೆ ಏರಿದರೆ, ಈತ ವಿದ್ಯುತ್ ಕಂಬವನ್ನೇ ಏರಿದ್ದಾನೆ ಎಂದಿದ್ದಾರೆ. ಇನ್ನೊಂದೆಡೆ, ಕೆಲ ಬಳಕೆದಾರರು ಈ ವಿಡಿಯೋವನ್ನು ನೋಡಿ ಭಾರಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಜೀವಕ್ಕೆ ಈ ರೀತಿಯ ಅಪಾಯ ತಂದುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.