ನವದೆಹಲಿ: ಈ ವರ್ಷ ಕಾರು ತಯಾರಕರಿಗೆ ಉತ್ತಮವಾಗಿದೆ. ಕಾರು ಮಾರಾಟದ ವಿಷಯದಲ್ಲಿ ಹಲವು ಕಂಪನಿಗಳು ಅತ್ಯುತ್ತಮ ಬೆಳವಣಿಗೆ ದಾಖಲಿಸಿವೆ. ಈ ಪೈಕಿ ಟಾಟಾ ಮೋಟಾರ್ಸ್ ಕೂಡ ಒಂದು. ಇದೀಗ ಟಾಟಾ ಮೋಟಾರ್ಸ್ ಮತ್ತೊಂದು ಮಾರಾಟದ ಮೈಲಿಗಲ್ಲು ಸಾಧಿಸಿದೆ. ಕಂಪನಿಯು 2022ರಲ್ಲಿ ಬರೋಬ್ಬರಿ 5 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಮಾಡಿದೆ.
ಕಂಪನಿಯು ಸುಮಾರು 5.25 ಲಕ್ಷ ಯುನಿಟ್‌ಗಳೊಂದಿಗೆ ಈ ವರ್ಷಕ್ಕೆ ಗುಡ್ ಬೈ ಹೇಳುವ ಹಂತದಲ್ಲಿದೆ. 1998ರಲ್ಲಿ ಬಿಡುಗಡೆಯಾದ ನಂತರ ಟಾಟಾ ಮೋಟಾರ್ಸ್‌ಗೆ ಇದು ಅತ್ಯಧಿಕ ಮಾರಾಟವಾಗಿದೆ. 2021ಕ್ಕೆ ಹೋಲಿಸಿದರೆ ಟಾಟಾ ಮೋಟಾರ್ಸ್ ಶೇ.59ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಹಿಂದೆ 2021ರಲ್ಲಿ ಟಾಟಾ 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು.
ಇದನ್ನೂ ಓದಿ: PPF Account : PPF ಖಾತೆ ತೆರೆಯಲು ಪ್ಲಾನ್ ಮಾಡುತ್ತಿರುವವರಿಗೆ ಕೇಂದ್ರದಿಂದ ಬಿಗ್ ಶಾಕ್!
ಕಾರು ಖರೀದಿದಾರರಲ್ಲಿ Suvಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಟಾಟಾ ಮೋಟಾರ್ಸ್‌ನ Suv ಪೋರ್ಟ್‌ಫೋಲಿಯೊ ಮಾರಾಟಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಕಂಪನಿಯ ನೆಕ್ಸಾನ್ ಟಾಟಾದ ಬೆಸ್ಟ್ ಸೆಲ್ಲರ್ ಕಾರು ಎನಿಸಿಕೊಂಡಿದೆ. ನೆಕ್ಸಾನ್ 2022ರಲ್ಲಿ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದೆ. ಇದು ಟಾಟಾ ಮೋಟಾರ್ಸ್ ಅನ್ನು ಭಾರತದಲ್ಲಿ 2ನೇ ಅತ್ಯುತ್ತಮ ಮಾರಾಟವಾದ ಕಾರ್ ಬ್ರ್ಯಾಂಡ್ ಅನ್ನೋ ಹೆಗ್ಗಳಿಕೆ ನೀಡಿದೆ.
ಇದಲ್ಲದೆ ಟಾಟಾ ಮೋಟಾರ್ಸ್‌ನ ಸಣ್ಣ Suv ಟಾಟಾ ಪಂಚ್ ಕೂಡ ಗ್ರಾಹಕರಿದಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದರ ಬೆಲೆ 6 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. Nexon, Togor ಮತ್ತು Tiago ಜೊತೆಗಿನ ಕಂಪನಿಯ EV ಶ್ರೇಣಿಯು ಟಾಟಾ ಮೋಟಾರ್ಸ್ ಅನ್ನು ಎಲೆಕ್ಟ್ರಿಕ್ ಕಾರುಗಳಲ್ಲಿಯೂ ನಂಬರ್ 1 ಮಾಡಿದೆ. ಟಾಟಾ ಟಿಗೊರ್ EV ಭಾರತದಲ್ಲಿ ಕಂಪನಿಯ ಅಗ್ಗದ EV ಆಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಅಗ್ಗದ ಬೆಲೆಗೆ ಎಲ್ಇಡಿ ಬಲ್ಬ್ ವಿತರಣೆ.! ವಿದ್ಯುತ್ ಬಳಕೆ ಕಡಿಮೆ ಮಾಡುವ ಹೊಸ ಪ್ಲಾನ್
ಇದಲ್ಲದೆ ಸಿಎನ್‌ಜಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ ಟಾಟಾ ಮೋಟಾರ್ಸ್ ಈ ವರ್ಷವೂ ಈ ವಿಭಾಗಕ್ಕೆ ಪ್ರವೇಶಿಸಿತು. ಕಂಪನಿಯು ಟಿಗೊರ್ ಮತ್ತು ಟಿಯಾಗೊದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿಗೆ ನೇರ ಸ್ಪರ್ಧೆಯನ್ನು ಕಂಪನಿ ಒಡ್ಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.