ನೀವು ಸ್ನಾತಕೋತ್ತರ ವಿದ್ಯಾರ್ಥಿಗಳೇ? ಹಾಗಾದರೆ ನಿಮಗಿದೆ ಇಲ್ಲಿ ಅವಕಾಶ !

 ಯುಜಿಸಿಯು ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ಘೋಷಣೆ ಮಾಡಿದೆ.

Last Updated : Nov 18, 2018, 04:11 PM IST
ನೀವು ಸ್ನಾತಕೋತ್ತರ ವಿದ್ಯಾರ್ಥಿಗಳೇ? ಹಾಗಾದರೆ ನಿಮಗಿದೆ ಇಲ್ಲಿ ಅವಕಾಶ !  title=

ನವದೆಹಲಿ: ಯುಜಿಸಿಯು ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ಘೋಷಣೆ ಮಾಡಿದೆ.

1. ಏಕೈಕ ಪುತ್ರಿಗಾಗಿ 2018-19ರ ಸ್ನಾತಕೋತ್ತರ ಇಂದಿರಾ ಗಾಂಧಿ ವಿದ್ಯಾರ್ಥಿವೇತನ

ಒಂದು ವೇಳೆ ನಿಮ್ಮ ಪೋಷಕರಿಗೆ ನೀವು ಒಬ್ಬಳೇ ಮಗಳಾಗಿದ್ದಲ್ಲಿ ನಿಮಗೆ ಈ ಶಿಷ್ಯವೇತನ ಅನ್ವಯಿಸುತ್ತದೆ.ಈ ವಿದ್ಯಾರ್ಥಿವೇತನವನ್ನು ಪಡೆಯಲು ನಿಮಗೆ 30 ವರ್ಷಕ್ಕಿಂತ ಅಧಿಕ ವಯಸ್ಸಾಗಿರಬಾರದು. ಮೊದಲ ವರ್ಷದ ಸ್ನಾತ್ತೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಇದಕ್ಕೆ ಅರ್ಜಿ ಸಲ್ಲಿಸಬಹುದು.ಎರಡು ವರ್ಷಗಳ ಕಾಲ ಪ್ರತಿ ವರ್ಷಕ್ಕೆ 36,200 ರೂ ದಂತೆ ನಿಮಗೆ ದೊರೆಯುತ್ತದೆ. ಆಸಕ್ತಿ ವಿದ್ಯಾರ್ಥಿಗಳು ಆಧಾರ್ ಸಂಖ್ಯೆ, ಛಾಯಾಚಿತ್ರ, ಹಿಂದಿನ ಶೈಕ್ಷಣಿಕ ಅಧಿವೇಶನದ ಸ್ವಯಂ-ದೃಢೀಕೃತ ಮಾರ್ಕ್ ಶೀಟ್ ಮತ್ತು ಪ್ರಸ್ತುತ ಕೋರ್ಸ್ ವರ್ಷದ ಶುಲ್ಕದ ರಸೀತಿಯನ್ನು ಸಲ್ಲಿಸಬೇಕು.

2. ವಿಶ್ವವಿದ್ಯಾಲಯ ಶ್ರೇಣಿ ಹೊಂದಿರುವವರು 2018-19 ಗಾಗಿ ಸ್ನಾತಕೋತ್ತರ ಮೆರಿಟ್ ವಿದ್ಯಾರ್ಥಿವೇತನ

ಸ್ನಾತಕೋತ್ತರ ವಿಜ್ಞಾನ, ಭೂವಿಜ್ಞಾನ, ಲೈಫ್ ಸೈನ್ಸಸ್, ಫಿಸಿಕಲ್ ಸೈನ್ಸಸ್, ವಾಣಿಜ್ಯ, ಭಾಷೆಗಳು, ಗಣಿತಶಾಸ್ತ್ರ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. ಜೊತೆಗೆ ಅವರು 30 ವರ್ಷಕ್ಕಿಂತ ಕಡಿಮೆ ವಯಸ್ಸನ್ನು ಹೊಂದಿರಬೇಕು ಮತ್ತು ತಮ್ಮ ಪದವಿಯಲ್ಲಿ ಮೊದಲ ಅಥವಾ ಎರಡನೇ ರ್ಯಾಂಕ್ ನ್ನು ಹೊಂದಿದ್ದು ಮತ್ತು ಕನಿಷ್ಠ ಶೇ 60ರಷ್ಟು ಅಂಕವನ್ನು ಪಡೆದಿರಬೇಕು ಅಂತವರು ಇದಕ್ಕೆ ಅರ್ಹರಾಗುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳಿಗೆ 3100 ರೂ ಶಿಷ್ಯವೇತನ ದೊರೆಯುತ್ತದೆ. ಇದಕ್ಕೆ ವಿದ್ಯಾರ್ಥಿಗಳು ಸ್ವಯಂಧೃಡಿಕರಿಸಿದ ಪದವಿ ಪತ್ರ,ಶಾಲಾ ಪ್ರಮಾಣ ಪತ್ರ,ಮತ್ತು ಸ್ನಾತ್ತಕೋತ್ತರ ಅಧ್ಯಯನ ಮಾಡುತ್ತಿರುವ ಸಂಸ್ಥೆಯಿಂದ ಧೃಡಿಕರಣ ಪತ್ರ ,ಮತ್ತು ಸ್ಕ್ಯಾನ್ ಮಾಡಿದ ಆಧಾರ ಕಾರ್ಡ್ ನ್ನು ಅರ್ಜಿ ಜೊತೆ ಸಲ್ಲಿಸಬೇಕು.

3. ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳಿಗೆ 2018-19ರ ಸಾಲಿನ ವೃತ್ತಿಪರ ಕೋರ್ಸುಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿವೇತನ

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ  ಮೊದಲ ವರ್ಷದ ವೃತ್ತಿಪರ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ಪ.ಜಾತಿ ಮತ್ತು ಪ. ಪಂಗಡ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಅನ್ವಯವಾಗುತ್ತದೆ.ಆದರೆ ಅವರು ಯುಜಿಸಿಯಿಂದ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾನ್ಯತೆಯನ್ನು ಪಡೆದಿರುವ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರಬೇಕು ಅಂತವರು ಈ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಎಂ.ಇ ಮತ್ತು ಎಂಟೆಕ್ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರಮವಾಗಿ 7800ರೂ ಮತ್ತು 4500 ರೂಗಳನ್ನು ಪ್ರತಿ ತಿಂಗಳಿಗೆ ವಿದ್ಯಾರ್ಥಿವೇತನ ಪಡೆಯುತ್ತಾರೆ 

ಈ ಮೇಲಿನ ಯಾವುದೇ ವಿದ್ಯಾರ್ಥಿವೇತನಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು ನವೆಂಬರ್ 30, 2018 ಕ್ಕೆ ಮೊದಲು scholarships.gov.in/fresh/login ನಲ್ಲಿ  ಅರ್ಜಿ ಸಲ್ಲಿಸಬಹುದು.

 ಇನ್ನ್ಯಾವುದೇ ಯಾವುದೇ ರೀತಿಯ ಅರ್ಜಿ ಸಹಾಯಕ್ಕಾಗಿ ಅಥವಾ ಮಾಹಿತಿಗಾಗಿ  ಆಸಕ್ತ ಅಭ್ಯರ್ಥಿಗಳು 08448709545, 08527484563 ಗೆ ಕರೆ ಮಾಡಬಹುದು.

 

Trending News