ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶಿಸಿದ್ದ ಸೌದಿ ರಾಜಕುಮಾರ- ಯುಎಸ್ ಮೀಡಿಯಾ

ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಟರ್ಕಿಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶಿಸಿದ್ದರು ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ವರದಿ ಮಾಡಿದೆ.

Last Updated : Nov 17, 2018, 10:16 AM IST
ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶಿಸಿದ್ದ ಸೌದಿ ರಾಜಕುಮಾರ- ಯುಎಸ್ ಮೀಡಿಯಾ title=

ನವದೆಹಲಿ: ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಟರ್ಕಿಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶಿಸಿದ್ದರು ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ವರದಿ ಮಾಡಿದೆ.

ಖಶೋಗಿ ಅವರು ಸೌದಿ ಅರೇಬಿಯಾದ ಅನೇಕ ದೇಶೀಯ ಮತ್ತು ಅಂತರರಾಷ್ಟ್ರೀಯ ನೀತಿಗಳ ವಿರುದ್ದ ಕಟು ಟೀಕೆ ಮಾಡಿದ್ದರು ಮತ್ತು ಅವರು ಅಮೆರಿಕದ ನಿವಾಸಿಯಾಗಲು ದೇಶದಿಂದ ಪಲಾಯನ ಮಾಡಿದ್ದರುರು. ಅಕ್ಟೋಬರ್ 2ರಂದು ಅವರು ಇಸ್ತಾಂಬುಲ್ ನಲ್ಲಿದ್ದರು ಆಗ ಸೌದಿ ರಾಯಬಾರಿ ಕಚೇರಿಗೆ ಹೋಗಿದ್ದರು ಆದರೆ ತದಂತರ ಹಿಂದಿರುಗಲಿಲ್ಲ. ಸೌದಿ ಏಜೆಂಟರು ಅವರನ್ನು ಹತ್ಯೆ ಮಾಡಿದ್ದಾರೆ ಮತ್ತು ಈ ಹತ್ಯೆಯಲ್ಲಿ  ಬಿನ್ ಸಲ್ಮಾನ್ ಪಾತ್ರವನ್ನು ಪ್ರಶ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ದಿ ವಾಷಿಂಗ್ಟನ್ ಪೋಸ್ಟ್ ನಲ್ಲಿನ ವರದಿಯ ಪ್ರಕಾರ ಖಶೋಗಿ ಹತ್ಯೆಯಲ್ಲಿ ಬಿನ್ ಸಲ್ಮಾನ್  ಪಾತ್ರವಿದೆ ಎಂದು ಸಿಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಿಐಎ ವರದಿಯಂತೆ  ಸಲ್ಮಾನ್ ಅವರು ಅವರನ್ನು ಕೊಳ್ಳುವುದಕ್ಕೆ ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದೆ.

ಈಗ ಅವರ ಹತ್ಯೆವಿಚಾರದ ತನಿಖೆಯನ್ನು ಇಲ್ಲಿನ ಸ್ಥಳೀಯ ಪ್ರಾಸಿಕ್ಯೂಟರ್ನೊಂದಿಗೆ ಟರ್ಕಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ, ಸೌದಿಯ ರಾಯಭಾರಿ ಕಚೇರಿಯೊಳಗೆ ಖಶೋಘಿ ಕೊಲ್ಲಲ್ಪಟ್ಟಿದ್ದಾರೆ.ದೇಹದ ಮೇಲೆ ಎಸಿಡ್ ಸುರಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Trending News