ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತ

Fake Liquor Tragedy: ಮಂಗಳವಾರ (ಡಿಸೆಂಬರ್ 13) ಬಿಹಾರದ ಛಾಪ್ರಾ ಜಿಲ್ಲಾ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸೇವಿಸಿದ ಪರಿಣಾಮ ಇದುವರೆಗೂ 39 ಮಂದಿ ಮೃತಪಟ್ಟಿದ್ದಾರೆ. 

Written by - Yashaswini V | Last Updated : Dec 15, 2022, 03:52 PM IST
  • ಬಿಹಾರದ ಛಾಪ್ರಾ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳವಾರ (ಡಿಸೆಂಬರ್ 13) ಕೆಲವು ಸ್ಥಳೀಯರು ಮದ್ಯಪಾನ ಮಾಡಿ ಮನೆಗೆ ಹೋದ ಬಳಿಕ ತಡರಾತ್ರಿ ಅಸ್ವಸ್ಥರಾಗಿದ್ದಾರೆ.
  • ಈ ಘಟನೆಯಲ್ಲಿ ಮೊದಲಿಗೆ ಐದು ಮಂದಿ ಮೃತಪಟ್ಟಿದ್ದರು.
  • ಅಲ್ಲಿಂದೀಚೆಗೆ ಇದುವರೆಗೆ ನಕಲಿ ಮದ್ಯ ಸೇವನೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ ಆಗಿದೆ.
ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತ  title=
Fake Liquor Tragedy

Fake Liquor Tragedy: ಬಿಹಾರದ ಛಾಪ್ರಾ ಜಿಲ್ಲಾ ವ್ಯಾಪ್ತಿಯಲ್ಲಿ ನಕಲಿ ಮದ್ಯ ದುರಂತದಲ್ಲಿ ಇದುವರೆಗೂ 39 ಮಂದಿ ಮೃತಪಟ್ಟಿರುವುದಾಗಿ ವರದಿ ಆಗಿದೆ. ಬಿಹಾರ ರಾಜ್ಯದ ಛಾಪ್ರಾ ಜಿಲ್ಲೆಯ ಮಶ್ರಖ್, ಇಸುಪುರ್, ಅಮ್ನೌರ್ ಮತ್ತು ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಲಾಖಾ ಕ್ರಮದ ಅಡಿಯಲ್ಲಿ, ಮಶ್ರಾಖ್‌ನ ಎಸ್‌ಎಚ್‌ಒ ರಿತೇಶ್ ಮಿಶ್ರಾ ಮತ್ತು ಕಾನ್‌ಸ್ಟೆಬಲ್ ವಿಕೇಶ್ ತಿವಾರಿ ಎಂಬುವವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ. 

ಇದನ್ನೂ ಓದಿ- ಬೆಳಗಾವಿ ಗಡಿ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು ಗೊತ್ತೇ?

ಏತನ್ಮಧ್ಯೆ, ಮರ್ಹೌರಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ಯೋಗೇಂದ್ರ ಕುಮಾರ್ ವಿರುದ್ಧ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ- Railway Recruitment 2022 : ರೈಲ್ವೆ ಇಲಾಖೆಯಲ್ಲಿ PUC ಪಾಸಾದವರಿಗೆ ಉದ್ಯೋಗಾವಕಾಶ : ₹29,200 ಸಂಬಳ

ಏನಿದು ಘಟನೆ?
ವಾಸ್ತವವಾಗಿ, ಬಿಹಾರದ ಛಾಪ್ರಾ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳವಾರ (ಡಿಸೆಂಬರ್ 13) ಕೆಲವು ಸ್ಥಳೀಯರು ಮದ್ಯಪಾನ ಮಾಡಿ ಮನೆಗೆ ಹೋದ ಬಳಿಕ ತಡರಾತ್ರಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯಲ್ಲಿ ಮೊದಲಿಗೆ ಐದು ಮಂದಿ ಮೃತಪಟ್ಟಿದ್ದರು. ಅಲ್ಲಿಂದೀಚೆಗೆ ಇದುವರೆಗೆ ನಕಲಿ ಮದ್ಯ ಸೇವನೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News