Benas Benefits ಸಾಮಾನ್ಯವಾಗಿ ಬೀನ್ಸ್ ಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಆಹಾರದಲ್ಲಿ ಪ್ರೋಟೀನ್‌ನ ಆಗರವಾಗಿವೆ. ಇನ್ನೊಂದೆಡೆ , ಬೀನ್ಸ್ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹಾಗೂ ಫೈಬರ್ ಸಮೃದ್ಧ ಮೂಲಗಳಾಗಿವೆ
Benas Benefits ಸಾಮಾನ್ಯವಾಗಿ ಬೀನ್ಸ್ ಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಆಹಾರದಲ್ಲಿ ಪ್ರೋಟೀನ್‌ನ ಆಗರವಾಗಿವೆ. ಇನ್ನೊಂದೆಡೆ , ಬೀನ್ಸ್ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹಾಗೂ ಫೈಬರ್ ಸಮೃದ್ಧ ಮೂಲಗಳಾಗಿವೆ. ಹೀಗಾಗಿ ದೈನಂದಿನ ಆಹಾರದಲ್ಲಿ ಬೀನ್ಸ್ ಗಳನ್ನು ಶಾಮೀಲುಗೊಳಿಸಲು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ -Kidney Stone ಸಮಸ್ಯೆ ನಿವಾರಣೆಗೆ ಇಲ್ಲಿದೆ ರಾಮಬಾಣ, ನಿತ್ಯ ಈ 3 ಜ್ಯೂಸ್ ಸೇವಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
1. ಕಡಲೆ ನಾರಿನ ಅತ್ಯುತ್ತಮ ಮೂಲವಾಗಿದೆ. ಕಡಲೆ ಸೇವನೆಯು ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕಡಲೆಯನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರಿಂದ ತೂಕ ಕೂಡ ಇಳಿಕೆಯಾಗುತ್ತದೆ
2. ಬಟಾಣಿಗಳು ಪ್ರೋಟೀನ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ, ಇವು ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ದೇಹದಲ್ಲಿ ಆರೋಗ್ಯಕರ ಸಕ್ಕರೆ ಮಟ್ಟವನ್ನು ಕಾಪಾಡುತ್ತವೆ. ಮತ್ತೊಂದೆಡೆ, ಬಟಾಣಿಗಳು ವಿಟಮಿನ್ ಕೆ ಮತ್ತು ಕರಗುವ ಕೊಬ್ಬಿನ ಉತ್ತಮ ಮೂಲಗಲಾಗಿವೆ, ಇವು ಮೂಳೆಗಳನ್ನು ಸಹ ಬಲಪಡಿಸುತ್ತದೆ.
3. ರಾಜ್ಮಾ ಒಂದು ಸ್ವಾದಿಷ್ಟ ಮತ್ತು ಆರೋಗ್ಯಕರ ಬೇಳೆಕಾಳಾಗಿದೆ. ರಾಜ್ಮಾದಲ್ಲಿ ನಾರಿನಂಶ ಹೇರಳವಾಗಿದ್ದು ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
4. ಸೋಯಾಬೀನ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಮತ್ತು ಮೂಳೆಗಳಿಗೆ ಪ್ರಯೋಜನಕಾರಿಯಾಗಿದೆ.
5. ಶೇಂಗಾ ಬೀಜಗಳಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ಪ್ರೊ-ಚೈನ್, ಬಿ ಮತ್ತು ಫೈಬರ್ ಸಮೃದ್ಧವಾಗಿದೆ. ಶೇಂಗಾ ಬೀಜ ಸೇವಿಸುವುದರಿಂದ ಮಧುಮೇಹ, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.