ನಾಪತ್ತೆಯಾಗಿದ್ದ ಮಹಿಳೆಯನ್ನು ಮೊಬೈಲ್ ಆಪ್ ಮೂಲಕ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?

ಹೌದು, ನಾಪತ್ತೆಯಾಗಿದ್ದ 19 ವರ್ಷದ ಮಹಿಳೆಯನ್ನು ಈಗ ತೆಲಂಗಾಣದ ಪೊಲೀಸರು ಕೇವಲ ಮೊಬೈಲ್ ಆಪ್ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

Last Updated : Oct 25, 2018, 01:29 PM IST
ನಾಪತ್ತೆಯಾಗಿದ್ದ ಮಹಿಳೆಯನ್ನು ಮೊಬೈಲ್ ಆಪ್ ಮೂಲಕ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ? title=

ನವದೆಹಲಿ: ಹೌದು, ನಾಪತ್ತೆಯಾಗಿದ್ದ 19 ವರ್ಷದ ಮಹಿಳೆಯನ್ನು ಈಗ ತೆಲಂಗಾಣದ ಪೊಲೀಸರು ಕೇವಲ ಮೊಬೈಲ್ ಆಪ್ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

ಸುಮಾರು ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಪೋಷಕರು ಹುಡುಕಿ ಕೊನೆಗೂ ತಮ್ಮ ಮತ್ತೆ ಸಿಗುವ ಆಸೆಯನ್ನು ಕಳೆದುಕೊಂಡಿದ್ದರು.ಆದರೆ ಅದೃಷ್ಟವಶಾತ್ ಈಗ ತೆಲಂಗಾಣ ಪೊಲೀಸರು ಆಪ್ ಮೂಲಕ ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಆಪ್ ವಾಟ್ಸಪ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದ್ದು ವೀಡಿಯೋ,ಪೋಟೋ,ಹಾಗೂ ಸ್ಥಳಗಳನ್ನು ಮತ್ತು ದಾಖಲೆಗಳನ್ನು ಇದರ ಮೂಲಕ ಕಳುಹಿಸಬಹುದು.ಅಲ್ಲದೆ ಇದು ಮುಖದ ಗುರುತಿಸುವಿಕೆಯನ್ನು ಆಯ್ಕೆಯನ್ನು ಸಹ ಹೊಂದಿದೆ.ಜನವರಿ 2014 ರಲ್ಲಿ ಖಮ್ಮಮ್ ಜಿಲ್ಲೆಯ ಆಕೆಯ ನಿವಾಸದಿಂದ ದೇವಿಯು ಕಾಣೆಯಾಗಿದ್ದು, ಅವರ ಕುಟುಂಬವು ಗರ್ಲಾ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದರು.ಆಕೆ ನಾಲ್ಕು ವರ್ಷಗಳಾದರೂ ಪತ್ತೆಯಾಗಿರಲಿಲ್ಲ 

ಹೈದರಾಬಾದ್ ಗೆ ಬಂದಿದ್ದ ಆಕೆಯನ್ನು ಚೈಲ್ಡ್ ಹೆಲ್ಪ್ ಲೈನ್ ಕೇಂದ್ರ ಆಕೆಯನ್ನು ಪತ್ತೆ ಹಚ್ಚಿ ಮಕ್ಕಳ ಕಲ್ಯಾಣ ಆಯೋಗಕ್ಕೆ ಆಕೆಯನ್ನು ಹಸ್ತಾಂತರಿಸಲಾಯಿತು.

ಮಾಹಿತಿ ತಂತ್ರಜ್ಞಾನದ ಅಧಿಕಾರಿಗಳು ನಾಪತ್ತೆಯಾಗಿದ್ದವರ ಪೋಟೋಗಳನ್ನು ಪರಿಶೀಲಿಸುತ್ತಿದ್ದಾಗ ಆಕೆಯ ಪೋಟೋ ಹೊಂದಾನಿಕೆಯಾಗಿ ಆಕೆಯನ್ನು ಪತ್ತೆಹಚ್ಚಲಾಗಿದೆ.ತಕ್ಷಣ ಗರ್ಲಾ ಪೊಲೀಸರಿಗೆ ಈ ಮಾಹಿತಿಯನ್ನು ರವಾನಿಸಲಾಗಿದೆ.ಅವರು ಪೋಷಕರನ್ನು ಸಂಪರ್ಕಿಸಿದರು. ನಂತರ ಪೋಷಕರು ಆಶ್ರಯ ಮನೆಗೆ ಭೇಟಿ ನೀಡಿ ತಮ್ಮ ಮಗಳನ್ನು ಗುರುತಿಸಿದರು.

Trending News