ದಿನಭವಿಷ್ಯ 18-11-2022: ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲ

Horoscope  18 November 2022:  18 ನವೆಂಬರ್ 2022 ಶುಕ್ರವಾರದಂದು ಗ್ರಹಗಳ ರಾಜನಾದ ಸೂರ್ಯನು ಬುಧ-ಶುಕ್ರರ ಸಮೇತನಾಗಿ ವೃಶ್ಚಿಕ ರಾಶಿಯಲ್ಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.

Written by - Zee Kannada News Desk | Last Updated : Nov 18, 2022, 06:38 AM IST
  • ಮಿಥುನ ರಾಶಿಯವರಿಗೆ ಈಗ ಸಮಯ ಶುಭಕರವಾಗಿದೆ
  • ಕನ್ಯಾ ರಾಶಿಯವರಿಗೆ ಗುರುವಿನ ಬಲದಿಂದ ಅನಿರೀಕ್ಷಿತವಾಗಿ ಕಾರ್ಯ ಸಾಧನೆ ಸಾಧ್ಯತೆ
  • ಮಕರ ರಾಶಿಯವರ ಜೀವನ ಈ ದಿನ ಸ್ವಲ್ಪ ಗೊಂದಲಮಯವಾಗಿರಲಿದೆ
ದಿನಭವಿಷ್ಯ 18-11-2022:  ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲ  title=
Todays Horoscope

ದಿನಭವಿಷ್ಯ 18-11-2022 :    ದಿನಾಂಕ- 18 ನವೆಂಬರ್ 2022, ವಾರ- ಶುಕ್ರವಾರ, ತಿಥಿ- ಬಹುಳ ದಶಮಿ, ನಕ್ಷತ್ರ-  ಪೂರ್ವ ಪಾಲ್ಗುಣಿ, ಯೋಗ-ವೈದ್ರುತಿ, ಕರಣ- ವಣಿ. ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ತಿಳಿಯಿರಿ.

ಮೇಷ ರಾಶಿ: ಈ ರಾಶಿಯವರಿಗೆ ಮಕ್ಕಳ ವಿಚಾರದಲ್ಲಿ ಶುಭ. ಪೂರ್ವ ಪುಣ್ಯದಲ್ಲಿ ಶುಭ. ವಿದೇಶಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಗೆಲುವು ಸಾಧ್ಯತೆ.

ವೃಷಭ ರಾಶಿ: ಈ ರಾಶಿಯವರಿಗೆ ಮನೆಗೆ ಸಂಬಂಧಪಟ್ಟ ಕೆಲಸಗಳು ಸ್ಥಗಿತಗೊಂಡಿದ್ದರೆ ಅವು ಮತ್ತೆ ಆರಂಭವಾಗುವ ಸಮಯ. ಜೊತೆಗೆ ಸರ್ಕಾರಿ ಕೆಲಸಗಳೇನಾದರೂ ಇದ್ದರೆ ಈ ಸಮಯದಲ್ಲಿ ಬಹಳಷ್ಟು ಲಾಭವನ್ನು ತರಲಿದೆ. 

ಮಿಥುನ ರಾಶಿ: ಈ ರಾಶಿಯವರಿಗೆ ಈಗ ಸಮಯ ಶುಭಕರವಾಗಿದೆ. ಆದರೆ, ಅಶುಭಕರ ಕನಸುಗಳು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಈ ಬಗ್ಗೆ ಹುಷಾರಾಗಿರಿ. ಅಷ್ಟಮದ ಶನಿ ಪ್ರಭಾವ ಇರುವುದರಿಂದ ಹನುಮಾನ್ ಚಾಲೀಸಾವನ್ನು ಹೇಳುವುದರಿಂದ ಕೆಲಸ-ಕಾರ್ಯ ಸಿದ್ಧಿ.

ಕರ್ಕಾಟಕ ರಾಶಿ: ಮನೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಕಾಂಪೌಂಡ್ ಬೀಳುವುದು, ಮನೆಯ ಬಳಿ ಸರ್ಪ ಕಾಣಬಹುದು ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಮಾನಸಿಕ ಸಿದ್ಧಿ ಸಾಧ್ಯತೆ. ಹಳೆಯ ಜಮೀನು ವ್ಯಾದೆಗಳಲ್ಲಿ ಯಶಸ್ಸು.

ಇದನ್ನೂ ಓದಿ- Mercury Transit 2022: ಡಿಸೆಂಬರ್ 3ರವರೆಗೆ ಈ ರಾಶಿಯವರಿಗೆ ಕೈತುಂಬಾ ಹಣ ನೀಡಲಿದ್ದಾನೆ ಬುಧ

ಸಿಂಹ ರಾಶಿ: ಈ ರಾಶಿಯವರಿಗೆ ಪರಾಕ್ರಮದಿಂದ ಸ್ವಲ್ಪ ಸಮಸ್ಯೆ. ಅತೀ ಪರಾಕ್ರಮ ಒಳ್ಳೆಯದಲ್ಲ. ಆದರೆ, ಈಗ ಸಮಯ ಅನುಕೂಲಕರವಾಗಿದೆ. ಮನೆ ಕಟ್ಟುವ ವಿಚಾರದಲ್ಲಿ ಯಶಸ್ಸು. 

ಕನ್ಯಾ ರಾಶಿ: ಈ ರಾಶಿಯವರಿಗೆ ಗುರುವಿನ ಬಲದಿಂದ ಅನಿರೀಕ್ಷಿತವಾಗಿ ಕಾರ್ಯ ಸಾಧನೆ ಸಾಧ್ಯತೆ. ಗುರು-ಹಿರಿಯರಿಂದ ಮಾರ್ಗದರ್ಶನ ದೊರೆಯಲಿದ್ದು ಕಾರ್ಯ ಸಿದ್ಧಿಯಾಗಲಿದೆ. 

ತುಲಾ ರಾಶಿ: ಈ ರಾಶಿಯವರಿಗೆ ನೀವಿರುವ ಜಾಗದಲ್ಲಿಯೇ ಸಮಸ್ಯೆ. ಮನೆ ರಿನೋವೇಶನ್ ವಿಚಾರಕ್ಕೆ ಕಿರಿಕಿರಿ. ಮೂರನೆಯವರ ಸಮಸ್ಯೆಯ ಬಿಸಿ ನಿಮಗೂ ತಾಗುವ ಸಾಧ್ಯತೆ ಇರುವ ದಿನ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಚರ್ಮ ವ್ಯಾದಿಗಳು, ಮಾನಸಿಕ ಕಿರಿಕಿರಿ ಜೊತೆಗೆ ಭೂತಪ್ರೇತಗಳ ಕಾಟ ಕಾಡಬಹುದು ಹುಷಾರಾಗಿರಿ. ಗುರು ಬಲ ಇದೆ, ಆದರೂ ಆರೋಗ್ಯದಲ್ಲಿ ಅದರಲ್ಲೂ ವಯಕ್ತಿಯ ಸಮಸ್ಯೆಗಳು ಕಾಡಬಹುದು.

ಇದನ್ನೂ ಓದಿ- Vastu Tips: ಮರೆತೂ ಸಹ ಯಾರಿಂದಲೂ ಈ ವಸ್ತುವನ್ನು ಫ್ರೀ ಆಗಿ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಭಾರೀ ನಷ್ಟ!

ಧನು ರಾಶಿ: ಈ ರಾಶಿಯವರಿಗೆ ಸಪ್ತಮಾದಿಪತಿಯ ಕುಜ ನೇರ ದೃಷ್ಟಿ ಇರುವುದರಿಂದ ಸ್ವಲ್ಪ ಮಾತಿನಿಂದ ತೊಂದರೆ ಆಗಬಹುದು. ಮಕ್ಕಳಿಂದ ಹೆಸರು ಕೆಡುವ ಸಾಧ್ಯತೆ ಇರುತ್ತದೆ.

ಮಕರ ರಾಶಿ: ಈ ರಾಶಿಯವರ ಜೀವನ ಈ ದಿನ ಸ್ವಲ್ಪ ಗೊಂದಲಮಯವಾಗಿರಲಿದೆ. ಜೊತೆಗೆ ಈ ರಾಶಿಯವರು ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಅಸಮರ್ಥ ಭಾವನೆ ಕಾಡುತ್ತದೆ. ಶೀಘ್ರದಲ್ಲೇ ಜ್ಯೋತಿಷ್ಯರ ಸಲಹೆ ಪಡೆಯುವುದು ಒಳ್ಳೆಯದು.

ಕುಂಭ ರಾಶಿ: ಈ ರಾಶಿಯವರಿಗೆ ಪರಮಾತ್ಮನ ಕೃಪೆಯಿಂದ ಅಂದುಕೊಂಡಿದ್ದನ್ನು ಸಿದ್ದಿಪಡಿಸಿಕೊಳ್ಳುವ ದಿನ. ಸಣ್ಣ-ಪುಟ್ಟ ಪ್ರಯಾಣದ ಅವಕಾಶ ಸಿಗಬಹುದು. ಕುಲದೇವತೆ ಅನುಗ್ರಹದಿಂದ ಕಾರ್ಯ ಸಿದ್ಧಿ.

ಮೀನ ರಾಶಿ: ಈ ರಾಶಿಯವರಿಗೆ ಕುಟುಂಬಕ್ಕೆ ಸಂಬಂಧಿಸಿದಂತೆ ಕೋರ್ಟು-ಕಚೇರಿ ಅಲೆಯುವ ಸಾಧ್ಯತೆಗಳು ಬರಬಹುದು. ಆದರೆ, ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಾರ್ಯಸಿದ್ಧಿ. ಜೊತೆಗೆ ಗುಪ್ತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. 

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News