10ನೇ ವಯಸ್ಸಿನಲ್ಲೇ ಈ ಭಾರತೀಯ ಬಾಲಕನಿಗೆ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

ಭಾರತದ 10 ವರ್ಷದ ಬಾಲಕ ಆರ್ಶ್ದೀಪ್ ಸಿಂಗ್ ಬ್ರಿಟನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೈಪ್ನಲ್ಲಿ ಅಡಗಿರುವ ಎರಡು ಗೂಬೆಗಳ ಚಿತ್ರವನ್ನು ತೆಗೆದಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ 10 ವರ್ಷದ ಒಳಗೆ ಮತ್ತು 11-14 ಹಾಗೂ 15-17 ವಯಸ್ಸಿನ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Last Updated : Oct 18, 2018, 07:48 PM IST
10ನೇ ವಯಸ್ಸಿನಲ್ಲೇ ಈ ಭಾರತೀಯ ಬಾಲಕನಿಗೆ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ title=
Photo:facebook

ನವದೆಹಲಿ: ಭಾರತದ 10 ವರ್ಷದ ಬಾಲಕ ಆರ್ಶ್ದೀಪ್ ಸಿಂಗ್ ಬ್ರಿಟನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೈಪ್ನಲ್ಲಿ ಅಡಗಿರುವ ಎರಡು ಗೂಬೆಗಳ ಚಿತ್ರವನ್ನು ತೆಗೆದಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ 10 ವರ್ಷದ ಒಳಗೆ ಮತ್ತು 11-14 ಹಾಗೂ 15-17 ವಯಸ್ಸಿನ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಪಂಜಾಬ್ ನ  ಕಪುರ್ಥಾಲಾದಲ್ಲಿ  ತಂದೆಯ ಜೊತೆ ಹೋಗುತ್ತಿದ್ದಾಗ ಈ ಎರಡು ಗೂಬೆಗಳನ್ನು ನೋಡಿದ ಆರ್ಶ್ದೀಪ್ ಕಾರನ್ನು ತಮ್ಮ ತಂದೆಗೆ ನಿಲ್ಲಿಸುವಂತೆ ಹೇಳಿ ಈ ಪೋಟೋವನ್ನು ಸೆರೆ ಹಿಡಿದ್ದರು. ಈ ಪಕ್ಷಿಗಳು ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲಿ ಮಾತ್ರ ಕಂಡು ಬರುತ್ತವೆ.ಹಗಲಿನಲ್ಲಿ ಅವು ಹೊರಕ್ಕೆ ಬರುವುದು ತುಂಬಾ ಅಪರೂಪ ಎನ್ನಬಹುದು.ಈ ಹಿನ್ನಲೆಯಲ್ಲಿ ಈಗ ಅವನ್ನು ಹಗಲಿನಲ್ಲಿ ವಿಶಿಷ್ಟವಾಗಿ ಸೆರೆ ಹಿಡಿದಿದ್ದಕ್ಕೆ ಅವರಿಗೆ ಪ್ರಶಸ್ತಿ ಲಭಿಸಿದೆ.

ಆರನೇ ವಯಸ್ಸಿನಲ್ಲಿ  ಪೋಟೋ ತೆಗೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಆರ್ಶ್ದೀಪ್ ತಮ್ಮ ತಂದೆಯ ಜೊತೆ ಆಗಾಗ ಪೋಟೋಗಳನ್ನು ತೆಗೆಯಲು ಪ್ರಯಾಣ ಮಾಡುತ್ತಲೇ ಇರುತ್ತಾರೆ. ಅವರ ತಂದೆ ರಂದೀಪ್ ಸಿಂಗ್ ಕೂಡ ಪ್ರಸಿದ್ದ ಪೋಟೋ ಗ್ರಾಫರ್ ರಾಗಿದ್ದಾರೆ. 

ಆರ್ಶ್ದೀಪ್ ಇತ್ತೀಚೆಗೆ ಜೂನಿಯರ್ ಏಷ್ಯನ್ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ ಅವರು ತೆಗೆದಿರುವ  ಪೋಟೋಗಳು ಲೋನ್ಲಿ ಪ್ಲಾನೆಟ್ ಯುಕೆ, ಲೋನ್ಲಿ ಪ್ಲಾನೆಟ್ ಜರ್ಮನಿ, ಲೋನ್ಲಿ ಪ್ಲಾನೆಟ್ ಇಂಡಿಯಾ, ಬಿಬಿಸಿ ವೈಲ್ಡ್ ಲೈಫ್ ಯುಕೆ ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲಾಗಿದೆ.

Trending News