ಬೆಳಗಾವಿ: ಮಾಜಿ ಸಚಿವ ಅಂಬರೀಶ್ ಕಡೆಗೂ ಆರನೇ ದಿನದ ಕಲಾಪದ ಮಧ್ಯಾಹ್ನದ ಕಲಾಪಕ್ಕೆ ಹಾಜರಾಗಿದ್ದಾರೆ. ನ.13 ರಿಂದ ಪ್ರಾರಂಭವಾದ ಸದನಕ್ಕೆ ಶಾಸಕ ಅಂಬರೀಶ್ ಗೈರಾಗಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.
ಸದನಕ್ಕೆ ಬರದೆ ನಟಿಯರೊಂದಿಗೆ ನೃತ್ಯದಲ್ಲಿ ತೊಡಗಿದ್ದಾರೆಂಬ ಚರ್ಚೆ ಕೂಡ ಎಲ್ಲೆಡೆ ನಡೆದಿತ್ತು. ಅಂತೂ ಇಂತೂ ಕಡೆಗೂ ಅಂಬರೀಶ್ ಇಂದಿನ ಕಲಾಪಕ್ಕೆ ಹಾಜರಾದರು.
ಇದೇ ಸಂದರ್ಭದಲ್ಲಿ ದೀಪಿಕಾ ಪದುಕೊಣೆಗೆ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿರುವ ಅವರು ಪ್ರಜಾಪ್ರಭುತ್ವದಲ್ಲಿ ಯಾರೇ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಈ ರೀತಿಯ ಹೇಳಿಕೆ ಯಾರೇ ನೀಡಿದ್ದರು ಅದು ತಪ್ಪು ಎಂದು ಖಂಡಿಸಿದ್ದಾರೆ.