Your Nails Tell Your Fortune: ನಿಮ್ಮ ಬೆರಳಿನ ಉಗುರುಗಳು ಕೂಡ ಹೇಳುತ್ತವೆ ನಿಮ್ಮ ಭವಿಷ್ಯ ಗೊತ್ತಾ?

Your Nails Tell Your Fortune: ನಮ್ಮ ಆರೋಗ್ಯದ ಕುರಿತು ಹೇಳುವ ನಮ್ಮ ಬೆರಳ ಉಗುರುಗಳು, ನಮ್ಮ ಸ್ವಭಾವದ ಕುರಿತು ಕೂಡ ಹಲವು ಸಂಗತಿಗಳನ್ನು ಹೇಳುತ್ತವೆ.

Written by - Nitin Tabib | Last Updated : Apr 10, 2021, 05:54 PM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಸಂಗತಿಗೂ ಒಂದು ಅರ್ಥ ಇದೆ.
  • ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಉಗುರುಗಳು ಭವಿಷ್ಯ ಕೂಡ ಹೇಳುತ್ತವೆ.
  • ಹಾಗಾದರೆ ಬನ್ನಿ ಉಗುರುಗಳ ಯಾವ ಸಂಗತಿ ಭವಿಷ್ಯ ಸೂಚಿಸುತ್ತದೆ ತಿಳಿದುಕೊಳ್ಳೋಣ.
Your Nails Tell Your Fortune: ನಿಮ್ಮ ಬೆರಳಿನ ಉಗುರುಗಳು ಕೂಡ ಹೇಳುತ್ತವೆ ನಿಮ್ಮ ಭವಿಷ್ಯ ಗೊತ್ತಾ? title=
Your Nails Tell Your Fortune (File Photo)

Your Nails Tell Your Fortune: ಜ್ಯೋತಿಷ್ಯ ಶಾಸ್ತ್ರ (Astrology) ದಲ್ಲಿ ಪ್ರತಿಯೊಂದು ಸಂಗತಿಗೆ ತನ್ನದೇ ಆದ ಆರ್ಥ ಕಲ್ಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಬೆರಳಿನ ಉಗುರುಗಳು ನಮ್ಮ ದೇಹದ ಮಹತ್ವಪೂರ್ಣ ಭಾಗಗಳಾಗಿವೆ. ಆದರೆ, ಕೇವಲ ಉಗುರುಗಳನ್ನು ಗಮನಿಸಿ ಯಾವುದೇ ಓರ್ವ ವ್ಯಕ್ತಿಯ ಬಗ್ಗೆ ನೀವು ಸುಲಭವಾಗಿ ತಿಳಿದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ನಮ್ಮ ಆರೋಗ್ಯದ ಕುರಿತು ಹೇಳುವ ನಮ್ಮ ಬೆರಳ ಉಗುರುಗಳು, ನಮ್ಮ ಸ್ವಭಾವದ ಕುರಿತು ಕೂಡ ಹಲವು ಸಂಗತಿಗಳನ್ನು ಹೇಳುತ್ತವೆ.

ಉದ್ದವಾದ ಉಗುರಗಳು - ಆಕಾರದಲ್ಲಿ ಉದ್ದವಾದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ನಿಯಮ ಪಾಲಕರಾಗಿರುತ್ತಾರೆ. ಇದರಿಂದ ಭವಿಷ್ಯದಲ್ಲಿ ನಡೆಯುವ ಶುಭ ಕಾರ್ಯದ ಸಂಕೇತ ಸಿಗುತ್ತದೆ. ಯಾವ ವ್ಯಕ್ತಿಯ ಕಿರುಬೆರಳ ಉಗುರಿನಲ್ಲಿ ಬಿಳಿ ಚಿಹ್ನೆ ಇದ್ದರೆ, ಅವರು ವ್ಯಾಪಾರದಲ್ಲಿ ಲಾಭ ಸಂಪಾದಿಸುತ್ತಾರೆ.

ಉಗುರಿನ ಮೇಲೆ ಅರ್ಧ ಚಂದ್ರ - ಸಾಮಾನ್ಯವಾಗಿ ಉಗುರಿನಲ್ಲಿ ಅರ್ಧ ಚಂದ್ರ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಈ ಆಕೃತಿ ಕೆಲವರಲ್ಲಿ ಹೆಚ್ಚಾಗಿದ್ದರೆ, ಕೆಲವರಲ್ಲಿ ಕಡಿಮೆ ಅಥವಾ ಇರುವುದೂ ಕೂಡ ಇಲ್ಲ. ಉಗುರಿನ ಮೂಲ ಭಾಗದಲ್ಲಿ ಅರ್ಧ ಚಂದ್ರನ ಆಕೃತಿ ಇದ್ದರೆ, ಈ ಆಕೃತಿ ಶುಭವಾಗಿ ಜಾತಕದ ಅಭಿವುರ್ದ್ಧಿಯ ಸಂಕೇತ ನೀಡುತ್ತದೆ. ನಿಕಟ ಭವಿಷ್ಯದಲ್ಲಿ ಈ ಜಾತಕವವರು ಯಶಸ್ಸು ಸಾಧಿಸುತ್ತಾರೆ ಎಂಬ ಸಂಕೇತ ಸಿಗುತ್ತದೆ.

ಇದನ್ನೂ ಓದಿ- Two Days Amavasya This Month: ಈ ತಿಂಗಳು ಎರಡು ದಿನ ಅಮಾವಾಸ್ಯೆ,, ನಿಮ್ಮನ್ನಗಲಿದವರಿಗಾಗಿ ಈ ಕೆಲಸ ಮಾಡಿ

ಉಗುರಿನಲ್ಲಿ ತಗ್ಗುಗಳು - ಯಾವುದೇ ಓರ್ವ ವ್ಯಕ್ತಿಯ ಉಗುರಿನಲ್ಲಿ ತೆಗ್ಗುಗಳಿದ್ದರೆ, ಅದು ಸಂಕಷ್ಟ ಸೂಚಿಸುತ್ತದೆ. ಇಂತಹ ವ್ಯಕ್ತಿಗಳು ಎಚ್ಚರಿಕೆಯಿಂದ ಇರಬೇಕು ಮತ್ತು ಶಾಂತವಾಗಿರಬೇಕು.

ಇದನ್ನೂ ಓದಿ- Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ

ಉಗುರಿನಲ್ಲಿ ಕಪ್ಪು ಕಲೆಗಳು - ಯಾವುದೇ ಓರ್ವ ವ್ಯಕ್ತಿಯ ಉಗುರಿನಲ್ಲಿ ಕಪ್ಪು ಕಲೆಗಳಿದ್ದರೆ ಅಂದು ಅಪಯಶ ಹಾಗೂ ಹಾನಿಯನ್ನು ಸೂಚಿಸುತ್ತದೆ. ಇಂತಹ ಜನರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಿಸಬಹುದು.

ಇದನ್ನೂ ಓದಿ- Success Mantra: ಮಕ್ಕಳು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಈ ಅದ್ಭುತ ಉಪಾಯಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News