ಆಹಾರದಲ್ಲಿ ಈ ಒಂದು ಸಂಗತಿ ಸೇರಿಸಿ, ನೈಸರ್ಗಿಕವಾಗಿ ಕೂದಲು ಕಪ್ಪಾಗುತ್ತವೆ, ಡೈ ಬೇಕಾಗುವುದಿಲ್ಲ!

White Hair Home Remedies: ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಡಯಟ್ ಪ್ರಮುಖ ಪಾತ್ರ ವಹಿಸುತ್ತದೆ. ಬನ್ನಿ ಈ ಕುರಿತು ಮಾಹಿತಿಯನ್ನು ಪಡೆದುಕೊಳ್ಳೋಣ (Lifestyle News In Kannada)  

Written by - Nitin Tabib | Last Updated : Dec 21, 2023, 09:11 PM IST
  • ವಾಸ್ತವದಲ್ಲಿ ಈ ಬೀಜಗಳು ಸೆಲೆನಿಯಮ್, ತಾಮ್ರ, ಸತು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ,
  • ಅವು ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುತ್ತವೆ. ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ.
  • ಈ ಬೀಜಗಳು ನಿಮ್ಮ ಕೂದಲು ಬಿಳಿಯಾಗುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದವೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಆಹಾರದಲ್ಲಿ ಈ ಒಂದು ಸಂಗತಿ ಸೇರಿಸಿ, ನೈಸರ್ಗಿಕವಾಗಿ ಕೂದಲು ಕಪ್ಪಾಗುತ್ತವೆ, ಡೈ ಬೇಕಾಗುವುದಿಲ್ಲ! title=

ಬೆಂಗಳೂರು: ಆಧುನಿಕ ಕಾಲದಲ್ಲಿ, ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ, ಜನರು ಚಿಕ್ಕ ವಯಸ್ಸಿನಲ್ಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳು ಕೂದಲು ಬೀಳಿಯಾಗುವುದು ಕೂಡ ಒಂದು. ಕೂದಲು ಬಿಳಿಯಾಗಲು ಕಾರಣವೆಂದರೆ ಮಾಲಿನ್ಯ, ಕಳಪೆ ಆಹಾರ ಮತ್ತು ಹಾರ್ಮೋನುಗಳ ಅಸಮತೋಲನ, ಒತ್ತಡ ಇತ್ಯಾದಿ . ಇಂತಹ ಪರಿಸ್ಥಿತಿಯಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ನಿಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗಬಾರದು ಎಂದು ನೀವೂ ಬಯಸುತ್ತಿದ್ದರೆ, ಇದಕ್ಕಾಗಿ ನೀವು ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಂದು ನಾವು ನಿಮ್ಮ ಕೂದಲನ್ನು ಕಪ್ಪಾಗಿಸುವ ಆಹಾರಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)

ಬೀಜಗಳಿಂದ ನಿಮ್ಮ ಕೂದಲನ್ನು ಕಪ್ಪಾಗಿಸಬಹುದು
ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಡಯಟ್ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದ ಮೂಲಕ ನಿಮ್ಮ ಕೂದಲು ಒಳಗಿನಿಂದ ಕಪ್ಪಾಗುತ್ತದೆ. ಈ ಆಹಾರದಲ್ಲಿ ಹಲವು ವಿಧದ ಬೀಜಗಳನ್ನು ಶಾಮೀಲಾಗಿವೆ. ಕುಂಬಳಕಾಯಿ, ಅಗಸೆಬೀಜ, ಸೂರ್ಯಕಾಂತಿಗಳಂತಹ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಬೂದು ಕೂದಲು ಕಪ್ಪಾಗಲು ಅವು ಸಹಾಯ ಮಾಡುತ್ತವೆ.

ವಾಸ್ತವದಲ್ಲಿ ಈ ಬೀಜಗಳು ಸೆಲೆನಿಯಮ್, ತಾಮ್ರ, ಸತು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಅವು ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುತ್ತವೆ. ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ. ಈ ಬೀಜಗಳು ನಿಮ್ಮ ಕೂದಲು ಬಿಳಿಯಾಗುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದವೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ನೀವು ದಟ್ಟ, ಮೃದು ಮತ್ತು ಕಪ್ಪು ಕೂದಲು ಬಯಸುತ್ತಿದ್ದರೆ, ಈ ಬೀಜಗಳನ್ನು ಸಾಧ್ಯವಾದಷ್ಟು ಸೇವಿಸಿ.

ಕೂದಲನ್ನು ಕಪ್ಪಾಗಿಸಲು ಬೀಜಗಳನ್ನು ಹೇಗೆ ಸೇವಿಸಬೇಕು
ನೀವು ಈ ಬೀಜಗಳನ್ನು ಚಟ್ನಿ, ಸಲಾಡ್, ಸ್ಮೂಥಿಗಳು ಮುಂತಾದ ಹಲವು ವಿಧಗಳಲ್ಲಿ ಬಳಸಬಹುದು. ಇದರೊಂದಿಗೆ, ರೊಟ್ಟಿ ಮಾಡುವಾಗ ಹಿಟ್ಟಿನಲ್ಲಿ ಬೆರೆಸಲು ಕೂಡ ಬಳಸಬಹುದು.

ಯಾವ ಬೀಜಗಳನ್ನು ಸೇವಿಸಬಹುದು
ಅಗಸೆ ಬೀಜಗಳು:
ಕೂದಲನ್ನು ಕಪ್ಪಾಗಿಸಲು ಅಗಸೆ ಬೀಜಗಳನ್ನು ಸೇವಿಸಿ. ಇದನ್ನು ಹುರಿದು ಪ್ರತಿದಿನ 1 ಚಮಚ ತಿನ್ನಿರಿ.
ಸೂರ್ಯಕಾಂತಿ ಬೀಜಗಳು: ಕೂದಲು ಬಿಳಿಯಾಗುವ ಸಮಸ್ಯೆಯನ್ನು ಕಡಿಮೆ ಮಾಡಲು, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ನೀವು ಅವುಗಳನ್ನು ಹುರಿಯದೆ ಅಥವಾ ಸ್ಮೂಥಿಗಳೊಂದಿಗೆ ಸೇವಿಸಬಹುದು.

ಇದನ್ನೂ ಓದಿ-ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ಈ ಡ್ರಿಂಕ್, ತಯಾರಿಸುವುದು ಕೂಡ ತುಂಬಾ ಸಿಂಪಲ್ಲಾಗಿದೆ!

ಚಿಯಾ ಬೀಜಗಳು: ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಚಿಯಾ ಬೀಜಗಳನ್ನು ಸೇವಿಸಿ. ಅವುಗಳನ್ನು ಸ್ಮೂಥಿಗಳು, ಮೊಸರು, ಲಸ್ಸಿ, ಪಾನೀಯಗಳೊಂದಿಗೆ ಸೇವಿಸಬಹುದು.

ಇದನ್ನೂ ಓದಿ-ಕೂದಲುದುರುವಿಕೆ ಸಮಸ್ಯೆಗೆ ಪರಿಹಾರ ಈ ಹಳದಿ ಹೂವಿನಲ್ಲಡಗಿದೆ, ಹೇಗೆ ಬಳಸಬೇಕು? ಇಲ್ಲಿದೆ ವಿಧಾನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News