ಬುಧವಾರದ ದಿನ ಈ ದೇವರನ್ನು ಈ ನಿಯಮಗಳ ಪ್ರಕಾರ ಪೂಜಿಸಿದರೆ ಸಿಗುತ್ತದೆಯಂತೆ ಶುಭ ಫಲ

ಬುಧವಾರದ ಉಪವಾಸವನ್ನು  7 ಬುಧವಾರದವರೆಗೆ ಮಾಡಬೇಕು ಮತ್ತು ಇದನ್ನು ಶುಕ್ಲ ಪಕ್ಷದ ತಿಂಗಳಲ್ಲಿ ಆರಂಭಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.   

Written by - Ranjitha R K | Last Updated : Sep 22, 2021, 02:38 PM IST
  • ಬುಧವಾರದ ದಿನ ಗಣೇಶನಿಗೆ ಅರ್ಪಣೆ
  • ಬುಧವಾರ ಗಣಪತಿ ಪೂಜೆ, ಉಪವಾಸ ಮಾಡಿದರೆ ಒಳ್ಳೆಯದು
  • ಬುಧವಾರದ ಪೂಜಾ ನಿಯಮ ಹೇಗಿದೆ ತಿಳಿಯಿರಿ
ಬುಧವಾರದ ದಿನ  ಈ ದೇವರನ್ನು ಈ ನಿಯಮಗಳ ಪ್ರಕಾರ ಪೂಜಿಸಿದರೆ ಸಿಗುತ್ತದೆಯಂತೆ ಶುಭ ಫಲ  title=
ಬುಧವಾರದ ದಿನ ಗಣೇಶನಿಗೆ ಅರ್ಪಣೆ (file photo)

ನವದೆಹಲಿ : ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ವಾರದ ಪ್ರತಿ ದಿನವೂ ವಿವಿಧ ದೇವತೆಗಳಿಗೆ ಸಮರ್ಪಿಸಲಾಗಿದೆ. ಬುಧವಾರ ಕೂಡ ಬಹಳ ವಿಶೇಷವಾದ ದಿನವಾಗಿದ್ದು, ಈ ದಿನ ಗಣೇಶನನ್ನು ಪೂಜಿಸಲಾಗುತ್ತದೆ (Ganesha Pooja). ಈ ದಿನ ಗಣೇಶನನ್ನು (Lord Ganesha) ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಮತ್ತು ಉಪವಾಸವನ್ನು ಕೂಡಾ ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಬುಧವಾರದ ಉಪವಾಸದ ವಿಧಾನ ಮತ್ತು ಅದರ ಪ್ರಯೋಜನಗಳನ್ನು ನೋಡೋಣ.

ಬುಧವಾರದ ಉಪವಾಸದ ಪೂಜಾ ವಿಧಾನ :
ಬುಧವಾರದ ಉಪವಾಸವನ್ನು (Wednesday fasting) 7 ಬುಧವಾರದವರೆಗೆ ಮಾಡಬೇಕು ಮತ್ತು ಇದನ್ನು ಶುಕ್ಲ ಪಕ್ಷದ ತಿಂಗಳಲ್ಲಿ ಆರಂಭಿಸುವುದು ಸೂಕ್ತ ಎಂದು ಹೇಳಲಾಗುತ್ತದೆ. 
1.ಪಿತೃ ಪಕ್ಷದಲ್ಲಿ (Pitru paksha) ಯಾವುದೇ ಉಪವಾಸ ಆರಂಭಿಸಬಾರದು ಎನ್ನುವುದು ತಿಳಿದಿರಲಿ
2.ಬುಧವಾರ ಬೆಳಿಗ್ಗೆ, ಸ್ನಾನ-ಧ್ಯಾನದ ನಂತರ, ಮೊದಲು ಗಣೇಶನ ಮೂರ್ತಿಯನ್ನು ತಾಮ್ರದ ಪಾತ್ರೆಯಲ್ಲಿ ಪ್ರತಿಷ್ಠಾಪಿಸಿ.
3.ಪೂಜೆ ಮಾಡುವ ವೇಳೆ, ಪೂರ್ವ ದಿಕ್ಕಿಗೆ ಮುಖ ಮಾಡುವುದು ಮಂಗಳಕರ. ಪೂರ್ವಕ್ಕೆ ಮುಖ ಮಾಡಲು ಸಾಧ್ಯವಾಗದಿದ್ದರೆ, ನೀವು ಉತ್ತರಕ್ಕೆ ಮುಖ ಮಾಡಿ ಪೂಜೆಯನ್ನು ಆರಂಭಿಸಬಹುದು.
4.ಆಸನದ ಮೇಲೆ ಕುಳಿತು, ಗಣೇಶ ದೇವರನ್ನು (Lord Ganesha) ಹೂವು, ಧೂಪ, ದೀಪ, ಕರ್ಪೂರ, ಶ್ರೀಗಂಧದಿಂದ ಪೂಜಿಸಿ.
5. ಇದರ ನಂತರ, ಗಣೇಶನಿಗೆ ಮೋದಕವನ್ನು ಅರ್ಪಿಸಿ ಮತ್ತು ದೇವರನ್ನು ಧ್ಯಾನಿಸುವಾಗ "ಓಂ ಗನ್ ಗಣಪತಯೇ ನಮಃ"
ಈ ಮಂತ್ರವನ್ನು 108 ಬಾರಿ ಜಪಿಸಿ. 

ಇದನ್ನೂ ಓದಿ : Snake Appearing In Dreams: ಪದೇ ಪದೇ ಕನಸಲ್ಲಿ ಹಾವು ಕಂಡ್ರೆ ಏನರ್ಥ?

ಬುಧವಾರ ಉಪವಾಸಕ್ಕಿರುವ ನಿಯಮಗಳು :
1. ಬುಧವಾರದ ಉಪವಾಸದ ಸಮಯದಲ್ಲಿ ಉಪ್ಪು ಸೇವಿಸಬಾರದು
2.ಬುಧವಾರ, ಗಣೇಶನಿಗೆ ತುಪ್ಪ (Ghee)ಮತ್ತು ಬೆಲ್ಲವನ್ನು ಅರ್ಪಿಸಿ ಮತ್ತು ಈ ಭೋಗವನ್ನು ಹಸುವಿಗೆ ತಿನ್ನಿಸಿ.
3.ಬುಧವಾರ ವೃತದ ಕಥೆಯನ್ನು ಓದಿ, ಮತ್ತು ಆರತಿಯನ್ನೂ ಬೆಳಗಿ. 
4.ಬುಧವಾರ ಹಸಿರು ಬಟ್ಟೆ ಧರಿಸುವುದು ಶುಭ ಎಂದು ನಂಬಲಾಗಿದೆ.

ಬುಧವಾರದ ಉಪವಾಸದ ಪ್ರಯೋಜನಗಳು
ನಂಬಿಕೆಗಳ ಪ್ರಕಾರ, ಬುಧವಾರ ಉಪವಾಸ ಮಾಡುವ ವ್ಯಕ್ತಿಯ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಕೀರ್ತಿ ಉಳಿಯುತ್ತದೆಯಂತೆ.
1.ಈ ಉಪವಾಸವನ್ನು ಆಚರಿಸಿದರೆ ಮನೆಯಲ್ಲಿ ಆಹಾರಕ್ಕೆ ಕೊರತೆ ಇರುವುದಿಲ್ಲ. 
2.ಬುಧವಾರ ಗಣೇಶನನ್ನು ಪೂಜಿಸುವುದರಿಂದ (ganesha pooja) ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
3.ಬುಧ ಗ್ರಹವನ್ನು ಬುಧವಾರ ಪೂಜಿಸುವುದರಿಂದ, ಜಾತಕದಲ್ಲಿ ಬುಧ ಗ್ರಹ ಉತ್ತಮ ಸ್ಥಾನದಲ್ಲಿರುತ್ತದೆ ಎನ್ನಲಾಗಿದೆ.
4.ನೀವು ಗಳಿಸಿದ ಹಣ ವ್ಯರ್ಥವಾಗುತ್ತಿದ್ದರೆ, ಬುಧವಾರ ಉಪವಾಸ ಮಾಡಿ.

ಇದನ್ನೂ ಓದಿ : ಪಿತೃ ಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯಿರಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News