Lifestyle: ಸಂಬಂಧದಲ್ಲಿ ಬಿರುಕು ಮೂಡದಿರಲು ಹೇಗಿರಬೇಕು..? ಸಂಗಾತಿಯನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು.. 

Good Relationship: ಇತ್ತಿಚೀನ ದಿನಗಳಲ್ಲಿ ಪ್ರೀತಿ ಮಾಡಿ ಕೆಲವೇ ದಿನಗಳಲ್ಲಿ ಬ್ರೇಕಪ್‌, ಮದುವೆ ಕೆಲವೇ ತಿಂಗಳಲ್ಲಿ ಡಿವೋರ್ಸ್‌ ಆಗುವ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರೀತಿ ಪಾತ್ರರನ್ನು ಕಾಪಾಡಿಕೊಳ್ಳಲು ಇಲ್ಲಿವೆ ಒಂದಿಷ್ಟು ಸಲಹೆಗಳು..

Written by - Zee Kannada News Desk | Last Updated : Apr 24, 2023, 07:40 PM IST
  • ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಸಂಗತಿಯೊಂದಿಗಿನ ನಡವಳಿಕೆ ಮುಖ್ಯ
  • ಇತ್ತಿಚೀನ ದಿನಗಳಲ್ಲಿ ಡಿವೋರ್ಸ್‌ ಸಂಖ್ಯೆ ಹೆಚ್ಚಳ
  • ಪ್ರೀತಿ ಪಾತ್ರರನ್ನು ಕಾಪಾಡಿಕೊಳ್ಳಲು ಒಂದಿಷ್ಟು ಸಲಹೆ ಪಾಲಿಸುವುದು ಅಗತ್ಯ
Lifestyle: ಸಂಬಂಧದಲ್ಲಿ ಬಿರುಕು ಮೂಡದಿರಲು ಹೇಗಿರಬೇಕು..? ಸಂಗಾತಿಯನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು..  title=

Lifestyle: ಇತ್ತಿಚೀನ ದಿನಗಳಲ್ಲಿ ಪ್ರೀತಿ ಮಾಡಿ ಕೆಲವೇ ದಿನಗಳಲ್ಲಿ ಬ್ರೇಕಪ್‌, ಮದುವೆ ಕೆಲವೇ ತಿಂಗಳಲ್ಲಿ ಡಿವೋರ್ಸ್‌ ಆಗುವ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಕ್ತಿಗಳ ಮನಸ್ಥಿತಿ ಹಾಗೂ ಕೆಲವೊಂದು ಪರಿಸ್ಥಿಯನ್ನು ಅರ್ಥ ಮಾಡಿಕೊಳ್ಳದೇ ಎಷ್ಟೋ ಸಂಬಂಧಗಳಲ್ಲಿ ಇಂದು ಬಿರುಕು ಮೂಡುತ್ತಿದೆ. ಇನ್ನು ಕೆಲವು ವ್ಯಕ್ತಿಗಳು ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಹರಸಾಹಸ ಪಡುತ್ತಿರುತ್ತಾರೆ. ಪ್ರೀತಿ ಪಾತ್ರರನ್ನು ಕಾಪಾಡಿಕೊಳ್ಳಲು ಇಲ್ಲಿವೆ ಒಂದಿಷ್ಟು ಸಲಹೆಗಳು..

ಸಂಬಂಧ ಎಂದರೆ ಹಾಗೆ ಎಲ್ಲ ಸಮಯದಲ್ಲೂ ಒಂದೇ ರೀತಿ ಇರಲು ಕಷ್ಟಕರವಾಗುತ್ತದೆ. ಪರಿಸ್ಥಿಗೆ ತಕ್ಕಂತೆಯೇ ಇರಬೇಕಾಗುತ್ತದೆ. ಬಾಂಧವ್ಯದಲ್ಲಿ ಯಾವುದೇ ಪರಿಸ್ಥಿತಿ ಇದ್ದರೂ ಹೊಂದಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. 

ಸಂಗತಿಯನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು..

ಇದನ್ನೂ ಓದಿ:  Mouth Ulcer : ಬೇಸಿಗೆ ಬೇಗೆಗೆ ಬಾಯಲ್ಲಿ ಹುಣ್ಣು ಆಗುತ್ತಿದೆಯೇ..! ಹಾಗಿದ್ದರೇ ಇಲ್ಲಿದೆ ಪರಿಹಾರ

  • ಪ್ರೀತಿ ಅಥವಾ ಸ್ನೇಹ, ಕುಟುಂಬವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರಬೇಕು.
  • ಸಂಬಂಧಗಳನ್ನು ಕಾಪಾಡಿಕೊಳ್ಳಲು ಒಳ್ಳೆಯ ಸಂವಹನ ನಡೆಸುವುದು ಮುಖ್ಯವಾಗಿದೆ
  • ಇಬ್ಬರೂ ತಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು  ಮುಕ್ತವಾಗಿ ಹಂಚಿಕೊಳ್ಳಬೇಕು
  • ಸಂಗಾತಿಗೆ  ಉತ್ತಮ ಮಿತಿಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ 
  • ಪ್ರೀತಿ ಪಾತ್ರರಿಗೆ ಪರಸ್ಪರರ ಸಮಯ ಮತ್ತು ಆದ್ಯತೆಗಳನ್ನು ನೀಡುವುದು  ಅರ್ಥಮಾಡಿಕೊಳ್ಳುವುದು ಪರಸ್ಪರ  ಗೌರವಿಸುವುದು ಮುಖ್ಯ
  • ಪರಸ್ಪರ ಭಾವನೆಗಳು ಮತ್ತು ಅನುಭವಗಳನ್ನು ಒಪ್ಪಿಕೊಳ್ಳುವುದು .
  • ಮೂರನೆ ವ್ಯಕ್ತಿ ಮಾತಿಗೆ ಕಿವಿಗೊಡೊವುದನ್ನು ನಿಲ್ಲಿಸಬೇಕು
  • ಯಾವುದೇ ಪರಿಸ್ಥಿತಿ ಇದ್ದರೂ ತಾಳ್ಮೆಯಿಂದ ಯೋಚಿಸಿ, ಸತ್ಯ ತಿಳಿದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ..
  • ಯಾವುದೇ ಹೊಸತನ ಆಯ್ಕೆಯಲ್ಲಿ ಇಬ್ಬರ ಸಮ್ಮತ ಮುಖ್ಯವಾಗಿದೆ. 
  • ಸಂಗಾತಿ ಮಾಡುವ ಕೆಲಸದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವುದು 
  • ಅನುಮಾನ ಬಂದಲ್ಲಿ ಇಬ್ಬರು ಕುಳಿತು ಚರ್ಚಿಸುವ ಗುಣ ಹೊಂದಿರಬೇಕು. 

    ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
    Android Link - https://bit.ly/3hDyh4G
    Apple Link - https://apple.co/3hEw2hy
    ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

     

Trending News