Weight Loss Tips: ರೊಟ್ಟಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ?

ರೊಟ್ಟಿ ತಿಂದರೆ ತೂಕ ಹೆಚ್ಚುತ್ತದೆಯೋ ಇಲ್ಲವೋ? ಈ ಪ್ರಶ್ನೆ ಹೆಚ್ಚಿನ ಜನರ ಮನಸ್ಸಿನಲ್ಲಿ ಬರುತ್ತದೆ, ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ತಿನ್ನಬೇಕೇ ಅಥವಾ ಬೇಡವೇ ಅನ್ನೋದರ ಬಗ್ಗೆ ಆಹಾರ ತಜ್ಞರ ಅಭಿಪ್ರಾಯವನ್ನು ತಿಳಿಯಿರಿ.

Written by - Puttaraj K Alur | Last Updated : Nov 29, 2022, 01:33 PM IST
  • ಮಧ್ಯಮ ಗಾತ್ರದ ರೊಟ್ಟಿ 40 ಗ್ರಾಂ ಇರಲಿದ್ದು, 120 ಕ್ಯಾಲೋರಿಗಳನ್ನು ಹೊಂದಿರುತ್ತದೆ
  • ಪುರುಷರಿಗೆ ದಿನಕ್ಕೆ 1700 ಕ್ಯಾಲೋರಿ ಬೇಕಾಗುತ್ತದೆ, ಹೀಗಾಗಿ ಮಧ್ಯಾಹ್ನ ಮತ್ತು ರಾತ್ರಿ 3 ರೊಟ್ಟಿ ಸೇವಿಸಬೇಕು
  • ಮಹಿಳೆಯರಿಗೆ ದಿನಕ್ಕೆ 1400 ಕ್ಯಾಲೋರಿ ಬೇಕಾಗುತ್ತವೆ, ಮಧ್ಯಾಹ್ನ ಮತ್ತು ರಾತ್ರಿ 2 ರೊಟ್ಟಿ ಸೇವಿಸಬಹುದು
Weight Loss Tips: ರೊಟ್ಟಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ?   title=
ತೂಕ ನಷ್ಟಕ್ಕೆ ರೊಟ್ಟಿ ಸೇವಿಸಬೇಕಾ?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಆಹಾರದ ಮೂಲಕ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಬಹುತೇಕ ಜನರಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಅನ್ನೋ ಪ್ರಶ್ನೆ ಯಾವಾಗಲೂ ಮನಸ್ಸಿನಲ್ಲಿರುತ್ತದೆ. ಡಯಟ್ ಮಾಡುವಾಗ ರೊಟ್ಟಿ ತಿನ್ನಬೇಕೋ ಬೇಡವೋ ಎಂಬ ಅನುಮಾನ ಕೂಡ ಜನರಲ್ಲಿದೆ. ನೀವೂ ಸಹ ಈ ಗೊಂದಲದಲ್ಲಿದ್ದರೆ ಡಯಟೀಷಿಯನ್‌ಗಳ ಅಭಿಪ್ರಾಯವೇನು ಅನ್ನೋದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ: Tomato Benefits : ಚಳಿಗಾಲದಲ್ಲಿ ಟೊಮೆಟೊದಿಂದ ಮಾಡಿದ ಈ ಆಹಾರ ಸೇವಿಸಿ! ಶೀತಕ್ಕೆ ಹೇಳಿ ಬೈ ಬೈ

ರೊಟ್ಟಿ ತಿಂದರೆ ತೂಕ ಹೆಚ್ಚುತ್ತದೆಯೋ ಇಲ್ಲವೋ?

ಗೋಧಿ ರೊಟ್ಟಿಯು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವ ಜನರು ಇದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ರೊಟ್ಟಿ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ರಿಚಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ರೊಟ್ಟಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಅವರು ವಿವರಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರೊಟ್ಟಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಆಹಾರವಾಗಿದೆ ಎಂದು ಹೇಳಿದ್ದಾರೆ.

ಒಂದು ರೊಟ್ಟಿಯಲ್ಲಿ ಎಷ್ಟು ಪೌಷ್ಟಿಕಾಂಶವಿದೆ?

ಡಾ.ರಿಚಾ ಪ್ರಕಾರ, ಮಧ್ಯಮ ಗಾತ್ರದ ರೊಟ್ಟಿಯು ಸುಮಾರು 40 ಗ್ರಾಂ ತೂಗುತ್ತದೆ ಮತ್ತು 120 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕ್ಯಾಲೋರಿ-ಸಮೃದ್ಧ ಮತ್ತು ಕಾರ್ಬೋಹೈಡ್ರೇಟ್ ಬಲವರ್ಧಿತ ಆಹಾರ ತಿನ್ನುವುದನ್ನು ತಪ್ಪಿಸಲು ನೀವು ರೊಟ್ಟಿ ತಿನ್ನಬಹುದು. ಇದಲ್ಲದೆ ರೊಟ್ಟಿಯು ವಿಟಮಿನ್ ಬಿ 1ನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕವಾಗಿದೆ ಮತ್ತು ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ಕಡಿಮೆ ಮಾಡುತ್ತದೆ. ನೀವು ಮಲ್ಟಿಗ್ರೇನ್ ರೋಟಿ ಸೇವಿಸಿದ್ರೆ ಅದರ ಗ್ಲೈಸೆಮಿಕ್ ಸೂಚ್ಯಂಕವು ಕಡಿಮೆಯಾಗಿದೆ. ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ. ಆದ್ದರಿಂದ ಮಧುಮೇಹ ರೋಗಿಗಳು ಬಹುಧಾನ್ಯದ ರೊಟ್ಟಿಯನ್ನು ಸಹ ತಿನ್ನಬಹುದು.

ಇದನ್ನೂ ಓದಿ: Side Effects of Guava: ಈ ಜನರೂ ಮರೆತೂ ಕೂಡ ಸೀಬೆ ಹಣ್ಣನ್ನು ಸೇವಿಸಬಾರದು

ದಿನಕ್ಕೆ ಎಷ್ಟು ರೊಟ್ಟಿ ತಿನ್ನಬೇಕು?

ಪುರುಷರಿಗೆ ದಿನಕ್ಕೆ ಸುಮಾರು 1700 ಕ್ಯಾಲೋರಿಗಳು ಬೇಕಾಗುತ್ತವೆ. ಆದ್ದರಿಂದ ಅವರು ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ 3 ರೊಟ್ಟಿಗಳನ್ನು ತಿನ್ನಬಹುದು. ಅದೇ ರೀತಿ ಮಹಿಳೆಯರಿಗೆ ದಿನಕ್ಕೆ 1400 ಕ್ಯಾಲೋರಿಗಳು ಬೇಕಾಗುತ್ತವೆ. ಅವರು ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ 2 ರೊಟ್ಟಿಗಳನ್ನು ತಿನ್ನಬಹುದು. ಇದಲ್ಲದೆ ತರಕಾರಿಗಳು ಮತ್ತು ಸಲಾಡ್ ಅನ್ನು ರೊಟ್ಟಿಯೊಂದಿಗೆ ತೆಗೆದುಕೊಳ್ಳಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News