Weight Loss Tips: ಮೊಸರನ್ನು ಈ ರೀತಿ ಬಳಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದಂತೆ!

Weight Loss Tips: ನೀವು ಕೂಡ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಮೊಸರು ನಿಮಗೆ ಬಹಳ ಉಪಯುಕ್ತವಾಗಿದೆ.

Written by - Yashaswini V | Last Updated : Aug 2, 2021, 02:15 PM IST
  • ಕೊಬ್ಬು ಮತ್ತು ತೂಕ ಇಳಿಕೆಗೆ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಎರಡೂ ಅಗತ್ಯ
  • ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ
  • ಮೊಸರು ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವಾಗಿದೆ, ಆದ್ದರಿಂದ ಇದು ತೂಕ ಇಳಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ
Weight Loss Tips: ಮೊಸರನ್ನು ಈ ರೀತಿ ಬಳಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದಂತೆ! title=
Reduce Weight With Curd

Weight Loss Tips: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಿಗೆ ಕಾಡುವ ಒಂದು ಪ್ರಮುಖ ಸಮಸ್ಯೆ ಎಂದರೆ ದೇಹದ ತೂಕ ಹೆಚ್ಚಳ. ಕಳೆದ ಕೆಲವು ವರ್ಷಗಳಲ್ಲಿ, ಕಳಪೆ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರಗಳು, ದೈಹಿಕ ನಿಷ್ಕ್ರಿಯತೆ ಮತ್ತು ನಿದ್ರೆಯ ಕೊರತೆಯಿಂದಾಗಿ ಬೊಜ್ಜು ಒಂದು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ. ಸ್ಥೂಲಕಾಯದಿಂದಾಗಿ, ಜನರು ಅನೇಕ ಗಂಭೀರ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಜನರು ತಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಅದಾಗ್ಯೂ ಸಾಕಷ್ಟು ಮಂದಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲರಾಗುತ್ತಾರೆ. ಈ ಮಧ್ಯೆ ಹಲವರು ತೂಕ ನಷ್ಟಕ್ಕೆ ಮೊಸರನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಆದರೆ ಮೊಸರು ನಿಜವಾಗಿಯೂ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡಬಹುದೇ? 

ಆಹಾರ ತಜ್ಞರು ಏನು ಹೇಳುತ್ತಾರೆ?
ಪ್ರಸಿದ್ಧ ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಕೊಬ್ಬು ಮತ್ತು ತೂಕ ಇಳಿಕೆಗೆ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಎರಡೂ ಅಗತ್ಯ. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಅವರ ಪ್ರಕಾರ, ಸ್ಥೂಲಕಾಯವನ್ನು (Obesity) ಕಡಿಮೆ ಮಾಡಲು ಮೊಸರಿನ ಸೇವನೆಯು ಸಹ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ- Kitchen Hack : ಮನೆಯಲ್ಲಿ ಕುಳಿತು ಕಲಬೆರಕೆ ಹಾಲನ್ನು ಕಂಡುಹಿಡಿಯಬಹುದು : ಹೇಗೆ ಇಲ್ಲಿದೆ ನೋಡಿ!

BMI ನಿಯಂತ್ರಣ:
ಡಾ.ರಂಜನಾ ಸಿಂಗ್ ಅವರ ಪ್ರಕಾರ, ಮೊಸರಿನಲ್ಲಿ (Curd) ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ, ಇದು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅನ್ನು ಮೇಲ್ವಿಚಾರಣೆ ಮಾಡುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಕೆಲವು ಕಿಲೋ ತೂಕವನ್ನು ಕಡಿಮೆ ಮಾಡಬಹುದು.

ಮೊಸರು ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವಾಗಿದೆ, ಆದ್ದರಿಂದ ಇದು ತೂಕ ಇಳಿಸುವ (Weight Loss) ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಮೊಸರಿನಲ್ಲಿರುವ ಪ್ರೋಟೀನ್ ನೇರ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಅರ್ಥದಲ್ಲಿ, ಮೊಸರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಚಯಾಪಚಯವನ್ನು ಹೆಚ್ಚಿಸುತ್ತದೆ:
ತಜ್ಞರ ಪ್ರಕಾರ, ಚಯಾಪಚಯವು ಪ್ರಬಲವಾಗಿರುವ ಜನರು ತೂಕವನ್ನು ಕಳೆದುಕೊಳ್ಳುವುದು ಸುಲಭ. ಮೊಸರು ಪ್ರೋ-ಬಯೋಟಿಕ್ಸ್ ಅನ್ನು ಹೊಂದಿದ್ದು ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚಯಾಪಚಯವನ್ನು ಸುಧಾರಿಸುತ್ತದೆ. ಆದ್ದರಿಂದ, ಇದು ತೂಕ ಇಳಿಸುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ- Diseases Caused By Obesity: ಸ್ಥೂಲಕಾಯದಿಂದ ಉಂಟಾಗುವ ರೋಗಗಳ ಬಗ್ಗೆ ಇರಲಿ ಎಚ್ಚರ, ಈ 5 ಟಿಪ್ಸ್ ಬಳಸಿ ತೂಕ ನಿಯಂತ್ರಿಸಿ

ಮೊಸರು ತಿನ್ನುವುದರಿಂದಾಗುವ ಲಾಭಗಳು:
>> ಮೊಸರಿನ ತಂಪಾಗಿಸುವ ಪರಿಣಾಮವು ಬೇಸಿಗೆ ಕಾಲದಲ್ಲಿ ದೇಹಕ್ಕೆ ಪ್ರಯೋಜನಕಾರಿ.
>> ಮೊಸರಿನ ಸೇವನೆಯು ನಿರ್ಜಲೀಕರಣ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.
>> ತೂಕ ಇಳಿಸಿಕೊಳ್ಳಲು ಇಚ್ಛಿಸುವವರಿಗೆ ಮೊಸರು ತಿನ್ನಲು ಸೂಚಿಸಲಾಗಿದೆ.
>> ಇದು ನಿಮ್ಮ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ
>> ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯಕ್ಕೆ ಒಳ್ಳೆಯದು.

ತೂಕ ಇಳಿಸಿಕೊಳ್ಳಲು ಮೊಸರನ್ನು ಈ ರೀತಿ ಸೇವಿಸಿ  (How to consume curd):
ನೀವು ಊಟ ಅಥವಾ ಭೋಜನದೊಂದಿಗೆ ಒಂದು ಬಟ್ಟಲು ಮೊಸರನ್ನು ಸೇವಿಸಬಹುದು, ಉಪಹಾರಕ್ಕಾಗಿ ಅದನ್ನು ಸ್ಮೂಥಿಯ ರೂಪದಲ್ಲಿ ಸೇವಿಸಬಹುದು. ತೂಕ ಇಳಿಸುವಲ್ಲಿ ರಾಯ್ತ, ಮಜ್ಜಿಗೆ ಮತ್ತು ಲಸ್ಸಿ ಕೂಡ ಪ್ರಯೋಜನಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News