ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ

Wearing Silver Anklets Benefits: ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕಾರ ಜೀವನಶೈಲಿಯಿಂದಾಗಿ ಮಹಿಳೆಯರು ಹಾರ್ಮೋನ್ ಅಸಮತೋಲನದಿಂದಾಗಿ ತೊಂದರೆಗೊಳಗಾಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಬಂಜೆತನ, ಕಾಲುನೋವು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿವೆ. 

Written by - Yashaswini V | Last Updated : Oct 31, 2023, 01:29 PM IST
  • ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಧರಿಸುವ ಸಂಪ್ರದಾಯವಿದೆ.
  • ಬೆಳ್ಳಿ ಕಾಲ್ಗೆಜ್ಜೆ ಧರಿಸಿದಾಗ ಕಾಲಿನ ಅಂದ ಇಮ್ಮಡಿಗೊಳ್ಳುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ
  • ಆದರಿದು ಕೇವಲ ಸಂಪ್ರದಾಯವಲ್ಲ ಮಹಿಳೆಯರ ಆರೋಗ್ಯವರ್ಧಕವೂ ಹೌದು.
ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ  title=

Wearing Silver Anklets Benefits: ನಮ್ಮ ಹಿರಿಯರು ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರುತ್ತಿತ್ತು. ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಧರಿಸುವ ಸಂಪ್ರದಾಯವಿದೆ. ಬೆಳ್ಳಿ ಕಾಲ್ಗೆಜ್ಜೆ ಧರಿಸಿದಾಗ ಕಾಲಿನ ಅಂದ ಇಮ್ಮಡಿಗೊಳ್ಳುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆಧ್ಯಾತ್ಮಿಕವಾಗಿ ಮಹಿಳೆಯರು ಕಾಲಿಗೆ ಬೆಳ್ಳಿ ಗೆಜ್ಜೆ ಧರಿಸುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರಲಿದೆ ಎಂಬ ನಂಬಿಕೆಯಿದೆ. ಆದರೆ, ಇದು ಕೇವಲ ಸೌಂದರ್ಯ ಹೆಚ್ಚಿಸುವ ಅಥವಾ ಹಿರಿಯರು ಜಾರಿಗೆ ತಂದಿರುವ ಸಂಪ್ರದಾಯ ಮಾತ್ರವಲ್ಲ, ಮಹಿಳೆಯರ ಆರೋಗ್ಯದ ಗಣಿಯೂ ಹೌದು ಎಂದು ನಿಮಗೆ ತಿಳಿದಿದೆಯೇ? 

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕಾರ ಜೀವನಶೈಲಿಯಿಂದಾಗಿ ಮಹಿಳೆಯರು ಹಾರ್ಮೋನ್ ಅಸಮತೋಲನದಿಂದಾಗಿ ತೊಂದರೆಗೊಳಗಾಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಬಂಜೆತನ, ಕಾಲುನೋವು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿವೆ. ಆದರೆ, ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಇಂತಹ ಹಲವು ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು. 

ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ: 
ಕಾಲು ನೋವು: 

ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಸಾಮಾನ್ಯವಾಗಿ ಮಹಿಳೆಯರು ಕಾಲು ನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ, ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಈ 5 ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಮೂಳೆಗಳಿಗೆ ಶಕ್ತಿ: 
ವಾಸ್ತವವಾಗಿ, ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕಾಲ್ಗೆಜ್ಜೆಗಳು ಪಾದದೊಂದಿಗೆ ಸಂಪರ್ಕಕ್ಕೆ ಬಂದಾಗ ಈ ಲೋಹದ ಅಂಶವೂ ಚರ್ಮಕ್ಕೆ ಉಜ್ಜಿಕೊಳ್ಳುತ್ತದೆ. ಮತ್ತೆ ಇದು ದೇಹವನ್ನು ಪ್ರವೇಶಿಸಿ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. 

ದೇಹವನ್ನು ತಂಪಾಗಿರಿಸಲು ಸಹಾಯಕ: 
ಬೆಳ್ಳಿ ದೇಹವನ್ನು ತಂಪಾಗಿಸಲು ಸಹಾಯಕವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಬೆಳ್ಳಿ ಗೆಜ್ಜೆ ಧರಿಸುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಕೂದಲುದುರುವಿಕೆ, ಬಿಳಿ ಕೂದಲನ್ನು ಕಪ್ಪಾಗಿಸಲು ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ

ರೋಗ ನಿರೋಧಕ ಶಕ್ತಿ: 
ವಿಜ್ಞಾನಿಗಳ ಪ್ರಕಾರ, ಬೆಲ್ಲಿಯೂ ಪ್ರತಿಕ್ರಿಯಾತ್ಮಕ ಲೋಹವಾಗಿದೆ. ಕಾಲಿಗೆ ಬೆಳ್ಳಿ ಗೆಜ್ಜೆ ಧರಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಪಾದಗಳಿಂದ ಹೊರಹೊಮ್ಮುವ ಭೌತಿಕ ವಿದ್ಯುತ್ ಶಕ್ತಿಯನ್ನು ದೇಹದಲ್ಲಿ ಉಳಿಸಲು ಸಹಾಯಕ ಎನ್ನಲಾಗುವುದು. 

ಹಾರ್ಮೋನ್ ಸಮತೋಲನ: 
ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಮಹಿಳೆಯಲ್ಲಿ ಹಾರ್ಮೋನ್ ಮಟ್ಟ ಸಮತೋಲನಗೊಳ್ಳುತ್ತದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ಮುಟ್ಟಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಗರ್ಭಾಶಯವನ್ನು ಆರೋಗ್ಯವಾಗಿರಿಸುವಲ್ಲಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ ಎಂದು ಹೇಳಲಾಗುತ್ತದೆ. 

ಸೂಚನೆ :  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News