Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?

Vinayaki Devi Temple - ಕನ್ಯಾಕುಮಾರಿಯ ಥಾನುಮಲಯನ್ (Thanumalayan Temple) ಹೆಸರು ತನ್ನದೇ ಆದ ಮಹಿಮೆ ಹೊಂದಿದೆ. ಸ್ತಾನುಮಲಯನ್ ಇದು ಇದರ ಶುದ್ಧ ಪದ. ಇದರಲ್ಲಿ ಸ್ತಾನು ಹೆಸರಿನ ಅರ್ಥ ಶಿವ, ಮಲಯ ಎಂದರೆ ಶ್ರೀವಿಷ್ಣು ಹಾಗೂ ಅಯನ್ ಪದದ ಅರ್ಥ ಪರಬ್ರಹ್ಮ. ಈ ದೇವಸ್ಥಾನ ಸತಿ ಅನುಸೂಯಾ ಕಥೆಯನ್ನು ಕೂಡ ಸಾರುತ್ತದೆ. ಇದೆ ದೇವಸ್ಥಾನದಲ್ಲಿ ದೇವಿ ವಿನಾಯಕಿ ವಿಗ್ರಹ ಅಂದರೆ ಶ್ರೀ ಗಣೇಶನ ಸ್ತ್ರೀ ಅವತಾರ ಕೂಡ ಇದೆ.

Written by - Nitin Tabib | Last Updated : Apr 5, 2021, 10:04 PM IST
  • 1300 ವರ್ಷಗಳಷ್ಟು ಪ್ರಾಚೀನ ಥಾನುಮಲಯನ್ ದೇವಸ್ಥಾನದಲ್ಲಿದೆ ವಿನಾಯಕಿ ದೇವಸ್ಥಾನ
  • ದಕ್ಷಿಣದ ರಾಜ್ಯ ಕನ್ಯಾಕುಮಾರಿಯಲ್ಲಿದೆ ಈ ದೇವಸ್ಥಾನ.
  • ಇಲ್ಲಿ ಗಣೇಶನ ಸ್ತ್ರೀರೂಪಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ  'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ? title=
Vinayaki Devi Temple(File Photo)

ನವದೆಹಲಿ: Vinayaki Devi Temple - ತಮಿಳುನಾಡು ನಮ್ಮ ನೆರೆ ರಾಷ್ಟ್ರ. ದಕ್ಷಿಣ ಭಾರತದ ರಾಜ್ಯವಾಗಿರುವ ಇದರ ದಕ್ಷಿಣದ ತುದಿ ಎಂದರೆ ಕನ್ಯಾಕುಮಾರಿ. ದೇವಿ ಪಾರ್ವತಿಯ ಜೊತೆಗೆ ಆಕೆಯ ಇಬ್ಬರು ಪುತ್ರರಾದ ಗಣೇಶ ಹಾಗೂ ಕಾರ್ತಿಕೇಯರಿಗೆ ಇಲ್ಲಿ ತುಂಬಾ ಮಾನ್ಯತೆ ಇದೆ. ಭಾರತದಲ್ಲಿ ಶ್ರೀಗಣೇಶನ ಹಲವು ಅವತಾರಗಳ ಹಾಗೂ ಸ್ವರೂಪಗಳ ದೇವಸ್ಥಾನಗಳು ಕಂಡುಬರುತ್ತವೆ.

ಶ್ರೀ ಗಣೇಶನ ಇಂತಹ ತೀರ್ಥಕ್ಷೇತ್ರಗಳಲ್ಲಿ ಥಾನುಮಲಯನ್ ದೇವಸ್ಥಾನ ಕೂಡ ಒಂದು. ಬ್ರಹ್ಮ-ವಿಷ್ಣು-ಮಹೇಶರಿಗಾಗಿ ವಿಶೇಷವಾಗಿರುವ ಈ ದೇವಸ್ಥಾನದಲ್ಲಿ 33 ವಿವಿಧ ದೇವಸ್ಥಾನಗಳಿವೆ. ಈ ದೇವಸ್ಥಾನ 33 ಕೋಟಿ ದೇವತೆಗಳ ಪ್ರತೀಕ ಎಂದೂ ಕೂಡ ಹೇಳಲಾಗುತ್ತದೆ. 

ಹಲವು ದೇವಸ್ಥಾನಗಳ ಮಧ್ಯೆ ಈ ದೇವಸ್ಥಾನ ಆಕರ್ಷಿಸುತ್ತದೆ
ಈ 33 ದೇವಸ್ಥಾನಗಳ ಸರಣಿಯಲ್ಲಿ ಒಂದು ದೇವಸ್ಥಾನವಿದ್ದು, ಆ ದೇವಸ್ಥಾನಕ್ಕೆ ಭೇಟಿ ನೀಡುವ ಭಾವಿಕರು ಕೂಡ ಸ್ಥಬ್ಧರಾಗುತ್ತಾರೆ. ಈ ದೇವಸ್ಥಾನದ ವಿಗ್ರಹ ಸುಖಾಸನದಲ್ಲಿದೆ. ತೆಳ್ಳಗೆ ಹಾಗೂ ಕೋಮಲ ಶರೀರದಂತೆ ಕಾಣಿಸುವ ಈ ವಿಗ್ರಹ ನಾಲ್ಕು ಕೈ ಹಾಗೂ ದಿವ್ಯ ಆಭೂಷಣ ಮತ್ತು ಶಾಸ್ತ್ರಗಳಿಂದ ಸಿಂಗಾರಗೊಂಡಿದೆ. ಮೇಲಿನ ಬಲಗೈಯಲ್ಲಿ ಕೊಡಲಿ ಹಾಗೂ ಕೆಳಗಿನ ಬಲಗೈಯಲ್ಲಿ ಶಂಖ, ಒಂದು ಕೈಯಲ್ಲಿ ಆಶೀಶ ಮುದ್ರೆ ಹಾಗೂ ಮತ್ತೊಂದು ಕೈಯಲ್ಲಿ ಪುಷ್ಪ ಇವು ಈ ವಿಗ್ರಹದ ಇತರೆ ವಿವರಗಳು. ಈ ರೀತಿ ವಿಗ್ರಹವನ್ನು ಒಮ್ಮೆ ಕಣ್ತುಂಬಿಗೊಳ್ಳುತ್ತಾ ವಿಗ್ರಹದ ಮುಖದ ಭಾಗಕ್ಕೆ ಬಂದರೆ ನೀವೂ ಕೂಡ ಬೆಚ್ಚಿಬೀಳುವಿರಿ. ಏಕೆಂದರೆ ಇದು ಪ್ರಥಮ ವಂದನೀಯ ಶ್ರಿಗಣೇಶನ ವಿಗ್ರಹ. ಈ ವಿಗ್ರಹ ನೋಡಿ ನೀವು ಬೆಚ್ಚಿಬೀಳಲು ಕಾರಣ ಎಂದರೆ ಇದು ಗಣೇಶನ ಸ್ತ್ರೀ ಅವತಾರದ ವಿನಾಯಕಿ ವಿಗ್ರಹವಾಗಿದೆ. 

ಗಂಡು ಆನೆಗಳ ಸಮೂಹದ ನೇತೃತ್ವ ವಹಿಸುವ ದೇವಿ, ವಿನಾಯಕಿ (Vinayaki) , ವಿಘ್ನೆಶ್ವರಿ, ಗನೆಶ್ವರಿ ಅಥವಾ ಗಣೇಶಿ (Female Lord Ganesha). ಅಂದರೆ ಗಣೇಶನ ಸ್ತ್ರೀ ಸ್ವರೂಪದ ಹೆಸರುಗಳ ಕಲ್ಪನೆಯನ್ನು ನೀವು ಮಾಡಬಹುದು. ಈ ಹೆಸರಿಗೆ ಪುರಾಣಗಳಲ್ಲಿ ಸ್ಥಾನ ಸಿಕ್ಕರೂ ಕೂಡ ಲೋಕ ಶೈಲಿಯಲ್ಲಿ ಅಧಿಕ ಪ್ರಸಿದ್ಧಿ ಮಾತ್ರ ದೊರೆತಿಲ್ಲ.

1300 ವರ್ಷಗಳಷ್ಟು ಹಳೆ ಮಂದಿರ ಇದಾಗಿದೆ
1300 ವರ್ಷಗಳಷ್ಟು ಪ್ರಾಚೀನವಾದ ಈ ಗಣೇಶ ಮಂದಿರದಲ್ಲಿ ಕಂಡು ಬರುವ ಗಣೇಶನ ಸ್ವರೂಪದ ವರ್ಣನೆ ಶಿವಪುರಾಣದ ಒಂದು ಕಥೆಯಲ್ಲಿ ಸುಲಭವಾಗಿ ದೊರೆಯುತ್ತದೆ. ದೇವಾದಿದೇವ ಮಹಾದೇವನ ಕೃಪೆಯಿಂದ ಹುಟ್ಟಿಕೊಂಡ ಓರ್ವ ಅಸುರ ಕೈಲಾಸದ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾನೆ. ದೇವಿ ಪಾರ್ವತಿಯನ್ನು ನೋಡಿದ ಆತ ಬಲವಂತವಾಗಿ ದೇವಿಯನ್ನು ತನ್ನ ಪತ್ನಿಯನ್ನಾಗಿಸಲು ಬಯಸುತ್ತಾನೆ. ಹಲವು ಬಾರಿ ಶಿವ ಆತನನ್ನು ತಡೆದು ತಿಳಿಹೇಳಲು ಪ್ರಯತ್ನಿಸುತ್ತಾರೆ. ಆದರೂ ಕೂಡ ಆತ ಕೈಲಾಸದ ಮೇಲೆ ದಾಳಿಗೆ ಮುಂದಾಗುತ್ತಾನೆ. ಆಗ ಶಿವ ತನ್ನ ತ್ರಿಶೂಲದಿಂದ ಆತನ ಮೇಲೆ ಹಲ್ಲೆ ನಡೆಸುತ್ತಾನೆ. ತ್ರಿಶೂಲ ದಾಳಿಯಿಂದ ಚಿಮ್ಮಿದ ರಕ್ತದ ಧಾರೆಯ ಹನಿಗಳು ಬಿದ್ದೆಡೆಯೆಲ್ಲ ಅಂಧಕನಂತಹ ಹಲವು ರಾಕ್ಷೆಸರು ಹುಟ್ಟಿಕೊಳ್ಳುತ್ತಾರೆ 

ವಿನಾಯಕಿ ದೇವಿಯ ಪೌರಾಣಿಕ ಕಥೆ
ಈ ರಾಕ್ಷೆಸ ಶಕ್ತಿಗಳು ಕೈಲಾಸವನ್ನು ಸುತ್ತುವರೆದು ಶಿವನ ಕುಟುಂಬದ ಮೇಲೆ ಹಲ್ಲೆ ನಡೆಸುತ್ತವೆ. ಆಗ ದೇವಿ ಪಾರ್ವತಿಗೆ ಪ್ರತಿಯೊಂದು ಪ್ರಾಣಿಯಲ್ಲಿ ತನ್ನ ವಿಪರೀತ ಅವಸ್ಥೆಯ ಒಂದು ಶಕ್ತಿ ಅಡಗಿರುತ್ತದೆ ಎಂಬುದರ ಅರಿವಾಗುತ್ತದೆ. ಅಂದರೆ, ಪ್ರತಿಯೊಬ್ಬ ಪುರುಷನಲ್ಲಿ ಓರ್ವ ಸ್ತ್ರೀಶಕ್ತಿ ಕೂಡ ಅಡಗಿರುತ್ತದೆ ಮತ್ತು ಅದು ಕರುಣೆ ಹಾಗೂ ಕ್ರೋಧ ಎರಡನ್ನು ನಿಯಂತ್ರಿಸುತ್ತದೆ. ಅಂಧಕ ರಾಕ್ಷೆಸ ಇದನ್ನೇ ಸಾಧಿಸಿರುತ್ತಾನೆ ಮತ್ತು ಅದರ ದುರುಪಯೋಗಿಸಿಕೊಂಡಿರುತ್ತಾನೆ.

ಇದನ್ನೂ ಓದಿ-Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಆಗ ದೇವಿ ಪಾರ್ವತಿ ಪ್ರತಿಯೊಂದು ದೇವರಲ್ಲಿ ಅಡಗಿದ ಸ್ತ್ರೀಶಕ್ತಿಯನ್ನು ಆಹ್ವಾನಿಸುತ್ತಾಳೆ. ಈ ವೇಳೆ ಪರಬ್ರಹ್ಮನಲ್ಲಿರುವ ಬ್ರಾಹ್ಮಿ, ಶಿವನಲ್ಲಿರುವ ಶಿವಾನಿ ಹಾಗೂ ವಿರಭದ್ರನಲ್ಲಿರುವ ಭದ್ರಕಾಳಿ ಪ್ರಕಟಗೋಳ್ಳುತ್ತಾರೆ. ಸುಖ ದೇವಿ ಎಂದೇ ಖ್ಯಾತ ದೇವಿ ದುರ್ಗೆಯ ಹತ್ತು ಅವತಾರಗಳೂ ಕೂಡ ರಣಾಂಗಣಕ್ಕೆ ಇಳಿಯುತ್ತಾರೆ. ಎಲ್ಲರೂ ಸೇರಿ ಅಂಧಕಗಳನ್ನು ಸಂಹರಿಸುತ್ತಾರೆ. ಆದರೆ, ಆಗಲೂ ಕೂಡ ಅಂಧಕನ ರಕ್ತಸ್ರಾವ ಮುಂದುವರೆದಿರುತ್ತದೆ.

ಇದನ್ನೂ ಓದಿ- Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ

ದೇವಿ ವಿನಾಯಕಿಯ ಉತ್ಪತ್ತಿ
ಈ ಸಂದರ್ಭದಲ್ಲಿ ದೇವಿ ಪಾರ್ವತಿ ತನ್ನ ಪುತ್ರ ಗಣೇಶನ (Lord Ganesh) ಕಡೆಗೆ ದೃಷ್ಟಿಬೀರುತ್ತಾಳೆ. ಮರ್ಯಾದೆಯ ಕಟ್ಟುಪಾಡುಗಳಿಗೆ ಒಳಗಾದ ಶ್ರೀಗಣೇಶ ಸ್ತ್ರೀಯುದ್ಧದಲ್ಲಿ ಪಾಲ್ಗೊಳ್ಳುವ ಹಾಗಿರಲಿಲ್ಲ. ಹೀಗಾಗಿ ಅವರು ತಮ್ಮಲ್ಲಿ ಅಡಗಿರುವ ಸ್ತ್ರೀ ಅವತಾರ ಧರಿಸುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಗಜದ ಮುಖ ಹಾಗೂ ಸ್ತ್ರೀ ಮೈಕಟ್ಟು ಹೊಂದಿರುವ ಈ ಅವತಾರಕ್ಕೆ ಗಜಾನಿನಿ (Vinayaki Devi)ಎಂದು ಕರೆಯಲಾಗುತ್ತದೆ. ಗಜಾನಿನಿ ತನ್ನ ಸೊಂಡಿಲಿನಿಂದ ಏಕಕಾಲಕ್ಕೆ ಅಂಧಕನ ಎಲ್ಲ ರಕ್ತವನ್ನು ಹೀರಿ ಅಂಧಕನ ಸಂಹರಿಸುತ್ತಾಳೆ. ಥಾನುಮಲಯನ್ ದೇವಸ್ಥಾನದಲ್ಲಿ ಗಣೇಶನ ಈ ವಿಗ್ರಹವೇ ವಿರಾಜಮಾನವಾಗಿದೆ. ಜಗತ್ತಿನಲ್ಲಿ ಸ್ತ್ರೀ ಶಕ್ತಿ ಕೂಡ ಪುರುಷನ ಶಕ್ತಿಗೆ ಸಮಾನ ಎಂಬ ಸಂದೇಶ ಈ ದೇವಸ್ಥಾನ ಸಾರುತ್ತದೆ.

ಇದನ್ನೂ ಓದಿ-Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News