December ಮೊದಲ ವಾರದಿಂದಲೇ ಈ ರಾಶಿಯ ಜನರಿಗೆ ಸಾಕಷ್ಟು ಪ್ರೀತಿಯ ಜೊತೆಗೆ ಧನ ಸಂಪತ್ತು ಲಭಿಸಲಿದೆ

Venus Transit December 2022: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 5 ರಂದು ಶುಕ್ರ ಗೋಚರ ಸಂಭವಿಸಲಿದೆ. ಶುಕ್ರ ತನ್ನ ಪ್ರಸ್ತುತ ಇರುವ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೆಶಿಸಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ.  

Written by - Nitin Tabib | Last Updated : Nov 27, 2022, 12:51 PM IST
  • ಪ್ರಸ್ತುತ ಶುಕ್ರ ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ.
  • ಡಿಸೆಂಬರ್ 5 ರಂದು ಆತ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಸಾಗಲಿದ್ದಾನೆ
  • ಮತ್ತು ಡಿಸೆಂಬರ್ 29ರವರೆಗೆ ಆತ ಅಲ್ಲಿಯೇ ಮುಂದುವರೆಯಲಿದ್ದಾನೆ. ಬಳಿಕ ಮಕರ ರಾಶಿಗೆ ಸಾಗಲಿದ್ದಾನೆ.
December ಮೊದಲ ವಾರದಿಂದಲೇ ಈ ರಾಶಿಯ ಜನರಿಗೆ ಸಾಕಷ್ಟು ಪ್ರೀತಿಯ ಜೊತೆಗೆ ಧನ ಸಂಪತ್ತು ಲಭಿಸಲಿದೆ title=
Venus Transit 2022

Shukra Gochar December 2022 Effects: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ಒಂದು ರಾಶಿಯನ್ನು ತೊರೆದು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಇದು ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಶುಕ್ರನನ್ನು ಸಾಮಾನ್ಯವಾಗಿ ಧನ, ವೈಭವ, ಪ್ರೇಮ, ಸೌಂದರ್ಯ, ಆಕರ್ಷಣೆಯ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಬರುವ ಡಿಸೆಂಬರ್ 5 ರಂದು ಶುಕ್ರ ಧನು ರಾಶಿಯಲ್ಲಿ ಗೋಚರಿಸಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಶುಕ್ರನ ಈ ಗೋಚರದಿಂದ ಈ ರಾಶಿಗಳ ಜನರ ಜೀವನದಲ್ಲಿ ಸಾಕಷ್ಟು ಧನ-ಸಂಪತ್ತು ಪ್ರೀತಿ-ವೈಭವ ಹರಿದುಬರಲಿದೆ. ವೈವಾಹಿಕ ಜೀವನದಲ್ಲಿಯೂ ಕೂಡ ರೋಮ್ಯಾನ್ಸ್ ಹೆಚ್ಚಾಗಲಿದೆ.

ಡಿಸೆಂಬರ್ 29ರವರೆಗೆ ಧನು ರಾಶಿಯಲ್ಲಿಯೇ ಶುಕ್ರನ ಗೋಚರ
ಪ್ರಸ್ತುತ ಶುಕ್ರ ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಡಿಸೆಂಬರ್ 5 ರಂದು ಆತ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಸಾಗಲಿದ್ದಾನೆ ಮತ್ತು ಡಿಸೆಂಬರ್ 29ರವರೆಗೆ ಆತ ಅಲ್ಲಿಯೇ ಮುಂದುವರೆಯಲಿದ್ದಾನೆ. ಬಳಿಕ ಮಕರ ರಾಶಿಗೆ ಸಾಗಲಿದ್ದಾನೆ. ಹಾಗಾದರೆ ಬನ್ನಿ ಶುಕ್ರನ ಧನು ರಾಶಿ ಗೋಚರ ಯಾರಿಗೆ ಲಾಭ ತರಲಿದೆ ತಿಳಿದುಕೊಳ್ಳೋಣ,

ಮೇಷ: ಶುಕ್ರನ ಧನು ಗೋಚರ ಮೇಷ ರಾಶಿಯವರಿಗೆ ಸಾಕಷ್ಟು ಲಾಭವನ್ನು ನೀಡಲಿದೆ. ಈ ಅವಧಿಯಲ್ಲಿ ಮೇಷ ರಾಶಿಯ ಜನರಿಗೆ ದೊಡ್ಡ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಜೀವನದಲ್ಲಿ ನೆಮ್ಮದಿ ಹೆಚ್ಚಾಗಲಿದೆ. ನಿಮ್ಮ ಆಕರ್ಷಣೆ ಹೆಚ್ಚಾಗುತ್ತದೆ. ವೈವಾಹಿಕ ಜೀವನ ಮತ್ತು ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ಸಂಬಂಧ ಸುಧಾರಿಸಲಿದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ.

ಸಿಂಹ: ಶುಕ್ರನ ಈ ರಾಶಿ ಬದಲಾವಣೆಯು ಸಿಂಹ ಜಾತಕದ ಜನರಿಗೆ ಸಾಕಷ್ಟು ಲಾಭಗಳನ್ನು ನೀಡಲಿದೆ.  ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ದೀರ್ಘ ಕಾಲದ ಬಳಿಕ, ಸಂಬಂಧದಲ್ಲಿ ಅದ್ಭುತ ತಾಜಾತನದ ಅನುಭವ ನಿಮಗೆ ಸಿಗಲಿದೆ. ಹೊಸ ಉದ್ಯೋಗ ನಿಮ್ಮನ್ನು ಆರಿಸಿಕೊಂಡು ಬರುವ ಪ್ರಬಲವಾದ ಲಕ್ಷಣಗಳು ಗೋಚರಿಸುತ್ತಿವೆ. ಹಳೆ  ಕೆಲಸದಲ್ಲಿ ಮುಂದುವರೆದರೂ ಕೂಡ ಬಡ್ತಿಯ ಅವಕಾಶವಿದೆ. ನೀವು ಜನರ ಪ್ರಶಂಸೆ ಮತ್ತು ಗೌರವಕ್ಕೆ ಪಾತ್ರರಾಗುವಿರಿ.

ವೃಶ್ಚಿಕ: ಶುಕ್ರನು ನಿಮ್ಮ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೇಶಿಸುತ್ತಿದ್ದು, ನಿಮಗೆ ಭಾರಿ ಲಾಭವನ್ನೇ ಕೊಟ್ಟು ಹೊಗಳಿದ್ದಾನೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಬಲಿಷ್ಠವಾಗಿರಲಿದೆ. ಆದಾಯ ಹೆಚ್ಚಾಗಲಿದೆ. ವಿದೇಶ ಪ್ರವಾಸಕ್ಕೆ ಹೋಗಬಹುದು. ಅವಿಸ್ಮರಣೀಯ ಕುಟುಂಬ ಪ್ರವಾಸಕ್ಕೂ ನೀವು ಹೋಗಬಹುದು. ಉದ್ಯೋಗ ಮತ್ತು ವ್ಯವಹಾರಕ್ಕೂ  ಕೂಡ ಈ ಸಮಯ ಲಾಭದಾಯಕವಾಗಿದೆ.

ಇದನ್ನೂ ಓದಿ-Mahashivratri: 2023ರಲ್ಲಿ ಮಹಾಶಿವರಾತ್ರಿ ಯಾವಾಗ? ದಿನಾಂಕ, ಪೂಜಾ ಮುಹೂರ್ತ & ಶುಭ ಸಮಯ ತಿಳಿಯಿರಿ

ಕುಂಭ: ಶುಕ್ರ ಸಂಕ್ರಮವು ಕುಂಭ ರಾಶಿಯವರಿಗೆ ಶುಭಫಲಪ್ರದಾಯಿ ಸಾಬೀತಾಗಲಿದೆ. ಆದಾಯದ ಹೊಸ ಮೂಲಗಳು ಕಾಣಿಸಿಕೊಳ್ಳುತ್ತವೆ. ಸಾಲದಿಂದ ಮುಕ್ತಿ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಲ್ಲಲಿವೆ. ಸಂಗಾತಿಯೊಂದಿಗಿನ ಪ್ರೀತಿಯಲ್ಲಿ ಹೆಚ್ಚಳವಾಗಲಿದೆ.

ಇದನ್ನೂ ಓದಿ-Weekly Number Horoscope: ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಸಾಕಷ್ಟು ಸುಖ-ಸಂಪತ್ತು ದೊರೆಯಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News