Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

Venus Transit October 2021: ಶುಕ್ರ ಗ್ರಹವು ಇನ್ನೆರಡು ದಿನಗಳಲ್ಲಿ ಅಂದರೆ 30 ಅಕ್ಟೋಬರ್ 2021 ರಂದು ಧನು ರಾಶಿ ಪ್ರವೇಶಿಸುತ್ತಿದೆ. ಈ ರಾಶಿಚಕ್ರದ ಬದಲಾವಣೆಯು 5 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಯೋಣ.

Written by - Yashaswini V | Last Updated : Oct 29, 2021, 08:34 AM IST
  • ದೀಪಾವಳಿಯ ಮೊದಲು ಶುಕ್ರ ಸಂಕ್ರಮಣ
  • 5 ರಾಶಿಗಳ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ
  • ವೃತ್ತಿ - ಕುಟುಂಬ ಜೀವನಕ್ಕೆ ಉತ್ತಮ ಸಮಯ
Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು title=
Venus transit: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

Venus Transit October 2021: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವ ಪ್ರಮುಖ ಸಂದರ್ಭವೆಂದರೆ ದೀಪಾವಳಿ ಹಬ್ಬ. ಹಾಗಾಗಿ ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಜನರು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಈ ಬಾರಿಯ ದೀಪಾವಳಿಯು ಕೆಲವು ಜನರಿಗೆ ಬಹಳ ಅದ್ಭುತವಾಗಿದೆ. ಏಕೆಂದರೆ ದೀಪಾವಳಿ (ದೀಪಾವಳಿ 2021) ಮುಂಚೆಯೇ ಈ ರಾಶಿಯವರ ಮೇಲೆ ಲಕ್ಷ್ಮಿಯ ಕೃಪೆ ಇರಲಿದೆ. 4 ನವೆಂಬರ್ 2021 ರ ಮೊದಲು, 30 ಅಕ್ಟೋಬರ್ 2021 ರಂದು, ಶುಕ್ರ ಗ್ರಹವು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಧನು ರಾಶಿಗೆ ಪ್ರವೇಶಿಸುತ್ತಿದೆ ಮತ್ತು ನವೆಂಬರ್ ತಿಂಗಳಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನ ಈ ರಾಶಿ ಬದಲಾವಣೆಯು 5 ರಾಶಿಗಳಿಗೆ ತುಂಬಾ ಮಂಗಳಕರವಾಗಿದೆ. 

ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು:
ಮೇಷ ರಾಶಿ  (Aries) :
ಮೇಷ ರಾಶಿಯ (Zodiac Signs) ಜನರು ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಉದ್ಯಮಿಗಳಿಗೆ ಈ ಬಾರಿ ಹಣದ ಮಳೆಯಾಗಲಿದೆ. ದೊಡ್ಡ ಆರ್ಡರ್ ಪಡೆಯಬಹುದು. ಎಷ್ಟೇ ಹಣ ಬಂದರೂ ಸಾವಧಾನವಾಗಿ ಯೋಚಿಸಿ ಖರ್ಚು ಮಾಡುವುದು ಸೂಕ್ತ. 

ಇದನ್ನೂ ಓದಿ- Vastu Tips For Diwali: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ದೀಪಾವಳಿಗೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ

ವೃಷಭ ರಾಶಿ (Taurus) : ವೃಷಭ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಅಗಾಧವಾದ ಲಾಭಗಳನ್ನು ಪಡೆಯುತ್ತಾರೆ. ಪ್ರಮೋಷನ್-ಇನ್ಕ್ರಿಮೆಂಟ್ ಲಭ್ಯವಿರಬಹುದು. ಹಿರಿಯರು ನಿಮ್ಮ ಕೆಲಸವನ್ನು ಮೆಚ್ಚುವರು. ಆದಾಗ್ಯೂ, ಈ ಅವಧಿಯಲ್ಲಿ ಗಾಯದ ಸಾಧ್ಯತೆ ಇರುತ್ತದೆ. ಹಣದ ಜೊತೆಗೆ ಆಸ್ತಿಯೂ ಲಾಭದಾಯಕವಾಗಿರುತ್ತದೆ. 

ಸಿಂಹ ರಾಶಿ  (Leo) : ಶುಕ್ರನ ರಾಶಿ ಪರಿವರ್ತನೆಯಿಂದಾಗಿ (Shukra Rashi Parivartan) ಸಿಂಹ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಲಾಭವನ್ನು ಪಡೆಯುತ್ತಾರೆ. ಇನ್ಕ್ರಿಮೆಂಟ್ ಲಭ್ಯವಾಗಬಹುದು. ಬಡ್ತಿ ಇರಬಹುದು. ಪ್ರೇಮ ಜೀವನ - ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂಗಾತಿ ಮತ್ತು ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ. 

ಇದನ್ನೂ ಓದಿ- Dhanteras 2021: ಧಂತೇರಸ್‌ನಲ್ಲಿ ಮಿಸ್ ಆಗಿ ಕೂಡ ಈ ವಸ್ತುಗಳನ್ನು ಮನೆಗೆ ತರಬೇಡಿ

ಕನ್ಯಾ ರಾಶಿ  (Virgo): ಕನ್ಯಾ ರಾಶಿಯವರಿಗೆ ಶುಕ್ರನ ಬದಲಾವಣೆಯು ವೃತ್ತಿ ಮತ್ತು ಕೌಟುಂಬಿಕ ಜೀವನ ಎರಡಕ್ಕೂ ಉತ್ತಮವೆಂದು ಸಾಬೀತುಪಡಿಸುತ್ತದೆ. ನೀವು ಮನೆ ಕಾರು ಖರೀದಿಸಬಹುದು. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ಮನೆಯಲ್ಲಿ ಸಂತೋಷ ಇರುತ್ತದೆ. 

ಕುಂಭ ರಾಶಿ (Aquarius): ಶುಕ್ರ ಗ್ರಹವು ಕುಂಭ ರಾಶಿಯವರಿಗೆ ದಯೆ ತೋರುತ್ತಾನೆ. ಅದೃಷ್ಟದ ಸಹಾಯದಿಂದ ಈ ರಾಶಿಯವರ ಎಲ್ಲಾ ಕೆಲಸಗಳು ನೆರವೇರುತ್ತವೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ವಿಶೇಷವಾಗಿ ಭೂಮಿಯಲ್ಲಿ ಹೂಡಿಕೆ ಮಾಡುವುದರಿಂದ ಬಹಳಷ್ಟು ಲಾಭಗಳು ಸಿಗುತ್ತವೆ. ಪೋಷಕರ ಬೆಂಬಲದಿಂದ ದೊಡ್ಡ ಕೆಲಸವು ಪೂರ್ಣಗೊಳ್ಳುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News