ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ

ಯಾವ ಮನೆಯಲ್ಲಿ ಮನೆಯೊಡತಿ, ಮನೆಯ ಹಿರಿಯ ಮಹಿಳೆಯರು ದುಃಖಿತರಾಗಿರುತ್ತಾರೆಯೋ, ಅವರಿಗೆ ಮಾನ ಸಮ್ಮಾನ ಸಿಗುವುದಿಲ್ಲವೇ ಆ ಮನೆಯಲ್ಲಿ ಮಹಾಲಕ್ಷ್ಮಿ  ಖಂಡಿತಾ ನೆಲೆಸುವುದಿಲ್ಲವಂತೆ.

Written by - Zee Kannada News Desk | Last Updated : Apr 22, 2021, 05:09 PM IST
  • ಕೆಲವೊಮ್ಮೆ ಏನೇ ಮಾಡಿದರೂ ದುಡ್ಡು ಕಾಸು ಬರುವುದೇ ಇಲ್ಲ.
  • ಇದಕ್ಕೆ ವಾಸ್ತು ದೋಷ ಕಾರಣ ಎನ್ನುತ್ತಾರೆ ವಾಸ್ತು ಪಂಡಿತರು.
  • ಆ ಐದು ವಾಸ್ತು ದೋಷಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ
ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ  ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ title=
Vastu tips (file photo)

ನವದೆಹಲಿ : ನೀವು ಬಹಳಷ್ಟು ಶ್ರಮ ಪಟ್ಟು ದುಡಿಯುತ್ತಿರಬಹುದು. ಆದರೆ ಏನೇ ಮಾಡಿದರೂ ಲಕ್ಷ್ಮಿ (Godees Lakshmi) ಒಲಿಯುವುದೇ ಇಲ್ಲ. ದುಡ್ಡು ಕಾಸು ಬರುವುದೇ ಇಲ್ಲ.   ಇದಕ್ಕೆ ವಾಸ್ತು ದೋಷ (Vastu Dosha) ಕಾರಣ ಎನ್ನುತ್ತಾರೆ ವಾಸ್ತು ಪಂಡಿತರು. ವಾಸ್ತುವನ್ನು ನೀವು ನಂಬುತ್ತೀರೋ ಬಿಡುತ್ತಿರೋ ಬೇರೆ ವಿಷ್ಯ.  ಆದರೆ ವಾಸ್ತು ದೋಷವನ್ನು ನಂಬುವ ಬಹು ದೊಡ್ಡ ವರ್ಗ ವಿದೆ.  ಈ ವಾಸ್ತುದೋಷ ದೂರ ಮಾಡಿದರೆ, ಮನೆಗೆ ಶುಭವಾಗುತ್ತೆ ಎಂದು ಹೇಳುತ್ತಾರೆ.  ಇವತ್ತು ನಾವು ಕೆಲವೊಂದು ವಾಸ್ತು ಟಿಪ್ಸ್ (Vastu Tips) ಹೇಳಲಿದ್ದೇವೆ. ಆ ದೋಷ ಏನಾದರೂ ಮನೆಯಲ್ಲಿದ್ದರೆ, ಆ ಮನೆಯಲ್ಲಿ ಹಣಕಾಸು ಉನ್ನತಿ ಸಾಧ್ಯವೇ ಇಲ್ಲ  ಅಂತೆ. ಆ ವಿಷಯ ಯಾವುದು ನೋಡೋಣ.

1. ಮನೆಯೊಡತಿ ಖುಷಿಯಾಗಿರಬೇಕು. 
ಯಾವ ಮನೆಯಲ್ಲಿ ಮನೆಯೊಡತಿ, ಮನೆಯ ಹಿರಿಯ ಮಹಿಳೆಯರು ದುಃಖಿತರಾಗಿರುತ್ತಾರೆಯೋ, ಅವರಿಗೆ ಮಾನ ಸಮ್ಮಾನ ಸಿಗುವುದಿಲ್ಲವೇ ಆ ಮನೆಯಲ್ಲಿ ಮಹಾಲಕ್ಷ್ಮಿ (Mahalakshmi) ಖಂಡಿತಾ ನೆಲೆಸುವುದಿಲ್ಲವಂತೆ. ಹಾಗಾಗಿ, ಮನೆಯೊಡತಿ ದುಃಖಿತಳಾಗಿದ್ದರೆ ದಾರಿದ್ರ್ಯ ನಡು ಮುರಿದು ಬಿದ್ದಿರುತ್ತದೆಯಂತೆ.

ಇದನ್ನೂ ಓದಿ :    Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ

2. ಮನಿ ಪ್ಲಾಂಟ್ ಗಿಡ ಒಣಗುತ್ತಿದ್ದರೆ..!
ಮನೆಯಲ್ಲಿ ಮನಿ ಪ್ಲಾಂಟ್ ಗಿಡ (Money plant) ಒಣಗುತ್ತಿದ್ದರೆ ಅದು  ಹಣ ಕರಗುವ ಸಂಕೇತವಂತೆ. ಯಾವತ್ತಿಗೂ ಮನೆಯಲ್ಲಿ ಒಣಗಿದ ಮನಿ ಪ್ಲಾಂಟ್ ಗಿಡ ಇಡಲೇ ಬಾರದು. ಗಿಡ ಒಣಗಿ ಹೋದರೆ ಕೂಡಲೇ ಅದನ್ನು ಸ್ಥಳಾಂತರಿಸಿ.

3. ತಿಜೋರಿಯ ದಿಕ್ಕು.
ಕುಬೇರ ಸಂಪತ್ತು ಬರಬೇಕಿದ್ದರು ತಿಜೋರಿಯ ದಿಕ್ಕು ನೈರುತ್ಯ ದಿಕ್ಕಿಗೆ ತಿರುಗಿಸಿ ಇಡಿ.  ನೆನಪಿನಲ್ಲಿಡಿ, ತಿಜೋರಿಯ ದಿಕ್ಕು ಯಾವತ್ತಿಗೂ ದಕ್ಷಿಣ (South face) ಮುಖಕ್ಕೆ ತೆರೆದುಕೊಳ್ಳ ಬಾರದು.

4. ಒಡೆದ ಪಾತ್ರೆ ಮನೆಯಲ್ಲಿಡಬಾರದು
ಮನೆಯಲ್ಲಿ ಒಡೆದ ಪಾತ್ರೆ ಇಡಬಾರದು. ಅಥವಾ ಕಚೇರಿಯಲ್ಲಿ ಇಂಕ್  ಖಾಲಿಯಾದ ಪೆನ್ ಮನೆಗೆ ತರಬಾರದು.  ಇದರಿಂದ ಲಕ್ಷ್ಮಿ (Godess lakshmi) ಮನೆಯಲ್ಲಿ ನೆಲೆಸುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ :    Snake Plant Benefits: ಬಹಳ ಉಪಯುಕ್ತ ಈ ಸ್ನೇಕ್ ಪ್ಲಾಂಟ್, ಖರೀದಿಸುವ ಮೊದಲು ಇದನ್ನು ತಿಳಿಯಿರಿ

5. ಮನೆಯ ಛಾವಣಿಯಲ್ಲಿ ದೀಪ ಬೆಳಗುತ್ತಿರಬೇಕು
ಮನೆಯ ಛಾವಣಿ ಯಾವತ್ತಿಗೂ ಕತ್ತಲಿರಬಾರದು. ಯಾವುದಾದರೂ ಒಂದು ಬೆಳಕು ಅಲ್ಲಿ ಬೀಳುತ್ತಿರಬೇಕು. ಛಾವಣಿ ಕತ್ತಲಿದ್ದರೆ, ಋಣಾತ್ಮಕ ಶಕ್ತಿ (Negetive energy) ಮನೆಯೊಳಗೆ ಪ್ರವೇಶಿಸುತ್ತದೆ.  ಇದರಿಂದ ವ್ಯಕ್ತಿ ಉದ್ದಾರವಾಗೋದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News