ಪೊರಕೆ ಜೊತೆ ಎಂದಿಗೂ ಈ ರೀತಿ ಮಾಡಬೇಡಿ, ಮನೆಯಿಂದ ನಿರ್ಗಮಿಸುತ್ತಾಳೆ ಲಕ್ಷ್ಮೀ

ಪೊರಕೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಪೊರಕೆ ಇಡಲು ಉತ್ತಮವಾದ ದಿಕ್ಕು ಪಶ್ಚಿಮ ಅಥವಾ ನೈಋತ್ಯ ಎನ್ನಲಾಗಿದೆ.   ಈಶಾನ್ಯದಲ್ಲಿ ಪೊರಕೆ ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. 

Written by - Zee Kannada News Desk | Last Updated : Mar 14, 2022, 03:54 PM IST
  • ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಹೇಗೆ ?
  • ಹೀಗೆ ಮಾಡಿದರೆ ಆರ್ಥಿಕ ನಷ್ಟ ಸಂಭವಿಸುತ್ತದೆ
  • ಮಹಾ ಲಕ್ಷ್ಮೀ ಕೋಪಗೊಳ್ಳುತ್ತಾಳೆ
ಪೊರಕೆ ಜೊತೆ ಎಂದಿಗೂ ಈ ರೀತಿ ಮಾಡಬೇಡಿ, ಮನೆಯಿಂದ ನಿರ್ಗಮಿಸುತ್ತಾಳೆ ಲಕ್ಷ್ಮೀ  title=
ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಹೇಗೆ ? (file photo)

ನವದೆಹಲಿ : ಸಾಮಾನ್ಯವಾಗಿ ಸ್ವಚ್ಛತೆಗಾಗಿ ಪ್ರತಿ ಮನೆಯಲ್ಲೂ ಪೊರಕೆ ಬಳಸುತ್ತಾರೆ (Broom). ಪೊರಕೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ (Vastu shastra). ವಾಸ್ತು ಪ್ರಕಾರ, ಪೊರಕೆ ಇಡಲು ಉತ್ತಮ ದಿಕ್ಕು ಪಶ್ಚಿಮ ಅಥವಾ ನೈಋತ್ಯ. ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ (Negetive energy)ನಾಶವಾಗುತ್ತದೆ ಎನ್ನಲಾಗಿದೆ. 

ಪೊರಕೆ ಜೊತೆ ಈ ರೀತಿ ಮಾಡಲೇ ಬಾರದು : 
ವಾಸ್ತು ಶಾಸ್ತ್ರದ (Vastu Shahstra) ಪ್ರಕಾರ ಪೊರಕೆ ಮೇಲೆ ಕಾಲಿಡಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮೀ (Godess Lakshmi)ಕೋಪಗೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಧನ ಧಾನ್ಯಗಳ ಕೊರತೆ ಎದುರಾಗುತ್ತದೆ. 

ಇದನ್ನೂ ಓದಿ : ಬಡತನ ವಕ್ಕರಿಸುವ ಮೊದಲು ಸಿಗುತ್ತವೆ ಈ ಸಂಕೇತಗಳು, ಎಚ್ಚೆತ್ತುಕೊಳ್ಳದಿದ್ದರೆ ಎದುರಿಸಬೇಕಾಗುತ್ತದೆ ನಷ್ಟ

ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಹಳೆಯ ಪೊರಕೆಯನ್ನು ಬದಲಿಸಿ ಹೊಸ ಪೊರಕೆಯನ್ನು ಮನೆಗೆ ತರಲು ಶನಿವಾರವನ್ನು (Saturday ) ಉತ್ತಮ ದಿನ ಎಂದು ಹೇಳಲಾಗಿದೆ. 

ಪೊರಕೆಯನ್ನು ಅಡುಗೆ ಮನೆಯಲ್ಲಿ (Kitchen Vastu) ಇಡಬಾರದು.  ಅಡುಗೆ ಮನೆಯಲ್ಲಿ ಪೊರಕೆ ಇಟ್ಟರೆ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಎದುರಾಗುತ್ತದೆ. ಇನ್ನು  ಸೂರ್ಯಾಸ್ತದ ನಂತರ ಮನೆಯಲ್ಲಿ ಪೊರಕೆಯನ್ನು ಬಳಸಬಾರದು. 

ಇದನ್ನೂ ಓದಿ : ಶನಿ ಮಹಾತ್ಮನಿಗೆ ನೇರವಾಗಿ ಸಂಬಂಧಿಸಿದೆಯಂತೆ ಈ ಕನಸುಗಳು ! ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ತಿಳಿಯಿರಿ

ಒಂದು ವೇಳೆ ಸೂರ್ಯಾಸ್ತದ ನಂತರ ಮನೆ ಗುಡಿಸಲೇ ಬೇಕು ಎನ್ನುವ ಸ್ಥಿತಿ ಎದುರಾದರೆ ರಾತ್ರಿ ಹೊತ್ತಿನಲ್ಲಿ ಮನೆಯಿಂದ ಕಸವನ್ನು ಹೊರಗೆ ಎಸೆಯಬಾರದು. ವಾಸ್ತು ಪ್ರಕಾರ (Vasti tips),  ಸೂರ್ಯಾಸ್ತಕ್ಕೆ ಮುನ್ನ ಮನೆಯನ್ನು ಗುಡಿಸಿ ಕಸ ಹೊರ ಹಾಕಿದರೆ ಲಕ್ಷ್ಮೀ ಸಂತೋಷಗೊಳ್ಳುತ್ತಾಳೆ ಎನ್ನಲಾಗಿದೆ.  

ಪೊರಕೆಯನ್ನು ಈಶಾನ್ಯ ಮೂಲೆಯಲ್ಲಿ ಇಡಬಾರದು. ಈ ದಿಕ್ಕಿನಲ್ಲಿ ಪೊರಕೆ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News