Vastu Tips for Money: ಈ ದಿಕ್ಕಿನಲ್ಲಿ ತಾಯಿ ಲಕ್ಷ್ಮಿಗೆ ಪ್ರಿಯವಾದ ಪಾರಿಜಾತ ಸಸ್ಯ ನೆಡುವುದರಿಂದ ಸಂಪತ್ತು ಪ್ರಾಪ್ತಿ

Vastu Tips for Money: ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಗೆ ಪಾರಿಜಾತ ಸಸ್ಯವೆಂದರೆ ಬಹಳ ಪ್ರಿಯ. ಈ ಸಸ್ಯವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಅಪಾರ ಸಂಪತ್ತಿನ ಒಡೆಯರಾಗಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Sep 1, 2022, 01:35 PM IST
  • ಪುರಾಣಗಳ ಪ್ರಕಾರ, ಪಾರಿಜಾತ ಗಿಡವು ಸಮುದ್ರದ ಮಂಥನದಿಂದ ಹೊರಹೊಮ್ಮಿತು.
  • ವಾಸ್ತು ಶಾಸ್ತ್ರದಲ್ಲಿ ತುಳಸಿ, ಶಮಿ, ಮನಿ ಪ್ಲಾಂಟ್ ನಂತೆ ಪಾರಿಜಾತ ಗಿಡಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ.
  • ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಪಾರಿಜಾತ ಹೂವುಗಳು ಎಂದರೆ ತುಂಬಾ ಪ್ರಿಯ.
Vastu Tips for Money: ಈ ದಿಕ್ಕಿನಲ್ಲಿ ತಾಯಿ ಲಕ್ಷ್ಮಿಗೆ ಪ್ರಿಯವಾದ ಪಾರಿಜಾತ ಸಸ್ಯ ನೆಡುವುದರಿಂದ ಸಂಪತ್ತು ಪ್ರಾಪ್ತಿ  title=
Vastu Tips for Money

ಹಣಕ್ಕಾಗಿ ವಾಸ್ತು ಸಲಹೆ: ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ, ಶಮಿ,  ಮನಿ ಪ್ಲಾಂಟ್ ನಂತೆ ಪಾರಿಜಾತ ಗಿಡಕ್ಕೂ ಹೆಚ್ಚಿನ ಮಹತ್ವವಿದೆ. ಆರ್ಥಿಕ ವೃದ್ಧಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಮುಖ್ಯ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಪಾರಿಜಾತ ಹೂವುಗಳು ಎಂದರೆ ತುಂಬಾ ಪ್ರಿಯ. ಆದ್ದರಿಂದ, ಕಮಲದ ಹೂವುಗಳೊಂದಿಗೆ, ಪಾರಿಜಾತ ಹೂವುಗಳನ್ನು ಸಹ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಅರ್ಪಿಸಲಾಗುತ್ತದೆ. ಮನೆಯಲ್ಲಿ ಪಾರಿಜಾತ  ಸಸ್ಯವನ್ನು ನೆಡುವುದರಿಂದ ಹಲವು ವಾಸ್ತು ದೋಷಗಳನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಈ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮಾತ್ರವೇ ಇದರ ಸಕಾರಾತ್ಮಕ ಫಲಿತಾಂಶ ಲಭ್ಯವಾಗುತ್ತದೆ. 

ಪಾರಿಜಾತ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ತರುತ್ತದೆ. ಪಾರಿಜಾತ ಸಸ್ಯದಿಂದ ಗರಿಷ್ಠ ಪ್ರಯೋಜನವನ್ನು ಪಡೆಯಲು, ಅದನ್ನು ಯಾವ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಮನೆಯಲ್ಲಿ ಸದಾ ನೆಲೆಸುತ್ತಾಳೆ ಲಕ್ಷ್ಮಿ:
ಪುರಾಣಗಳ ಪ್ರಕಾರ, ಪಾರಿಜಾತ ಗಿಡವು ಸಮುದ್ರದ ಮಂಥನದಿಂದ ಹೊರಹೊಮ್ಮಿತು. ಸಾಗರದ ಮಂಥನದಿಂದ ತಾಯಿ ಲಕ್ಷ್ಮಿಯೂ ಕಾಣಿಸಿಕೊಂಡಳು. ಇಂದ್ರನು ಸ್ವರ್ಗ ವಾಟಿಕಾದಲ್ಲಿ ಪಾರಿಜಾತದ ಅದ್ಭುತ ಮರವನ್ನು ನೆಟ್ಟನು. ಈ ಮರವು ದೀರ್ಘಾಯುಷ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಬಹಳಷ್ಟು ಸಂಪತ್ತನ್ನು ನೀಡುತ್ತದೆ. ಮನೆಯಲ್ಲಿ ಪಾರಿಜಾತ ಗಿಡ ನೆಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- September 2022 Horoscope: ಸೆಪ್ಟೆಂಬರ್‌ನಲ್ಲಿ 3 ಪ್ರಮುಖ ಗ್ರಹಗಳ ಸಂಚಾರ, 5 ರಾಶಿಯವರಿಗೆ ಸಂಕಷ್ಟ

ಮನೆಯಲ್ಲಿ ಪಾರಿಜಾತ ಗಿಡ ನೆಡಲು ಸರಿಯಾದ ದಿಕ್ಕು:
ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾರಿಜಾತ ಗಿಡವನ್ನು ನೆಡುವುದು ಉತ್ತಮ. ಇದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ. ಇದರೊಂದಿಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಈ ಗಿಡವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲೂ ನೆಡಬಹುದು. ಇದಲ್ಲದೆ, ಮನೆಯ ಅಂಗಳದಲ್ಲಿ ಪಾರಿಜಾತದ ಗಿಡವನ್ನು ನೆಟ್ಟರೆ ಅಪಾರ ಸಂಪತ್ತು ದೊರೆಯುತ್ತದೆ ಮತ್ತು ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಮನೆಯ ದೇವಸ್ಥಾನದ ಬಳಿ ಪಾರಿಜಾತ ಗಿಡವನ್ನು ನೆಟ್ಟರೆ ತುಂಬಾ ಶುಭ ಫಲ ನೀಡುತ್ತದೆ. 

ಇದನ್ನೂ ಓದಿ- Astro Tips: ಪ್ರತಿದಿನ ಮಾಡುವ ಈ 5 ಕೆಲಸಗಳು ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತೆ!

ಮನೆಯ ದಕ್ಷಿಣ ದಿಕ್ಕಿಗೆ ಯಮ ದಿಕ್ಕಾಗಿರುವುದರಿಂದ ಯಾವುದೇ ಸಂದರ್ಭದಲ್ಲೂ ಪಾರಿಜಾತ ಗಿಡಗಳನ್ನು ಈ ದಿಕ್ಕಿನಲ್ಲಿ ನೆಡಲೇಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡುವುದರಿಂದ ಲಾಭದ ಬದಲು ಹಾನಿಯಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News