Home Vastu Tips : ವಾಸ್ತು ಶಾಸ್ತ್ರದಲ್ಲಿ ದಿಕ್ಕು ಬಹಳ ಮುಖ್ಯ. ವಾಸ್ತು ಶಾಸ್ತ್ರದ ನಿಯಮವನ್ನು ಸರಿಯಾಗಿ ಅನುಸರಿಸುವುದರಿಂದ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಮನೆಯಲ್ಲಿ ಎಲ್ಲೆಂದರಲ್ಲಿ ಕುಳಿತು ಊಟ ಮಾಡುವುದು ಸಹ ವಾಸ್ತು ದೋಷಕ್ಕೆ ಕಾರಣವಾಗಬಹುದು... ಈ ಕುರಿತ ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ..
ಮನೆಯ ಪ್ರಮುಖ ಸ್ಥಳ ಮತ್ತು ವಸ್ತುಗಳನ್ನು ಇಡುವ ಸರಿಯಾದ ದಿಕ್ಕಿನ ಜೊತೆಗೆ, ಒಬ್ಬ ವ್ಯಕ್ತಿಯು ತಿನ್ನುವಾಗ ಯಾವ ದಿಕ್ಕಿಗೆ ಮುಖ ಮಾಡಬೇಕು ಮತ್ತು ಯಾವ ದಿಕ್ಕಿಗೆ ಮುಖ ಮಾಡಬಾರದು ಎಂಬುದನ್ನು ವಾಸ್ತುಶಾಸ್ತ್ರವು ಉಲ್ಲೇಖಿಸುತ್ತದೆ. ಊಟ ಮಾಡುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತುಕೊಂಡರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಒಂದು ವೇಳೆ ನೀವು ತಪ್ಪು ದಿಕ್ಕಿನಲ್ಲಿ ಕುಳಿತರೆ ಕೆಟ್ಟದಾಗುತ್ತದೆ.
ಇದನ್ನೂ ಓದಿ: ಗಜಕೇಸರಿ ಯೋಗದಿಂದ ಈ ರಾಶಿಯವರು ರಾಜನಂತೆ ಜೀವನ ನಡೆಸುತ್ತಾರೆ!
ವಾಸ್ತು ಶಾಸ್ತ್ರದ ಪ್ರಕಾರ ಊಟ ಮಾಡುವಾಗ ಸರಿಯಾದ ದಿಕ್ಕಿಗೆ ಕುಳಿತು ಕೊಳ್ಳುವುದು ಬಹಳ ಮುಖ್ಯ. ಇದನ್ನು ಗಮನಿಸದಿದ್ದರೆ, ಒಬ್ಬ ವ್ಯಕ್ತಿಯು ಗಂಭೀರ ಅನಾರೋಗ್ಯಕ್ಕೆ ಒಳಗಾಗಬಹುದು. ಊಟ ಮಾಡುವಾಗ ಉತ್ತರ ಮತ್ತು ಪೂರ್ವಕ್ಕೆ ಮುಖ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ತಿನ್ನುವುದು ಅತ್ಯಂತ ಅಶುಭ ಫಲ ನೀಡುತ್ತದೆ. ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಈ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಮತ್ತು ದುರಾದೃಷ್ಟ ಹೆಚ್ಚಾಗುತ್ತದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಭಯಾನಕ ರೆಸ್ಟೋರೆಂಟ್, ದೆವ್ವದ ರೂಪದಲ್ಲಿರೋ ಮನುಷ್ಯರು ಇಲ್ಲಿ ಸರ್ವ್ ಮಾಡುತ್ತಾರೆ..!
ವಾಸ್ತು ಪ್ರಕಾರ ಪಶ್ಚಿಮ ದಿಕ್ಕನ್ನು ಆಹಾರಕ್ಕೆ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಪಶ್ಚಿಮಾಭಿಮುಖವಾಗಿರುವ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ಮೇಲೆ ಸಾಲ ಹೆಚ್ಚಾಗುತ್ತದೆ. ನೀವು ನಿಯಮಿತವಾಗಿ ಈ ದಿಕ್ಕಿಗೆ ಮುಖ ಮಾಡುತ್ತಿದ್ದರೆ, ನೀವು ಸಾಲದಿಂದ ಮುಕ್ತಿ ಪಡೆಯುತ್ತಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.