Vastu Tips : ಬಂದ್ ಆದ ಗಡಿಯಾರವನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಇಡಬೇಡಿ!

Vastu Tips For Clock : ಡ್ರಾಯಿಂಗ್ ರೂಮ್‌ನಿಂದ ಹಿಡಿದು ಬೆಡ್‌ರೂಮ್‌ವರೆಗೆ ಸಾಮಾನ್ಯವಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಗಡಿಯಾರ ಇರುತ್ತದೆ. ಇದು ಸಮಯವನ್ನು ಹೇಳುವುದು ಮಾತ್ರವಲ್ಲದೆ ಮನೆಗೆ ಸೌಂದರ್ಯವನ್ನು ನೀಡುತ್ತದೆ. ಆದರೆ ಆಗಾಗ ಗಡಿಯಾರ ನಿಂತಾಗ ಅದರ ಕಡೆ ಗಮನ ಹರಿಸುವುದಿಲ್ಲ ಮತ್ತು ಅದನ್ನು ಹಾಗೆ ಬಿಟ್ಟು ಬಿಡುತ್ತಾರೆ. ವಾಸ್ತು ಪ್ರಕಾರ ಹೀಗೆ ಮಾಡುವುದು ಅಶುಭವೆಂದು ಹೇಳಲಾಗುತ್ತಿದೆ. 

Last Updated : Nov 30, 2022, 05:40 PM IST
  • ಸಾಮಾನ್ಯವಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಗಡಿಯಾರ ಇರುತ್ತದೆ
  • ಮನೆಯಲ್ಲಿ ಬಂದ್ ಆದ ಗಡಿಯಾರವು ಅಶುಭದ ಸಂಕೇತ
  • ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು
Vastu Tips : ಬಂದ್ ಆದ ಗಡಿಯಾರವನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಇಡಬೇಡಿ! title=

Vastu Tips For Clock : ಡ್ರಾಯಿಂಗ್ ರೂಮ್‌ನಿಂದ ಹಿಡಿದು ಬೆಡ್‌ರೂಮ್‌ವರೆಗೆ ಸಾಮಾನ್ಯವಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಗಡಿಯಾರ ಇರುತ್ತದೆ. ಇದು ಸಮಯವನ್ನು ಹೇಳುವುದು ಮಾತ್ರವಲ್ಲದೆ ಮನೆಗೆ ಸೌಂದರ್ಯವನ್ನು ನೀಡುತ್ತದೆ. ಆದರೆ ಆಗಾಗ ಗಡಿಯಾರ ನಿಂತಾಗ ಅದರ ಕಡೆ ಗಮನ ಹರಿಸುವುದಿಲ್ಲ ಮತ್ತು ಅದನ್ನು ಹಾಗೆ ಬಿಟ್ಟು ಬಿಡುತ್ತಾರೆ. ವಾಸ್ತು ಪ್ರಕಾರ ಹೀಗೆ ಮಾಡುವುದು ಅಶುಭವೆಂದು ಹೇಳಲಾಗುತ್ತಿದೆ. 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಂದ್ ಆದ ಗಡಿಯಾರವು ಅಶುಭದ ಸಂಕೇತವಾಗಿದೆ. ಅಲ್ಲದೆ, ಇದು ಮುಂಬರುವ ತೊಂದರೆಗಳನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ, ಗಡಿಯಾರವನ್ನು ಸರಿಪಡಿಸಿ ಅಥವಾ ಗೋಡೆಯಿಂದ ತೆಗೆದುಹಾಕಿ. ಬಂದ್ ಆದ ಗಡಿಯಾರಕ್ಕೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳು ನಿಮಗಾಗಿ ಇಲ್ಲಿದೆ ನೋಡಿ..

ಈ ಕಾರಣಕ್ಕೆ ಮನೆಯಲ್ಲಿ ಬಂದ್ ಆದ ಗಡಿಯಾರವನ್ನು ಹಾಕಬೇಡಿ

ನಿಮ್ಮ ಮನೆಯಲ್ಲಿ ಗೋಡೆ ನೇತಾಡುವ ಗಡಿಯಾರವು ಸ್ಥಗಿತಗೊಂಡಿದ್ದರೆ ಅಥವಾ ಕೆಟ್ಟಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಬಂದ್ ಗಡಿಯಾರವನ್ನು ಮನೆಯಲ್ಲಿ ಇಡುವುದು ಅಶುಭದ ಸಂಕೇತವಾಗಿದೆ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಶಕ್ತಿ ಬರುತ್ತದೆ. 

ಬಂದ್ ಆದ ಗಡಿಯಾರದಿಂದಾಗಿ, ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ಹಣ, ಧಾನ್ಯಗಳ ಕೊರತೆ ಎದುರಾಗಲಿದೆ. ಅದಕ್ಕಾಗಿಯೇ ಬಂದ್ ಬಿದ್ದಿರುವ ಗಡಿಯಾರವನ್ನು ತಡಮಾಡದೆ ಸರಿಪಡಿಸುವುದು ಅಥವಾ ಅದನ್ನು ಮನೆಯಿಂದ ಹೊರಹಾಕುವುದು ಉತ್ತಮ. ಇದಲ್ಲದೆ, ಕೆಟ್ಟು ನಿಂತಿರುವ ಗಡಿಯಾರದಿಂದಾಗಿ, ಮನೆಯಲ್ಲಿ ರೋಗವು ನೆಲೆಸಲಿದೆ ಮತ್ತು ನಿಮ್ಮ ಬಹಳಷ್ಟು ಹಣವನ್ನು ಚಿಕಿತ್ಸೆಯ ವೆಚ್ಚದಲ್ಲಿ ಖರ್ಚು ಆಗಲಿದೆ.

ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು

ಮನೆಯಲ್ಲಿ ಗಡಿಯಾರವನ್ನು ಹಾಕುವಾಗ, ಅಪ್ಪಿತಪ್ಪಿಯೂ ಗಡಿಯಾರವನ್ನು ಬಾಗಿಲಿಗೆ ಹಾಕಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಹಾಗೆ ಮಾಡುವುದು ತೊಂದರೆಗಳನ್ನು ಆಹ್ವಾನಿಸುತ್ತದೆ ಮತ್ತು ವಾಸ್ತುವಿನಲ್ಲಿ ಅಶುಭವೆಂದು ಪರಿಗಣಿಸಲಾಗಿದೆ.

ಅಪ್ಪಿತಪ್ಪಿಯೂ ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಏಕೆಂದರೆ ದಕ್ಷಿಣ ದಿಕ್ಕನ್ನು ನಿಶ್ಚಲವೆಂದು ಪರಿಗಣಿಸಲಾಗುತ್ತದೆ ಮತ್ತು ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದು ಅಶುಭ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಪ್ರಗತಿಯನ್ನು ನಿಲ್ಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News