Vaishakh Purnima 2022 Date: ಪ್ರತಿ ತಿಂಗಳ ಕೊನೆಯ ತಿಥಿಯಂದು ಹುಣ್ಣಿಮೆ ಇರುತ್ತದೆ. ಹಿಂದೂ ಧರ್ಮದಲ್ಲಿ ಹುಣ್ಣಿಮೆ ತಿಥಿಗೆ ವಿಶೇಷ ಮಹತ್ವವಿದೆ. ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ವೈಶಾಖ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನದಂದು ವಿಷ್ಣುವನ್ನು ಪೂಜಿಸಲು ವಿಧಾನವಿದೆ. ಬುದ್ಧನು ಈ ದಿನ ಜನಿಸಿದ್ದನು ಮತ್ತು ಇದೇ ಕಾರಣದಿಂದ ವೈಶಾಖ ಹುಣ್ಣಿಮೆಯನ್ನು 'ಬುದ್ಧ ಪೂರ್ಣಿಮಾ' ಎಂದೂ ಕೂಡ ಕರೆಯಲಾಗುತ್ತದೆ. ಈ ವರ್ಷ ಮೇ 16ರಂದು ವೈಶಾಖ ಹುಣ್ಣಿಮೆ ಬರುತ್ತಿದೆ.
ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನದಂದು ಚಂದ್ರನನ್ನು ಪೂಜಿಸುವುದರಿಂದ ವ್ಯಕ್ತಿಯ ಜಾತಕದಲ್ಲಿರುವ ಚಂದ್ರನ ದೋಷದಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ವೈಶಾಖ ಮಾಸವು ವಿಷ್ಣುವಿಗೆ ಪ್ರಿಯವಾದ ಮಾಸ ಎನ್ನಲಾಗುತ್ತದೆ. ಬ್ರಹ್ಮದೇವರು ವೈಶಾಖ ಮಾಸವನ್ನು ಎಲ್ಲಾ ಹಿಂದೂ ಮಾಸಗಳಲ್ಲಿ ಅತ್ಯಂತ ಉತ್ತಮ ಮಾಸ ಎಂದು ಕರೆದಿದ್ದಾರೆ. ಈ ದಿನದಂದು ಉಪವಾಸ ಆಚರಿಸುವುದರಿಂದ ಮತ್ತು ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸುವುದರಿಂದ ಶ್ರೀ ವಿಷ್ಣು ಮತ್ತು ಮೃತ್ಯುದೇವ ಯಮರಾಜ ಪ್ರಸನ್ನನಾಗುತ್ತಾರೆ ಎಂಬುದು ಧಾರ್ಮಿಕ ನಂಬಿಕೆ.
ಈ ರೀತಿ ಯಮನನ್ನು ಪ್ರಸನ್ನಗೊಳಿಸಿ
ಯಮರಾಜನನ್ನು ಮೃತ್ಯುದೇವ ಎಂದು ಪರಿಗಣಿಸಲಾಗುತ್ತದೆ. ಯಮನನ್ನು ಸಂತುಷ್ಟಗೊಳಿಸಲು ವೈಶಾಖ ಹುಣ್ಣಿಮೆಯ ದಿನದಂದು ಉಪವಾಸ ವೃತ ಕೈಗೊಂಡು, ವಿಧಿವಿಧಾನಗಳಿಂದ ಯಮರಾಜನಿಗೆ ಪೂಜೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ನೀರು ತುಂಬಿದ ಮಡಕೆ, ಕೊಡಲಿ, ಬೀಸಣಿಗೆ, ಮಡಕೆ, ಕೊಡೆ, ತುಪ್ಪ, ಹಲಸಿನಕಾಯಿ, ಸೌತೆಕಾಯಿ, ಸಕ್ಕರೆ, ಅಕ್ಕಿ, ಉಪ್ಪು ಇತ್ಯಾದಿಗಳನ್ನು ದಾನ ಮಾಡುವುದು ಶ್ರೇಯಸ್ಕರ ಎಂದು ಭಾವಿಸಲಾಗಿದೆ. ಹೀಗೆ ಮಾಡುವುದರಿಂದ ಮುಂದಿನ ಜೀವನದಲ್ಲಿ ವ್ಯಕ್ತಿಯು ಅನುಕೂಲಕರ ಪರಿಣಾಮಗಳನ್ನು ಪಡೆಯುತ್ತಾನೆ ಎನ್ನಲಾಗಿದೆ. ಈ ದಿನದಂದು ದಾನ ಮತ್ತು ದ್ರವ್ಯ ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಅದನ್ನು ಅತ್ಯಂತ ಶುಭಕರ ಎಂದು ಪರಿಗಣಿಸಲಾಗಿದೆ. ಇದರಿಂದ ಮಹಾವಿಷ್ಣುವಿನ ಜೊತೆಗೆ ಯಮರಾಜನ ವರದಾನವು ಕೂಡ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿ ಮೃತುವಿನ ಮೇಲೆ ಜಯ ಸಾಧಿಸಬಹುದು.
ವೈಶಾಖ ಹುಣ್ಣಿಮೆಯ ಮಹತ್ವ
>> ವೈಶಾಖ ಹುಣ್ಣಿಮೆಯ ದಿನದಂದು ಚಂದ್ರನೊಂದಿಗೆ ವಿಷ್ಣುವನ್ನು ಪೂಜಿಸುವ ನಿಯಮವಿದೆ. ಈ ದಿನದಂದು ಶ್ರೀ ಹರಿಯ ಆಶೀರ್ವಾದ ಪಡೆಯಲು, ವಿಷ್ಣುವಿಗೆ ನೈವೇದ್ಯ ಅರ್ಪಿಸಿ ಮತ್ತು ಪಂಚಾಮೃತವನ್ನು ಅರ್ಪಿಸಿಬೇಕು.
>> ವೈಶಾಖ ಹುಣ್ಣಿಮೆಯ ದಿನ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ವೈಶಾಖ ಸ್ನಾನ ಅಂತ್ಯವಾಗುತ್ತದೆ.
>> ವೈಶಾಖ ಹುಣ್ಣಿಮೆಯ ದಿನ ನದಿ, ಕೊಳಗಳಲ್ಲಿ ಸ್ನಾನ ಮಾಡಬೇಕೆಂಬ ನಿಯಮವಿದೆ. ಈ ದಿನ ಸ್ನಾನ ಇತ್ಯಾದಿಗಳ ನಂತರ ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
>> ಈ ದಿನ ಯಮರಾಜನಿಗೆ ಜಲದಿಂದ ತುಂಬಿದ ಕಲಶ, ಭಕ್ಷ್ಯಗಳು ಮತ್ತು ಸಿಹಿತಿಂಡಿ ಅರ್ಪಿಸುವುದರಿಂದ ಗೋದಾನಕ್ಕೆ ಸಮಾನ ಫಲ ಪ್ರಾಪ್ತಿಯಾಗುತ್ತದೆ.
ಇದನ್ನ್ನೂ ಓದಿ-Vastu Tips: ಮನೆಯ ಈ ದಿಕ್ಕಿನ ಗೋಡೆಯ ಮೇಲೆ ಅಪ್ಪಿತಪ್ಪಿಯೂ ಕೂಡ ಗಡಿಯಾರ ಹಾಕಬೇಡಿ, ಇಲ್ದಿದ್ರೆ ಪ್ರಗತಿ ನಿಂತುಹೋಗುತ್ತದೆ
>> ಈ ದಿನ ಸಕ್ಕರೆ ಮತ್ತು ಎಳ್ಳನ್ನು ದಾನದ ರೂಪದಲ್ಲಿ ನೀಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ತಿಳಿಯದೆ ಮಾಡಿದ ಪಾಪಗಳು ನಾಶವಾಗುತ್ತವೆ. ಯಮರಾಜನನ್ನು ಈ ದಿನ ಸ್ಥಿರ ಮನಸ್ಸಿನಿಂದ ಮತ್ತು ಏಕಾಗ್ರ ಚಿತ್ತದಿಂದ ಪೂಜಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿ ಮೃತ್ಯುವಿನ ಮೇಲೆ ಜಯ ಸಾಧಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ-Health Tips: ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳನ್ನು ತಿನ್ನುವುದು ತುಂಬಾ ಅಪಾಯಕಾರಿ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.