Holi 2022 Skin Care: ಹೋಳಿ ಹಬ್ಬವು ಎಲ್ಲರಿಗೂ ವಿಶೇಷವಾಗಿರುತ್ತದೆ (holi 2022). ಮಕ್ಕಳು, ಯುವಕರು, ಮುದುಕರು ಉತ್ಸಾಹದಿಂದಲೇ ಈ ಹಬ್ಬವನ್ನು ಆಚರಿಸುತ್ತಾರೆ . ಬಣ್ಣಗಳೊಂದಿಗೆ ಆಟವಾಡುವಾಗ, ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ (Tricks to remove holi colour). ಯಾಕೆಂದರೆ ಅನೇಕ ಬಾರಿ ಈ ಬಣ್ಣಗಳಿಂದ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಮಾತ್ರವಲ್ಲ ಹೋಳಿಗೆ ಬಳಸುವ ಬಣ್ಣಗಳು ಕೂದಲಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ (Side effects of holi colour o hair). ಈ ಬಣ್ಣಗಳಿಂದಾಗಿ ಕೆಲವರ ಕೂದಲು ನಿರ್ಜೀವವಾಗುತ್ತದೆ ಮತ್ತು ಕೆಲವರ ಕೂದಲು ಒಣಗುತ್ತದೆ. ಇನ್ನು ಹೋಳಿಯ ನಂತರ ಕೂದಲಿಗೆ ಅಂಟಿಕೊಂಡಿರುವ ಬಣ್ಣವನ್ನು ತೆಗೆಯಲು ಬಹಳ ಕಷ್ಟ ಪಡಬೇಕಾಗುತ್ತದೆ. ಆದರೆ ಕೆಲವು ಸುಲಭ ವಿಧಾನಗಳನ್ನು ಬಳಸುವುದರಿಂದ ಕೂದಲಿಗೆ ಅಂಟಿಕೊಂಡಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.
ಹೌದು, ಕೆಲವು ಹೇರ್ ಪ್ಯಾಕ್ಗಳು (Hair pack) ಕೂದಲಿನಿಂದ ಹೋಳಿ ಬಣ್ಣವನ್ನು ತೆಗೆದುಹಾಕಲು ಉಪಯುಕ್ತವಾಗಿದೆ.
ತೆಂಗಿನ ಎಣ್ಣೆ ಮತ್ತು ನಿಂಬೆ :
ತೆಂಗಿನ ಎಣ್ಣೆ, ಮೊಸರು (Curd) ಮತ್ತು ನಿಂಬೆಯ ಮೂಲಕ ನೀವು ಕೂದಲಿನಿಂದ ಬಣ್ಣವನ್ನು ತೆಗೆದುಹಾಕಬಹುದು.
ಒಂದು ಬಟ್ಟಲಿನಲ್ಲಿ ನಿಂಬೆ ರಸದೊಂದಿಗೆ (Lemon juice) ಮೊಸರು ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ.
ನಂತರ ಮಿಶ್ರಣವನ್ನು ಕೆಲವು ಸೆಕೆಂಡುಗಳ ಕಾಲ ಹಾಗೇ ಇರಿಸಿ.
ಕೂದಲಿನ ಬುಡಕ್ಕೆ ಬ್ರಷ್ ಮೂಲಕ ಈ ಮಿಶ್ರಣವನ್ನು ಹಚ್ಚಿ.
ಈಗ ಮಿಶ್ರಣವನ್ನು ಕೂದಲಿಗೆ ಹಚ್ಚಿದ ನಂತರ ಅರ್ಧ ಗಂಟೆವರೆಗೆ ಬಿಡಿ.
ಈ ಮಿಶ್ರಣವು ಒಣಗಿದ ನಂತರ, ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
ಕೂದಲನ್ನು ತೊಳೆಯುವ ಸಂದರ್ಭದಲ್ಲಿ ಸೌಮ್ಯವಾದ ಶಾಂಪೂ ಕೂಡಾ ಬಳಸಬಹುದು.
ಇದನ್ನೂ ಓದಿ : Blood Pressure Range: ವಯಸ್ಸಿಗೆ ಅನುಗುಣವಾಗಿ ಮಹಿಳೆ ಮತ್ತು ಪುರುಷರ ರಕ್ತದೊತ್ತಡ ಎಷ್ಟಿರಬೇಕು!
ಈ ಹೇರ್ ಪ್ಯಾಕ್ನ ಪ್ರಯೋಜನಗಳು :
ಈ ಹೇರ್ ಪ್ಯಾಕ್ನಲ್ಲಿ ತೆಂಗಿನ ಎಣ್ಣೆಯನ್ನು (Coconut Oil) ಬಳಸುವುದರಿಂದ ಕೂದಲು ಒಣಗುವುದನ್ನು ತಡೆಯುತ್ತದೆ. ಇದಲ್ಲದೆ, ನಿಂಬೆ ಮತ್ತು ಮೊಸರು ನಿಮ್ಮ ಕೂದಲಿನಿಂದ ಹೋಳಿ ಬಣ್ಣವನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.
ಗಮನಿಸಿ : ಮೇಲೆ ತಿಳಿಸಲಾದ ವಸ್ತುಗಳು ಕೂದಲಿಗೆ ತುಂಬಾ ಉಪಯುಕ್ತವಾಗಿವೆ. ಆದರೆ ಇದರಿಂದ ಅಲರ್ಜಿ ಅಥವಾ ತುರಿಕೆಯ ಅನುಭವವಾದರೆ ಅವುಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಿ.
ಇದನ್ನೂ ಓದಿ : ಈ ಮೂರು ಅಭ್ಯಾಸಗಳಿಂದ ದೂರವಿದ್ದರೆ ಡಯಾಬಿಟೀಸ್ ಅಪಾಯ ಕಡಿಮೆಯಾಗುತ್ತದೆ
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.