ಉದ್ದನೆಯ ಕಾಂತಿಯುಕ್ತ ಕೂದಲಿಗೆ ದುಬಾರಿ ಶಾಂಪೂ ಅಲ್ಲ ಈ ಒಂದು ವಸ್ತು ಬಳಸಿ

ಬದಲಾಗುತ್ತಿರುವ ಋತುವಿನಲ್ಲಿ, ಕೂದಲು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಕೂದಲಿನ ತೇವಾಂಶ ಕಡಿಮೆಯಾದಾಗ ಹೀಗಾಗುತ್ತದೆ.  ರೇಷ್ಮೆಯಂಥಹ ಹೊಳೆಯುವ ಕೂದಲಿಗೆ  ಕೆರಾಟಿನ್ ಚಿಕಿತ್ಸೆ ಅಗತ್ಯವಾಗಿರುತ್ತದೆ.

Written by - Ranjitha R K | Last Updated : Mar 6, 2023, 12:44 PM IST
  • ಕೂದಲು ಮುಖ ಸೌಂದರ್ಯವನ್ನು ಹೆಚ್ಚಿಸುತ್ತದೆ.
  • ರೇಷ್ಮೆಯಂಥಹ ಹೊಳೆಯುವ ಕೂದಲಿಗೆ ಕೆರಾಟಿನ್ ಚಿಕಿತ್ಸೆ ಅಗತ್ಯ
  • ಕೆರಾಟಿನ್ ಚಿಕಿತ್ಸೆಯು ಬಹಳ ದುಬಾರಿ.
ಉದ್ದನೆಯ ಕಾಂತಿಯುಕ್ತ ಕೂದಲಿಗೆ ದುಬಾರಿ ಶಾಂಪೂ ಅಲ್ಲ ಈ ಒಂದು ವಸ್ತು ಬಳಸಿ  title=

ಬೆಂಗಳೂರು : ಕೂದಲು ಮುಖ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ, ಬದಲಾಗುತ್ತಿರುವ ಋತುವಿನಲ್ಲಿ, ಕೂದಲು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಕೂದಲಿನ ತೇವಾಂಶ ಕಡಿಮೆಯಾದಾಗ ಹೀಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಯಿಲ್ ಮಸಾಜ್, ಕಂಡಿಷನರ್ ಅಥವಾ ಹೇರ್ ಸ್ಪಾ ಮೊರೆ ಹೋಗಲಾಗುತ್ತದೆ. ಆದರೆ, ರೇಷ್ಮೆಯಂಥಹ ಹೊಳೆಯುವ ಕೂದಲಿಗೆ  ಕೆರಾಟಿನ್ ಚಿಕಿತ್ಸೆ ಅಗತ್ಯವಾಗಿರುತ್ತದೆ. ಕೆರಾಟಿನ್ ಚಿಕಿತ್ಸೆಯು ಬಹಳ ದುಬಾರಿ. ಹಾಗಾಗಿ ಕೆರಾಟಿನ್ ಚಿಕಿತ್ಸೆ ಅಷ್ಟು ಸುಲಭವಲ್ಲ. ಆದರೆ ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಈ ಚಿಕಿತ್ಸೆ ಪಡೆಯಬಹುದು. 

ಇಂದು ನಾವು ಆಲಿವ್ ಎಣ್ಣೆಯ ಹೇರ್ ಮಾಸ್ಕ್ ಅನ್ನು ಮನೆಯಲ್ಲಿಯೇ ಅತ್ಯಂತ ಮಿತವ್ಯಯದಲ್ಲಿ ತಯಾರಿಸುವ ವಿಧಾನವನ್ನು ತಿಳಿಸಲಿದ್ದೇವೆ. ಇದು ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ತಲೆಹೊಟ್ಟು ನಿವಾರಣೆಗೂ ಇದು ರಾಮಬಾಣ. ಇದು ನಿಮ್ಮ ಕೂದಲನ್ನು ದಟ್ಟವಾಗಿ ಬೆಳೆಯಲು ಸಹಾಯ ಮಾಡುವುದಲ್ಲದೆ, ರೇಷ್ಮೆಯಂತೆ  ನುಣುಪಾಗಿಸುವ ಕೆಲಸವನ್ನು ಕೂಡಾ ಮಾಡುತ್ತದೆ. 

ಇದನ್ನೂ ಓದಿ : ಬೇಸಿಗೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ 7 ಚಮತ್ಕಾರಿ ಪಾನೀಯಗಳಿವು

ಆಲಿವ್ ಎಣ್ಣೆಯ ಹೇರ್ ಮಾಸ್ಕ್ ತಯಾರಿಸಲು ಅಗತ್ಯವಾದ ಪದಾರ್ಥಗಳು : 
1. ಆಲಿವ್ ಎಣ್ಣೆ 4 tbsp 
2. ಜೇನುತುಪ್ಪ 4 tbsp 

ಆಲಿವ್ ಆಯಿಲ್ ಹೇರ್ ಮಾಸ್ಕ್ ತಯಾರಿಸುವುದು ಹೇಗೆ? :
1. ಆಲಿವ್  ಆಯಿಲ್ ಹೇರ್ ಮಾಸ್ಕ್ ತಯಾರಿಸಲು ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
2. ನಂತರ ಅದಕ್ಕೆ ನಾಲ್ಕು ಚಮಚ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ.
3. ನಂತರ, ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. 
 4. ಹೀಗೆ ಸಿದ್ದಪಡಿಸಿಕೊಂಡ ಆಲಿವ್ ಆಯಿಲ್ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ.  

ಇದನ್ನೂ ಓದಿ : ತೂಕ ಇಳಿಕೆಗೆ ಮಾಡಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಅದ್ಭುತ ಪಾನೀಯ!
 
ಆಲಿವ್  ಆಯಿಲ್ ಹೇರ್ ಮಾಸ್ಕ್ ಅನ್ನು ಬಳಸುವುದು  ಹೇಗೆ ? :
1.ಆಲಿವ್ ಎಣ್ಣೆಯ ಹೇರ್ ಮಾಸ್ಕ್ ಅನ್ನು  ಕೂದಲಿಗೆ ಹಚ್ಚುವ ಮೊದಲು   ಕೂದಲನ್ನು ಸರಿಯಾಗಿ  ಬಿಡಿಸಿಕೊಳ್ಳಿ. 
2. ಬ್ರಷ್ ಅಥವಾ ನಿಮ್ಮ ಕೈಗಳಿಂದ,  ಹೇರ್ ಮಾಸ್ಕ್ ಅನ್ನು ಕೂದಲಿಗೆ  ಹಚ್ಚಿ. 
3.ಹೇರ್ ಮಾಸ್ಕ್ ಅನ್ನು ಕೂದಲಿನ ಬುಡಕ್ಕೆ ಹಚ್ಚಬೇಕು ಎನ್ನುವುದು ನೆನಪಿನಲ್ಲಿರಲಿ. 
4. ಹಚ್ಚಿದ ಹೇರ್ ಮಾಸ್ಕ್ ಅನ್ನು ಕೂದಲಿನ ಮೇಲೆ ಸುಮಾರು ಅರ್ಧ  ಗಂಟೆವರೆಗೆ ಬಿಡಿ.
5. ನಂತರ ಮೈಲ್ಡ್ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.
6. ಉತ್ತಮ ಫಲಿತಾಂಶಕ್ಕಾಗಿ, ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿಯಾದರೂ  ಹಚ್ಚಿ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News