Unique Devi Temple: ಇಲ್ಲಿ ದೇವಿಗೆ ಐದು ಕಲ್ಲು ಅರ್ಪಿಸಿ ಹರಕೆ ತೀರಿಸಲಾಗುತ್ತದೆ

ಈ ದೇವಾಲಯದಲ್ಲಿ ದೇವಿಗೆ ತೆಂಗಿನಕಾಯಿ  ಅಥವಾ ಹಣ್ಣು-ಹೂವುಗಳನ್ನು ಅರ್ಪಿಸುವುದಿಲ್ಲ. ಬದಲಾಗಿ, ಇಲ್ಲಿ ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯವೇ ಬೇರೆ.

Written by - Ranjitha R K | Last Updated : Apr 2, 2021, 06:10 PM IST
  • ವನದೇವಿ ದೇವಾಲಯದಲ್ಲಿ ದೇವಿಗೆ ಅರ್ಪಿಸಲಾಗುತ್ತದೆ ಕಲ್ಲು
  • ಇಷಾರ್ಥ ಈಡೇರಿಸಲು ಅರ್ಪಿಸಲಾಗುತ್ತದೆ ಐದು ಕಲ್ಲು
  • ಹೊಲದಲ್ಲಿ ಸಿಗುವ ಕಲ್ಲನ್ನೇ ವನದೆವಿಗೆ ಅರ್ಪಿಸಬೇಕು
Unique Devi Temple: ಇಲ್ಲಿ ದೇವಿಗೆ ಐದು ಕಲ್ಲು  ಅರ್ಪಿಸಿ ಹರಕೆ ತೀರಿಸಲಾಗುತ್ತದೆ  title=
ವನದೇವಿ ದೇವಾಲಯದಲ್ಲಿ ದೇವಿಗೆ ಅರ್ಪಿಸಲಾಗುತ್ತದೆ ಕಲ್ಲು (file photo)

ನವದೆಹಲಿ: ಭಾರತದಲ್ಲಿ ಅನೇಕ ದೇವಾಲಯಗಳಿವೆ.  ಪ್ರತಿ ದೇವಾಲದಲ್ಲಿಯೂ, ದೇವರಿಗೆ ವಿವಿಧ ಬಗೆಯ ನೈವೇದ್ಯ ಅರ್ಪಿಸಲಾಗುತ್ತದೆ. ಕೋಲ್ಕತ್ತಾದಲ್ಲಿರುವ ಕಾಳಿ ಮಾತಾ ದೇವಾಲಯದಲ್ಲಿ ದೇವಿಗೆ (Devi) ಚೈನೀಸ್ ನೂಡಲ್ಸ್ ಅನ್ನು ಅರ್ಪಿಸಲಾಗುತ್ತದೆ.   ಹಾಗೆಯೇ ತಮಿಳುನಾಡಿನ ದೇವಾಲಯವೊಂದರಲ್ಲಿ ದೇವರಿಗೆ ದೋಸೆಯನ್ನು ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಇನ್ನು ಕೇರಳದ ದೇವಾಲಯವೊಂದರಲ್ಲಿ ಚಾಕಲೇಟನ್ನು ಪ್ರಸಾದವಾಗಿ ಅರ್ಪಿಸಲಾಗುತ್ತದೆ ಮತ್ತು ಭಕ್ತರಿಗೂ ಅದನ್ನೇ ವಿತರಿಸಲಾಗುತ್ತದೆ.  

ವನದೇವಿ ದೇವಾಲಯದಲ್ಲಿ  ದೇವಿಗೆ ಅರ್ಪಿಸಲಾಗುತ್ತದೆ ಕಲ್ಲು : 
 ಈ ದೇವಾಲಯದಲ್ಲಿ ದೇವಿಗೆ ತೆಂಗಿನಕಾಯಿ (Coconut) ಅಥವಾ ಹಣ್ಣು (Fruits) ಹೂವುಗಳನ್ನು ಅರ್ಪಿಸುವುದಿಲ್ಲ. ಬದಲಾಗಿ, ಇಲ್ಲಿ ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯವೇ ಬೇರೆ. ಈ ದೇವಾಲಯ ಚತ್ತೀಸ್ ಘಡದ ಬಿಲ್ಸಾಪುರದಲ್ಲಿದೆ. ಇಲ್ಲಿ ವನದೇವಿಯನ್ನು (Vana Devi) ಪೂಜಿಸಲಾಗುತ್ತದೆ. ಇಲ್ಲಿ  ಭಕ್ತರು ತಮ್ಮ ಮನೋಕಾಮನೆಗಳು ಈಡೇರಿದ ನಂತರ ದೇವಿಗೆ ಕಲ್ಲುಗಳನ್ನು ಅರ್ಪಿಸುತ್ತಾರೆ. 

ಇದನ್ನೂ ಓದಿ :  ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?

ದೇವಿಗೆ ಅರ್ಪಿಸಲಾಗುತ್ತದೆ ಐದು ಕಲ್ಲು : 
ಭಕ್ತರು ಈ ದೇವಾಲಯದಲ್ಲಿ ಹೂಗಳು ಅಥವಾ ಹೂಮಾಲೆ (Flower) ಅಥವಾ ಪೂಜಾ ಸಾಮಗ್ರಿಗಳನ್ನು ತರುವುದಿಲ್ಲ. ಬದಲಾಗಿ,  ಐದು ಕಲ್ಲುಗಳನ್ನು ತಂದು ದೇವರಿಗೆ  ಅರ್ಪಿಸುತ್ತಾರೆ. ಈ ದೇವಾಲಯದಲ್ಲಿ ಶೃದ್ಧೆಯಿಂದ ದೇವಿಗೆ ಐದು ಕಲ್ಲು (Five stone) ಅರ್ಪಿಸಿದವರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎನ್ನಲಾಗಿದೆ. ಇಲ್ಲಿ ದೇವಿಗೆ ಐದು ಕಲ್ಲುಗಳನ್ನು ಅರ್ಪಿಸಿ ತಮ್ಮ ಮನದ ಆಸೆಯನ್ನು ದೇವಿಯ (Godess) ಬಳಿ ಹೇಳಿಕೊಳ್ಳುತ್ತಾರೆ. ನಂತರ  ತಮ್ಮ ಇಷ್ಟಾರ್ಥ ಪೂರೈಕೆಯಾದ ನಂತರ ಮತ್ತೆ ದೇವಾಲಯಕ್ಕೆ ಬಂದು ಮತ್ತೊಮ್ಮೆ ಐದು ಕಲ್ಲುಗಳನ್ನು ಅರ್ಪಿಸುತ್ತಾರೆ. ಇಲ್ಲಿನ ದೇವಾಲಯದಲ್ಲಿರುವ ವನ ದೇವಿಗೆ ಯಾವುದೇ ಸಾಮಾನ್ಯ ಕಲ್ಲು ಅರ್ಪಿಸಲಾಗುವುದಿಲ್ಲ. ಬದಲಿಗೆ  ಹೊಲಗಳಲ್ಲಿ ಸಿಗುವ ಕಲ್ಲನ್ನು ಮಾತ್ರ ಅರ್ಪಿಸಲಾಗುತ್ತದೆ.

ಇದನ್ನೂ ಓದಿ :  Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News