Tuesday Remedies: ಪ್ರತಿ ಮಂಗಳವಾರ ಶ್ರೀ ಆಂಜನೇಯನ ಈ 12 ನಾಮಗಳ ಜಪ ಮಾಡಿ, ನಿಂತುಹೋದ ಕೆಲಸಗಳಲ್ಲಿಯೂ ಕಾರ್ಯಸಿದ್ಧಿ ಪ್ರಾಪ್ತಿ

Names Of Lord Hanuman - ಮಂಗಳವಾರ ಸಾಮಾನ್ಯವಾಗಿ ಶ್ರೀ ಹನುಮಂತನ (Lord Hanuman) ಪೂಜೆಯ ದಿನವೆಂದು ಪರಿಗಣಿಸಲಾಗಿದೆ. ಮಂಗಳದಲ್ಲಿ ಆತನನ್ನು ಪೂಜಿಸುವುದರಿಂದ ಪಾಪಗಳು ಮತ್ತು ದೋಷಗಳು ಹತ್ತಿರ ಸುಳಿಯುವುದಿಲ್ಲ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

Written by - Nitin Tabib | Last Updated : Sep 28, 2021, 07:18 PM IST
  • ಪ್ರತಿ ಮಂಗಳವಾರ ಶ್ರೀ ಆಂಜನೇಯನ 12 ಹೆಸರುಗಳನ್ನು ಜಪಿಸಿ.
  • ರಾಕ್ಷಸಿ ಶಕ್ತಿಗಳಿಂದ ರಕ್ಷಣೆ ಸಿಗುತ್ತ್ತದೆ.
  • ಜಪ ಮಾಡುವ ಸಮಯಕ್ಕೆ ಅನುಗುಣವಾಗಿ ಫಲಪ್ರಾಪ್ತಿ.
Tuesday Remedies: ಪ್ರತಿ ಮಂಗಳವಾರ ಶ್ರೀ ಆಂಜನೇಯನ ಈ 12 ನಾಮಗಳ ಜಪ ಮಾಡಿ, ನಿಂತುಹೋದ ಕೆಲಸಗಳಲ್ಲಿಯೂ ಕಾರ್ಯಸಿದ್ಧಿ ಪ್ರಾಪ್ತಿ title=
Names Of Lord Hanuman (File Photo)

Names Of Lord Hanuman - ಮಂಗಳವಾರ ಸಾಮಾನ್ಯವಾಗಿ ಶ್ರೀ ಹನುಮಂತನ (Lord Hanuman) ಪೂಜೆಯ ದಿನವೆಂದು ಪರಿಗಣಿಸಲಾಗಿದೆ. ಮಂಗಳದಲ್ಲಿ ಆತನನ್ನು ಪೂಜಿಸುವುದರಿಂದ ಪಾಪಗಳು ಮತ್ತು ದೋಷಗಳು ಹತ್ತಿರ ಸುಳಿಯುವುದಿಲ್ಲ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

Worship Of Lord Hanuman - ಇಂದು ನಾವು ನಿಮಗೆ ಶ್ರೀ ಆಂಜನೇಯನ 12 ನಾಮಗಳ ಕುರಿತು ಮಾಹಿತಿ ನೀಡಲಿದ್ದು, ನಾಮಗಳನ್ನು ಕುರಿತು ಲೋಕ ಹಾಗೂ ಪರಲೋಕ ಎರಡೂ ಪ್ರಾಪ್ತಿಯಾಗುತ್ತದೆ ಮತ್ತು ಮನುಷರ ನಿಂತು ಹೋದ ಕಳಸಗಳಲ್ಲಿಯೂ ಕೂಡ ಸಕಲ ಸಿದ್ಧಿ ಪ್ರಾಪ್ತಿಯಾಗುತ್ತದೆ. ಹೀಗಿರುವಾಗ ಒಂದು ವೇಳೆ ನಿಮ್ಮ ಕೆಲಸಗಳು ನಿಂತು ಹೋಗಿದ್ದರೆ, ಶ್ರೀ ಆಂಜನೇಯನ (Bajrang Bali) ಈ 12 ನಾಮಗಳ ನಿಯಮಿತ ನಾಮಸ್ಮರಣೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಪ್ರತಿ ಮಂಗಳವಾರ ಜಪಿಸಿ ಶ್ರೀ ಆಂಜನೇಯನ 12 ಮಂತ್ರಗಳು
ಆಂಜನೇಯನ 12 ಮಂತ್ರಗಳು ಕ್ರಮವಾಗಿ ಅಮಿತ ವಿಕ್ರಮ, ಉದ್ಧದಿಕ್ರಮಣ, ಸೀತಾ ಶೋಕ ವಿನಾಶನ, ಹನುಮಾನ, ಅಂಜನಿ ಸುತ, ವಾಯು ಪುತ್ರ, ಮಹಾಬಲ, ಪಿಂಗಾಕ್ಷ, ಲಕ್ಷ್ಮಣ ಪ್ರಾಣದಾತಾ, ದಶಗ್ರಿವ ದರ್ಪಹ, ರಾಮೆಶ್ಥ ಹಾಗೂ ಫಾಲ್ಗುಣ ಸಖಾಗಳಾಗಿವೆ. ಮಂಗಳವಾರ ಈ 12 ನಾಮಗಳ ನಾಮಸ್ಮರಣೆಯನ್ನು ಮಾಡುವುದರಿಂದ ಶ್ರೀ ಆಂಜನೇಯ ಪ್ರಸನ್ನನಾಗಿ ತನ್ನ ಭಕ್ತಾದಿಗಳ ಮೇಲೆ ಅಪಾರ ಕ್ರಪೆ ಹಾರಿಸುತ್ತಾನೆ ಎಂದು ನಂಬಲಾಗಿದೆ.

ರಾಕ್ಷಸಿ ಶಕ್ತಿಗಳಿಂದ ರಕ್ಷಣೆ ನೀಡುತ್ತಾನೆ ಶ್ರೀ ಆಂಜನೇಯ
ಧರ್ಮಗ್ರಂಥಗಳ ಪ್ರಕಾರ, ಬಜರಂಗ ಬಲಿಯ (ಭಗವಾನ್ ಹನುಮಾನ್) ವಿವಿಧ ಹೆಸರುಗಳನ್ನು ಜಪಿಸುವ ಮೂಲಕ, ಆತ ತನ್ನ ಭಕ್ತರನ್ನು ಎಲ್ಲಾ ಸಮಯದಲ್ಲೂ  ಋಣಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾನೆ. ಅವನು ತನ್ನ ಭಕ್ತರನ್ನು ರಾಕ್ಷಸ ಶಕ್ತಿಗಳಿಂದ ರಕ್ಷಿಸುತ್ತಾರೆ. ಭಕ್ತರು ಮಂಗಳವಾರ ಭೋಜಪತ್ರದ ಮೇಲೆ ಕೆಂಪು ಬಣ್ಣದ ಪೆನ್ನಿನಿಂದಹನುಮನ  12 ಹೆಸರುಗಳನ್ನು ಬರೆದು ತಮ್ಮ ಕುತ್ತಿಗೆಗೆ ಧರಿಸಿದರೆ, ಅವರು ಎಂದಿಗೂ ಮಾನಸಿಕ ಒತ್ತಡವನ್ನು ಅನುಭವಿಸುವುದಿಲ್ಲ ಎಂದು ನಂಬಲಾಗಿದೆ.

ಇದನ್ನೂ ಓದಿ-ಪವಿತ್ರ ತುಳಸಿ ಸೊರಗಲು ಬಿಡಬೇಡಿ, ಒಣ ತುಳಸಿ ನೀಡುತ್ತದೆ ಈ ಘಟನೆಗಳ ಮುನ್ಸೂಚನೆ

ಜಪದ ಸಮಯಾನುಸಾರ ಫಲಪ್ರಾಪ್ತಿ
ಸನಾತನ ಧರ್ಮ ಶಾಸ್ತ್ರಗಳ ಪ್ರಕಾರ, ಹನುಮನ 12 ಹೆಸರುಗಳನ್ನು ವಿವಿಧ ಸಮಯಗಳಲ್ಲಿ ಪಠಿಸುವುದರಿಂದ ವಿಭಿನ್ನ ಫಲಗಳು ಪ್ರಾಪ್ತಿಯಾಗುತ್ತವೆ. ಸಂಜೆ ಪಠಣವು ಕುಟುಂಬದ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ರಾತ್ರಿಯಲ್ಲಿ ಪಠಣವು ಎದುರಾಳಿಗಳನ್ನು ಚಿಂತೆಗೀಡು ಮಾಡಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಮಧ್ಯಾಹ್ನ ಪಠಣವು ಜನರ ಜೀವನದಲ್ಲಿ ಸಂಪತ್ತನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ-ಈ ಒಂದು ವೃತ ಹಣಕಾಸಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತದೆ, ಜೀವನಪೂರ್ತಿ ಉಳಿಯಲಿದೆ ಲಕ್ಷ್ಮೀ ಕೃಪೆ

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-ಮನುಷ್ಯನಲ್ಲಿ ಈ ಗುಣವೊಂದಿದ್ದರೆ ಸಾಕು ಬದುಕಿನ ಭಾಗ್ಯವೇ ತೆರೆಯುತ್ತದೆಯಂತೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News