Kedar Yoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಮಗು ಜನಿಸಿದಾಗ ಆ ಮಗುವಿನ ಜನ್ಮ ಜಾತಕದಲ್ಲಿ ಶುಭ ಹಾಗೂ ಅಶುಭ ಎರಡೂ ಬಗೆಯ ಯೋಗಗಳು ನಿರ್ಮಾಣಗೊಳ್ಳುತ್ತವೆ ಮತ್ತು ಆ ಯೋಗಗಳ ಪ್ರಭಾವ ಮಗುವಿನ ಜೀವನ ಹಾಗೂ ವೃತ್ತಿಜೀವನದ ಮೇಲೆ ಬೀಳುತ್ತದೆ. ಇದಲ್ಲದೆ ಯಾವ ಗ್ರಹಗಳು ಆ ಯೋಗವನ್ನು ನಿರ್ಮಿಸುತ್ತವೆಯೋ ಅವುಗಳ ದೆಸೆ ಕೂಡ ಮಗುವಿಗೆ ಬರುತ್ತವೆ ಮತ್ತು ಆ ಮಗುವಿಗೆ ಆ ಯೋಗಗಳ ಸಂಪೂರ್ಣ ಲಾಭ ಪ್ರಾಪ್ತಿಯಾಗುತ್ತದೆ. ಇಂದು ನಾವು ನಿಮಗೆ ಕೇದಾರ ಯೋಗದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅತ್ಯಂತ ಅದೃಷ್ಟವಂತರ ಕುಂಡಲಿಯಲ್ಲಿ ಈ ಯೋಗ ಇರುತ್ತದೆ. ಯಾವ ವ್ಯಕ್ತಿಯ ಜಾತಕದಲ್ಲಿ ಈ ಯೋಗವಿರುತ್ತದೆಯೋ ಆ ವ್ಯಕ್ತಿಗೆ ರಾಜಗದ್ದುಗೆ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇದರ ಜೊತೆಗೆ ಸಮಾಜದಲ್ಲಿ ಅಪಾರ ಸ್ಥಾನಮಾನ ಮನ್ನಣೆ ಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸು ಹಾಗೂ ವೈಭವ ಪ್ರಾಪ್ತಿಯಾಗುತ್ತದೆ. ಹಾಗಾದರೆ ಬನ್ನಿ ಈ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ ಮತ್ತು ಅದರ ಲಾಭಗಳೇನು ತಿಳಿದುಕೊಳ್ಳೋಣ.
ಕೇದಾರ ಯೋಗ ಹೇಗೆ ರೂಪುಗೊಳ್ಳುತ್ತದೆ?
ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ಜನ್ನ್ಮ ಜಾತಕದ 4 ಭಾವಗಳಲ್ಲಿ 7 ಗ್ರಹಗಳು ಒಟ್ಟಿಗೆ ಬಂದರೆ, ಗ್ರಹಗಳು ಯಾವುದೇ ರಾಶಿಯಲ್ಲಿರಲಿ ಅವು ಕೇದಾರ ಯೋಗ ರೂಪಿಸುತ್ತವೆ.
ಕೇದಾರ ಯೋಗದ ಲಾಭಗಳೇನು?
ಕೇದಾರ ಯೋಗವಿರುವ ವ್ಯಕ್ತಿಯ ಮೇಲೆ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಇರುತ್ತದೆ. ಜೊತೆಗೆ ವ್ಯಕ್ತಿಗೆ ಆತನ ಅದೃಷ್ಟದ ಭಾರಿ ಬೆಂಬಲ ಯಾವಾಗಲೂ ಇರುತ್ತದೆ. ಇಂತಹ ವ್ಯಕ್ತಿಗಳ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ಈ ವ್ಯಕ್ತಿಗಳು ಕಲಾ ಪ್ರೇಮಿಗಳಾಗಿರುವುದರ ಜೊತೆಗೆ ಕಲೆ ಬಲ್ಲವರು ಮತ್ತು ಅದರ ಆರಾಧಕರಾಗಿರುತ್ತಾರೆ. ಈ ವ್ಯಕ್ತಿಗಳಿಗೆ ಜೀವನದಲ್ಲಿ ಎಂದಿಗೂ ಕೂಡ ಹಣದ ಕೊರತೆ ಎದುರಾಗುವುದಿಲ್ಲ. ಅರ್ಥಾತ್ ಅವರ ಆರ್ಥಿಕ ಸ್ಥಿತಿ ತುಂಬಾ ಬಲಿಷ್ಠವಾಗಿರುತ್ತದೆ. ಈ ಜನರಿಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಸತ್ಯ ಹೇಳುವಲ್ಲಿ ಇವರು ಯಾವಾಗಲೂ ಮುಂದೆ ಇರುತ್ತಾರೆ ಮತ್ತು ಇವರು ಸುಳ್ಳು ಹೇಳುವವರನ್ನು ದ್ವೇಷಿಸುತ್ತಾರೆ.
ಭೂಮಿ-ಆಸ್ತಿಪಾಸ್ತಿಯಿಂದ ಇವರಿಗೆ ಲಾಭ ಸಿಗುತ್ತದೆ
ಕೇದಾರ ರಾಜಯೋಗ ಇರುವ ಜನರಿಗೆ ಭೂಮಿ-ಆಸ್ತಿಪಾಸ್ತಿಯಿಂದ ಅಪಾರ ಲಾಭ ಪ್ರಾಪ್ತಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಇವರು ಕೃಷಿಯಲ್ಲಿ ಸಾಧನೆ ಮಾಡುವವರಾಗಿರುತ್ತಾರೆ. ಯಾವುದೇ ಪರಿಸ್ಥಿತಿ ಬರಲಿ ಇವರು ಯಾವಾಗಲೂ ಸುಖೀ ಜೀವನ ನಡೆಸುತ್ತಾರೆ. ಮುಖದ ಮೇಲೆ ಇದ್ದಕ್ಕಿದ್ದಂತೆ ಹೇಳುವುದು ಇವರ ಜಾಯಮಾನವಾಗಿರುತ್ತದೆ. ಜನ್ಮ ಜಾತಕದಲ್ಲಿ ಈ ಯೋಗವಿರುವವರ ತರ್ಕ ಸಾಮರ್ಥ್ಯ ಉತ್ತಮವಾಗಿರುತ್ತದೆ ಮತ್ತು ಹಣ ಉಳಿತಾಯ ಮಾಡುವುದರಲ್ಲಿ ಇವರು ನಿಷ್ಣಾತರಾಗಿರುತ್ತಾರೆ.
ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.