ಮನೆಯ ಸುಖ ಶಾಂತಿ ಸಮೃದ್ದಿಯನ್ನೇ ಕಸಿದುಕೊಳ್ಳುತ್ತದೆ ಈ ಒಂದು ಸಣ್ಣ ತಪ್ಪು, ನೀವು ಮಾಡುತ್ತಿದ್ದರೆ ಇಂದೇ ತಿದ್ದಿಕೊಳ್ಳಿ

ಸದಾ ಮನೆಯಲ್ಲಿ ಕ್ಲೇಷಗಳೇ ಸಂಭವಿಸುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಪರಿಸ್ಥಿತಿಗೆ ಮನೆಯ ವಾಸ್ತು ದೋಷ  ಮತ್ತು ಶನಿ ದೋಷವೂ  ಕಾರಣವಾಗಿದೆ ಎಂದು ಹೇಳಲಾಗುತ್ತದೆ.

Written by - Ranjitha R K | Last Updated : Dec 30, 2021, 11:52 AM IST
  • ಯಾವ ಕಾರಣಕ್ಕಾಗಿ ಮನೆಯಲ್ಲಿ ಜಗಳಗಳಾಗುತ್ತವೆ
  • ವಾಸ್ತು ದೋಷವಿದ್ದರೆ ತಕ್ಷಣವೇ ಪರಿಹಾರ ಕಂಡುಕೊಳ್ಳಿ
  • ಮಾಡುವ ಒಂದು ತಪ್ಪು ಮನೆಯ ಸಂತೋಷವನ್ನೇ ಕಸಿದುಕೊಳ್ಳುತ್ತದೆ
ಮನೆಯ ಸುಖ ಶಾಂತಿ ಸಮೃದ್ದಿಯನ್ನೇ ಕಸಿದುಕೊಳ್ಳುತ್ತದೆ ಈ ಒಂದು ಸಣ್ಣ ತಪ್ಪು, ನೀವು ಮಾಡುತ್ತಿದ್ದರೆ ಇಂದೇ ತಿದ್ದಿಕೊಳ್ಳಿ   title=
VastuRemedies (file photo)

ನವದೆಹಲಿ : ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರೆ ಮನೆಯವರ ಸಂತೋಷ ಮತ್ತು ಪ್ರೀತಿ ಕೊನೆಯಾಗುತ್ತದೆ.   ಸದಾ ಮನೆಯಲ್ಲಿ ಕ್ಲೇಷಗಳೇ ಸಂಭವಿಸುತ್ತಿದ್ದರೆ, ವಾಸ್ತು ಶಾಸ್ತ್ರದ (Vastu tips) ಪ್ರಕಾರ, ಇಂತಹ ಪರಿಸ್ಥಿತಿಗೆ ಮನೆಯ ವಾಸ್ತು ದೋಷ (Vastu dosha) ಮತ್ತು ಶನಿ ದೋಷವೂ (Shani dosha) ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮನೆಯ ತೊಂದರೆಗಳನ್ನು ತೊಡೆದುಹಾಕಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹೀಗೆ ಮಾಡಿದರೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ ಮತ್ತು ಸಮೃದ್ಧಿ ಉಳಿಯುತ್ತದೆ.  

ಈ ತಪ್ಪುಗಳಾಗದಂತೆ ನೋಡಿಕೊಳ್ಳಿ :
ವಾಸ್ತು ಶಾಸ್ತ್ರದ (Vastu  Shastra) ಪ್ರಕಾರ, ಮನೆಯಲ್ಲಿ ಬೆಳಕು ಮೂಲೆ ಮೂಲೆಗೆ ತಲುಪುವ ವ್ಯವಸ್ಥೆ ಇರಬೇಕು. ಇದಕ್ಕಾಗಿ, ಇಡೀ ಮನೆಯಲ್ಲಿ ಬಲ್ಬ್‌ಗಳನ್ನು ಹಾಕಿ, ಆದರೆ ತಪ್ಪಿ ಕೂಡಾ ಫ್ಯೂಸ್ ಬಲ್ಬ್ ಹಾಕಬೇಡಿ.  ಫ್ಯೂಸ್ ಬಲ್ಬ್ ಅಥವಾ ದೋಷಪೂರಿತ ವಿದ್ಯುತ್ ಉಪಕರಣಗಳು ಮನೆ ಮಂದಿಯ ನಡುವೆ ಜಗಳ ಮತ್ತು ಉದ್ವೇಗವನ್ನು ಹೆಚ್ಚಿಸುತ್ತವೆಎಂದು ಹೇಳಲಾಗುತ್ತದೆ. ಇದಲ್ಲದೇ ಮನೆಯ ಪೂಜಾ ಗೃಹದಲ್ಲಿ (Pooja room) ಅಥವಾ ಯಾವುದೇ ಕೋಣೆಯಲ್ಲಿ ದೇವರ ಮೂರ್ತಿ ಅಥವಾ ಫೋಟೋವನ್ನು ಮುಖಾಮುಖಿಯಾಗುವಂತೆ ಇಡಬೇಡಿ. ಸಂಬಂಧ ಹಾಳು ಮಾಡಲು ಈ ಒಂದು ತಪ್ಪು ಸಾಕು. ಇದು ಮನೆಯಲ್ಲಿ ಸಾಕಷ್ಟು ಜಗಳಗಳಿಗೆ ಕಾರಣವಾಗುತ್ತದೆ. 

ಇದನ್ನೂ ಓದಿ : New Year 2022 : ಜನವರಿ1 ರಿಂದ ವರ್ಷವಿಡೀ ಇವರ ಮೇಲೆ ಇರಲಿದೆ 'ಶನಿದೇವ ದಯೆ'..!

 ಪರಿಹಾರಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ : 
ಮನೆಯಲ್ಲಿನ ಜಗಳ ನಿವಾರಣೆಗೆ ಹನುಮಂತನ ಮುಂದೆ ಪಂಚಮುಖಿ ದೀಪವನ್ನು ಹಚ್ಚಿ. ಅಲ್ಲದೆ ಅಷ್ಟಗಂಧದ ಪರಿಮಳವನ್ನು ಇಡೀ ಮನೆಯಲ್ಲಿ ಪಸರಿಸಿ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು (Positive energy) ತರುತ್ತದೆ ಮತ್ತು ಸಂತೋಷ ಮತ್ತು ಶಾಂತಿ ನೆಲೆಯಾಗುವಂತೆ ಮಾಡುತ್ತದೆ.  

ಜಗಳಗಳಿಂದಾಗಿ ನೀವು ಹೆಚ್ಚಿನ ಒತ್ತಡವನ್ನು ಅನುಭವಿಸಿದರೆ, ಸ್ನಾನದ ನೀರಿನಲ್ಲಿ ಚಿಟಿಕೆ ಕುಂಕುಮವನ್ನು ಬೆರೆಸಿ ಸ್ನಾನ ಮಾಡಿ. ಅಲ್ಲದೆ ಪೂಜೆಯ ನಂತರ ಕುಂಕುಮದ ತಿಲಕವನ್ನು ಹಚ್ಚಿ, ಹಾಗೆ ಮಾಡುವುದರಿಂದ ಪರಿಹಾರ ದೊರೆಯುತ್ತದೆ. 

ಇದನ್ನೂ ಓದಿ : ಗುರುವಿನ ರಾಶಿಯಲ್ಲಿ ಶುಕ್ರ ಸಂಕ್ರಮಣ: ಡಿ.30ರಿಂದ ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ

ಸೂಚನೆ : ಈ ಮಾಹಿತಿಯನ್ನು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯ ಆಧಾರದ ಮೇಲೆ ನೀಡಲಾಗಿದೆ. ಜೀ ಹಿಂದೂಸ್ತಾನ್ ಕನ್ನಡ ಇದನ್ನು ಪುಷ್ಟಿಕರಿಸುವುದಿಲ್ಲ  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News