Mineral Oils Can Cause Hair Fall : ಅದು ಮಹಿಳೆಯಾಗಿರಲಿ ಅಥವಾ ಪುರುಷನಾಗಿರಲಿ, ಪ್ರತಿಯೊಬ್ಬರೂ ತಮ್ಮ ಕೂದಲ ಬಗ್ಗೆ ಅತಿಯಾದ ಪ್ರೀತಿಯನ್ನು ಹೊಂದಿರುತ್ತಾರೆ. ದಟ್ಟ ಮತ್ತು ಕಾಂತಿಯುತ ಕೂದಲು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಕಳೆದ ಹಲವಾರು ದಶಕಗಳಿಂದ, ಕೂದಲು ಉದುರುವಿಕೆಯ ಸಮಸ್ಯೆಯು ಬಹಳಷ್ಟು ಹೆಚ್ಚಾಗಿದೆ. 20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬೋಳು ತಲೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೂದಲು ಇಲ್ಲ ಎನ್ನುವ ಕಾರಣಕ್ಕೆ ಅದೆಷ್ಟೋ ಮಂದಿಯ ವಿವಾಹ ವಿಳಂಬವಾಗುತ್ತಿರುವುದು ಕೂಡಾ ಸುಳ್ಳಲ್ಲ. ಇನ್ನು ಕೂದಲು ಉದುರುತ್ತಿದ್ದಂತೆಯೇ ಹುಡುಗಿಯರ ಆತ್ಮವಿಶ್ವಾಸ ಕೂಡಾ ಕುಸಿಯಲು ಆರಂಭವಾಗುತ್ತದೆ.
ಕೂದಲು ಉದುರುವುದಕ್ಕೆ ಕಾರಣ ಏನು? :
ಹಲವು ಬಾರಿ ನಾವು ಮಾಡುವ ತಪ್ಪಿನ ಕಾರಣದಿಂದಲೇ ಕೂದಲು ಉದುರಲು ಆರಂಭವಾಗುತ್ತದೆ. ಜಾಹೀರಾತುಗಳನ್ನು ನೋಡಿ ಕೈಗೆ ಸಿಕ್ಕ ಪ್ರಾಡಕ್ಟ್ ಗಳನ್ನೂ ಬಳಸುವುದು ಕೂಡಾ ಕೂದಲು ಉದುರುವಿಕೆಗೆ ಮುಖ್ಯ ಕಾರಣವಾಗಿರುತ್ತದೆ. ಇನ್ನು ಕೂದಲ ಬೆಳವಣಿಗೆಗೆ ಮತ್ತು ಕೂದಲ ಆರೈಕೆಗೆ ಎಣ್ಣೆ ಹಚ್ಚಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜೊತೆಗೆ ಯಾವ ಎಣ್ಣೆಯನ್ನು ಹಚ್ಚಬೇಕು, ಯಾವ ಎಣ್ಣೆಯನ್ನು ಹಚ್ಚಬಾರದು ಎನ್ನುವ ಮಾಹಿತಿ ಕೂಡಾ ಇರಬೇಕು. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಎಣ್ಣೆಯಿಂದ ಕೂದಲು ಬೆಳೆಯುವುದೂ ಇಲ್ಲ, ಕೂದಲು ಉದುರುವುದು ನಿಲ್ಲುವುದೂ ಇಲ್ಲ. ಇನ್ನು ಪದೇ ಪದೇ ಹೇರ್ ಆಯಿಲ್ ಬದಲಾಯಿಸುವುದು ಕೂಡಾ ಕೂದಲು ಉದುರುವ ಹಿಂದೆ ಇರುವ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ : ಮನುಷ್ಯನಿಗೆ ನಿದ್ರೆ ಏಕೆ ಬೇಕು, ಯಾವ ಸಮಯದಲ್ಲಿ ಮಲಗುವುದು ಉತ್ತಮ..! ತಪ್ಪದೇ ತಿಳಿಯಿರಿ
ಈ ಹೇರ್ ಆಯಿಲ್ ಕೂದಲಿಗೆ ಹಾನಿಕಾರಕ :
ಮಿನರಲ್ ಆಯಿಲ್ ಬೆಲೆ ಮಾರುಕಟ್ಟೆಯಲ್ಲಿ ತುಂಬಾ ಕಡಿಮೆಯಾಗಿದೆ. ಅದಕ್ಕಾಗಿಯೇ ಅನೇಕ ಜನರು ಇದನ್ನು ಬಳಸುತ್ತಾರೆ. ಆದರೆ, ಈ ಎಣ್ಣೆಯು ಭವಿಷ್ಯದಲ್ಲಿ ಕೂದಲಿನ ವಿಷಯದಲ್ಲಿ ದುಬಾರಿಯಾಗಿ ಪರಿಣಮಿಸಬಹುದು. ಇದರಿಂದ ಸ್ಕ್ಯಾಲ್ಪ್ ಗೆ ಸಾಕಷ್ಟು ಹಾನಿಯಾಗುತ್ತದೆ. ಕೂದಲ ಬೇರುಗಳು ದುರ್ಬಲಗೊಂಡು ಕೂದಲು ಉದುರುವುದಕ್ಕೆ ಆರಂಭವಾಗುತ್ತದೆ. ಹೀಗೆ ಬೇರು ದುರ್ಬಲವಾಗಿ ಕೂದಲು ಉದುರಲು ಆರಂಭಿಸಿದರೆ ಮತ್ತೆ ಅದನ್ನು ತಡೆಯುವುದು ಸುಲಭವಲ್ಲ. ಮಿನರಲ್ ಆಯಿಲ್ ರಾಸಾಯನಿಕಗಳನ್ನು ಹೊಂದಿರುತ್ತದೆ. ಹಾಗಾಗಿ ಅದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಕೂದಲಿಗೆ ಯಾವ ಎಣ್ಣೆ ಒಳ್ಳೆಯದು? :
ಸುಂದರ ದಟ್ಟ ನೀಲ ಕೇಶ ಕಾಂತಿ ಬೇಕು ಎಂದಾದರೆ ರಾಸಾಯನಿಕ ಆಧಾರಿತ ಹೇರ್ ಆಯಿಲ್ ಅನ್ನು ಬಿಟ್ಟು ನೈಸರ್ಗಿಕ ಎಣ್ಣೆಯ ಬಳಕೆ ಆರಂಭಿಸಿ. ಕೂದಲ ಆರೋಗ್ಯಕ್ಕೆ ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್, ಸಾಸಿವೆ ಎಣ್ಣೆ ಸಹಕಾರಿಯಾಗಬಹುದು.
ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.