ಶತ್ರುಗಳಿಂದ ಹುಷಾರಾಗಿರಬೇಕು ಈ ರಾಶಿಯವರು .! ಜೂನ್ 8 ರ ವೇಳೆಗೆ ಎದುರಾಗಬಹುದು ಕಂಟಕ

ನಕ್ಷತ್ರವನ್ನು ಬದಲಾಯಿಸುವ ಮೂಲಕ ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜೂನ್ 8 ರವರೆಗೆ ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನ ನಕ್ಷತ್ರಪುಂಜದ ಬದಲಾವಣೆಯು ಕೆಲವು ರಾಶಿಯವರಿಗೆ ಹಾನಿಯನ್ನುಂಟುಮಾಡುತ್ತದೆ. 

Written by - Ranjitha R K | Last Updated : May 27, 2022, 02:43 PM IST
  • ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ.
  • ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವುದರೊಂದಿಗೆ ನೌತಪ ಪ್ರಾರಂಭವಾಗಿದೆ
  • 8 ಜೂನ್ 2022 ರವರೆಗೆ ಈ ರಾಶಿಯವರು ಶತ್ರುಗಳಿಂದ ಎಚ್ಚರದಿಂದಿರಿ
ಶತ್ರುಗಳಿಂದ ಹುಷಾರಾಗಿರಬೇಕು ಈ ರಾಶಿಯವರು .! ಜೂನ್ 8 ರ ವೇಳೆಗೆ ಎದುರಾಗಬಹುದು ಕಂಟಕ title=
Sun Constellation Transit 2022 (file photo)

ನವದೆಹಲಿ : Sun Constellation Transit 2022 : ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾದರು ಅದು ವ್ಯಕ್ತಿಯ ಜಾತಕದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸೂರ್ಯನು ಮೇ 25 ರಂದು ನಕ್ಷತ್ರ ಬದಲಾಯಿಸಿದ್ದಾನೆ. ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವುದರೊಂದಿಗೆ ನೌತಪ ಪ್ರಾರಂಭವಾಗಿದೆ. ಜೂನ್ 8 ರವರೆಗೆ ಸೂರ್ಯನು ರೋಹಿಣಿ ನಕ್ಷತ್ರದಲ್ಲಿಯೇ ಇರುತ್ತಾನೆ. ಇದಕ್ಕೂ ಮೊದಲು ಸೂರ್ಯನು ಕೃತಿಕಾ ನಕ್ಷತ್ರದಲ್ಲಿದ್ದನು. ಸೂರ್ಯನ ರಾಶಿಯ ಬದಲಾವಣೆಯಂತೆ, ನಕ್ಷತ್ರಪುಂಜದ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಬೀರುತ್ತದೆ. 

8 ಜೂನ್ 2022 ರವರೆಗೆ ಈ ರಾಶಿಯವರು ಶತ್ರುಗಳಿಂದ ಎಚ್ಚರದಿಂದಿರಿ :
ಮೇಷ: ಸೂರ್ಯನ ರಾಶಿಯ ಬದಲಾವಣೆಯ ಪರಿಣಾಮವು ಮೇಷ ರಾಶಿಯವರಿಗೆ ಮಂಗಳಕರವಾಗಿರುವುದಿಲ್ಲ. ಈ ಸಮಯದಲ್ಲಿ ಮೇಷ ರಾಶಿಯ ಜನರು ಶತ್ರುಗಳಿಂದ ಜಾಗರೂಕರಾಗಿರಬೇಕು. ಶತ್ರುಗಳು ಅವರಿಗೆ ಹಾನಿ ಮಾಡಬಹುದು. ಆರ್ಥಿಕ ನಷ್ಟ ಉಂಟಾಗಬಹುದು. ಸಂಬಂಧಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಜೀವನ ಸಂಗಾತಿಯೊಂದಿಗೆ ಜಗಳ ಉಂಟಾಗಬಹುದು. 

ಇದನ್ನೂ ಓದಿ : Astro Tips: ಈ ರೀತಿಯ ಕೆಲಸಗಳನ್ನು ಮಾಡಿದರೆ ಜಾತಕದ ಶುಭ ಗ್ರಹಗಳು ಕೂಡ ಅಶುಭ ಫಲಿತಾಂಶ ನೀಡುತ್ತವೆ

ಮಕರ ರಾಶಿ : ಮಕರ ರಾಶಿಯ ಜನರು ಸೂರ್ಯನ ರಾಶಿಯ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಈ ರಾಶಿಯ ಜನರು ವ್ಯಾಪಾರಸ್ಥರಾಗಿರಲಿ ಅಥವಾ ಉದ್ಯೋಗಸ್ಥರಾಗಿರಲಿ, ಬಹಳ ಎಚ್ಚರಿಕೆಯಿಂದ ಇರಬೇಕು. ಶತ್ರುಗಳ ಕಾಟ ಹೆಚ್ಚಾಗಲಿದೆ. ಯಾವುದೇ ಯೋಜನೆ ಹಾಕುವುದಿದ್ದರೂ ಶತ್ರುಗಳಿಗೆ ತಿಳಿಯದಂತೆ  ಬುದ್ಧಿವಂತಿಕೆಯಿಂದ ಮಾಡಿ.  ಈ ಸಮಯದಲ್ಲಿ, ಕಡಿಮೆ ಮಾತನಾಡಿ ಮತ್ತು ಹೆಚ್ಚು ಕೆಲಸ ಮಾಡಿ. 

ಮೀನ: ಸೂರ್ಯನ ರಾಶಿಯ ಬದಲಾವಣೆಯ ಪರಿಣಾಮವು ಮೀನ ರಾಶಿಯವರಿಗೆ ಶುಭವಾಗಿರುವುದಿಲ್ಲ. ಅವರು ವ್ಯವಹಾರವನ್ನು ಚಿಂತನಶೀಲವಾಗಿ ಮತ್ತು ಎಚ್ಚರಿಕೆಯಿಂದ ಮಾಡಬೇಕು. ವಿಶೇಷವಾಗಿ ವ್ಯಾಪಾರಿಗಳು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ದೊಡ್ಡ ನಷ್ಟ ಸಂಭವಿಸಬಹುದು. ಆದರೆ, ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ ಹೂಡಿಕೆಯಲ್ಲಿ ಜಾಗರೂಕರಾಗಿರಿ. 

ಇದನ್ನೂ ಓದಿ : Vastu Tips: ಮನೆಯ ಈ ದಿಕ್ಕಿಗೆ ಗಣಪತಿಯ ಮೂರ್ತಿ ಇಡುವುದರಿಂದ ಅದೃಷ್ಟ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News