Kundali Ashubh Yoga: ಜಾತಕದಲ್ಲಿನ ಈ ಯೋಗ ಜೀವನವನ್ನೇ ಹಾಳು ಮಾಡುತ್ತದೆ, ಇಲ್ಲಿವೆ ಪಾರಾಗುವ ಉಪಾಯ

Bad Yoga In Kundli - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಜಾತಕದ ಕೆಲ ಯೋಗಗಳು ವ್ಯಕ್ತಿಯ ಜೀವನವನ್ನು ಸುಧಾರಿಸುತ್ತವೆ. ಆದರೆ ಜಾತಕದ ಕೆಲ ಅಶುಭ ಯೋಗಗಳ ದುಷ್ಪರಿಣಾಮಗಳಿಂದ ವ್ಯಕ್ತಿಯು ನರಕಯಾತನೆ ಅನುಭವಿಸಬೇಕಾಗುತ್ತದೆ.

Written by - Nitin Tabib | Last Updated : Jan 21, 2022, 06:16 PM IST
  • ಪದೇ ಪದೇ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ.
  • ಜೀವನ ನರಕವಾಗುತ್ತದೆ.
  • ಜೀವನದಲ್ಲಿ ಸಂಕಷ್ಟ ಎದುರಾಗುತ್ತದೆ.
Kundali Ashubh Yoga: ಜಾತಕದಲ್ಲಿನ ಈ ಯೋಗ ಜೀವನವನ್ನೇ ಹಾಳು ಮಾಡುತ್ತದೆ, ಇಲ್ಲಿವೆ ಪಾರಾಗುವ ಉಪಾಯ title=
Bad Yoga In Kundli (File Photo)

ನವದೆಹಲಿ: Kundli Yoga - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಇಡೀ ಭವಿಷ್ಯವನ್ನು ಜಾತಕದಿಂದ ನಿರ್ಧರಿಸಲಾಗುತ್ತದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳು ಜಾತಕದಲ್ಲಿ ವಿವಿಧ ರೀತಿಯ ಯೋಗಗಳನ್ನು ರೂಪಿಸುತ್ತವೆ. ಅವುಗಳಲ್ಲಿ ಕೆಲವು ಶುಭ ಯೋಗಗಳಾದರೆ, ಕೆಲವು ಅಶುಭ ಯೋಗಗಳಾಗಿರುತ್ತವೆ. ಜಾತಕದಲ್ಲಿ ಶುಭ ಯೋಗಗಳ ಸಂಖ್ಯೆ ಹೆಚ್ಚಿದ್ದರೆ, ವ್ಯಕ್ತಿಯು ಶ್ರೀಮಂತನಾಗಿರುತ್ತಾನೆ ಮತ್ತು ಜೀವನದಲ್ಲಿ ಸಂತೋಷವಾಗಿರುತ್ತಾನೆ. ಮತ್ತೊಂದೆಡೆ, ಜಾತಕದಲ್ಲಿ ಅಶುಭ ಯೋಗಗಳು ಪ್ರಬಲವಾದಾಗ, ಲಕ್ಷಾಂತರ ಪ್ರಯತ್ನಗಳ ಹೊರತಾಗಿಯೂ, ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕುಂಡಲಿಯ ಯಾವ ಯೋಗವು ತೊಂದರೆಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಗ್ರಹಣ ಯೋಗ (Grahan Yoga)
ಜಾತಕದಲ್ಲಿ ಚಂದ್ರನೊಂದಿಗೆ ರಾಹು ಮತ್ತು ಕೇತು ಭೇಟಿಯಾದಾಗ ಗ್ರಹಣ ಯೋಗ ನಿರ್ಮಾಣಗೊಳ್ಳುತ್ತದೆ. ಇದೊಂದು ಅಶುಭ ಯೋಗವಾಗಿದ್ದು, ಇದರಿಂದ ಮಾನಸಿಕ ಸ್ಥಿತಿ ಹದಗೆಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಕೆಲಸ-ಉದ್ಯೋಗದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ತಪ್ಪಿಸಲು, ಆದಿತ್ಯ ಹೃದಯ ಸ್ತೋತ್ರವನ್ನು ನಿಯಮಿತವಾಗಿ ಪಠಿಸಬೇಕು.

ಚಾಂಡಾಲ ಯೋಗ (Chandal Yoga)
ಜಾತಕದಲ್ಲಿ ಗುರು ಮತ್ತು ರಾಹು ಒಟ್ಟಿಗೆ ಕುಳಿತಾಗ ಚಾಂಡಾಲ ಯೋಗ ನಿರ್ಮಾಣಗೊಳ್ಳುತ್ತದೆ. ಈ ಯೋಗದ ದುಷ್ಪರಿಣಾಮಗಳಿಂದ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಮುಕ್ತಿ ಹೊಂದಲು ಗುರುವಾರ ಹಳದಿ ವಸ್ತುಗಳನ್ನು ದಾನ ಮಾಡಬೇಕು.

ಇದನ್ನೂ ಓದಿ-ಮುಟ್ಟಿನ ಸಂದರ್ಭದಲ್ಲಿ ಗುರುವಾರದ ವೃತಾಚರಣೆ ಮಾಡಬೇಕೇ ಬೇಡವೇ ? ಈ ವಿಚಾರಗಳ ಬಗ್ಗೆ ಇರಲಿ ಗಮನ

ಅಲ್ಪಾವಧಿಯ ಯೋಗ (Alpavadhi Yoga)
ಜಾತಕದಲ್ಲಿ ದೋಷಪೂರಿತ ಗ್ರಹಗಳೊಂದಿಗೆ ಚಂದ್ರನು 6, 8 ಅಥವಾ 12 ನೇ ಸ್ಥಾನದಲ್ಲಿ ಕುಳಿತಿದ್ದರೆ, ಅಲ್ಪಾಯು ಯೋಗವು ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಈ ಯೋಗವು ರೂಪುಗೊಳ್ಳುತ್ತದೆಯೋ ಅವರ ಜೀವನದಲ್ಲಿ ಬಿಕ್ಕಟ್ಟು ಇರುತ್ತದೆ. ಇದನ್ನು ತಪ್ಪಿಸಲು, ಪ್ರತಿದಿನ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು.

ಇದನ್ನೂ ಓದಿ-Lucky Daughters : ಈ 3 ರಾಶಿಯ ಹೆಣ್ಣುಮಕ್ಕಳು ತಮ್ಮ ತಂದೆಗೆ ತುಂಬಾ ಅದೃಷ್ಟವಂತರಂತೆ!

ವಿಷ ಯೋಗ (Visha Yoga)
ಜಾತಕದಲ್ಲಿ ಶನಿ ಮತ್ತು ಚಂದ್ರನ ಸಂಯೋಜನೆಯಿಂದ ವಿಷ ಯೋಗವು ರೂಪುಗೊಳ್ಳುತ್ತದೆ. ವಿಷ ಯೋಗದಿಂದ ಮನುಷ್ಯನ ಜೀವನ ನರಕದಂತೆ ಆಗುತ್ತದೆ. ಈ ಯೋಗದ ದುಷ್ಪರಿಣಾಮಗಳನ್ನು ತಪ್ಪಿಸಲು, ಶನಿವಾರದಂದು ಅಶ್ವತ್ಥ ಮರಕ್ಕೆ ನೀರುಣಿಸಬೇಕು.

ಇದನ್ನೂ ಓದಿ-Corona In Children: ಈ ಒಂದು ತಪ್ಪು ಮಕ್ಕಳನ್ನು ಕರೋನಾ ಸೂಪರ್ ಸ್ಪ್ರೆಡರ್ ಮಾಡಬಹುದು, ಎಚ್ಚರ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News